ಬೆಂಗಳೂರು[ನ. 22]  ಕರ್ನಾಟಕ ರಾಜ್ಯ ಸರ್ಕಾರವು  2020ನೇ ಸಾಲಿನ ಸಾಮಾನ್ಯ ರಜೆ ದಿನಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಹಲವು ಹಬ್ಬಗಳು ಭಾನುವಾರ ಬಂದಿರುವುದರಿಂದ ಕೆಲ ಹಬ್ಬಗಳ ರಜೆಗೆ ಅದರಲ್ಲಿಯೇ ಸೇರಿಕೊಂಡಿದೆ,

ಕರ್ನಾಟಕ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಪರ ಕಾರ್ಯದರ್ಶಿ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್ ತ್ಯಜಿಸಲು ಅವಕಾಶ

ಗಣರಾಜ್ಯೋತ್ಸವ, ಬಸವ ಜಯಂತಿ, ಅಕ್ಷಯ ತೃತೀಯ, ಮೊಹರಂ, ಆಯುಧ ಪೂಜೆ, ಕನ್ನಡ ರಾಜ್ಯೋತ್ಸವ, ನರಕ ಚತುದರ್ಶಿ, ಗಣಪತಿ ಹಬ್ಬ ಭಾನುವಾರ ಮತ್ತು 2ನೇ, 4 ನೇ ಶನಿವಾರ ಬಂದಿದ್ದು ಅವುಗಳನ್ನು ರಜೆ ದಿನಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಸ್ಥಳೀಯ ಹಬ್ಬಗಳ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುವುದು ವಿಶೇಷ.  ಇನ್ನು ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ರಜೆ ಪಟ್ಟಿ ನೀಡಲಾಗಿದೆ.

ಲಾಂಗ್ ವೀಕೆಂಡ್‌ಗೆ ಈಗಲೇ ಪ್ಲ್ಯಾನ್ ಮಾಡಿ

ಸರ್ಕಾರಿ ರಜೆ ದಿನಗಳು
1. 15/1/2020 ಬುಧವಾರ : ಮಕರ ಸಂಕ್ರಾಂತಿ
2.  21/2/2020 ಶುಕ್ರವಾರ : ಮಹಾ ಶಿವರಾತ್ರಿ
3.  25/3/2020 ಸೋಮವಾರ : ಯುಗಾದಿ
4.  6/4/2020 ಸೋಮವಾರ :ಮಹಾವೀರ ಜಯಂತಿ
5. 10/4/2020 ಶುಕ್ರವಾರ : ಗುಡ್ ಫ್ರೈಡೇ
6.  14/4/2020 ಮಂಗಳವಾರ : ಅಂಬೇಡ್ಕರ್ ಜಯಂತಿ
7.  1/5/2020 ಶುಕ್ರವಾರ : ಕಾರ್ಮಿಕ ದಿನ
8.  25/5/2020 ಸೋಮವಾರ : ರಂಜಾನ್
9.  1/8/2020 ಶನಿವಾರ : ಬಕ್ರೀದ್
10. 15/8/2020 ಶನಿವಾರ : ಸ್ವಾತಂತ್ರ ದಿನಾಚರಣೆ
11.  17/9/2020 ಗುರುವಾರ : ಮಹಾಲಯ ಅಮಾವಾಸ್ಯೆ
12. 2/10/2020 ಶುಕ್ರವಾರ : ಗಾಂಧಿ ಜಯಂತಿ
13. 26/10/2020 ಸೋಮವಾರ : ವಿಜಯದಶಮಿ
14.  30/10/2020 ಶುಕ್ರವಾರ : ಈದ್ ಮಿಲಾದ್
15. 31/10/2020 ಶನಿವಾರ : ವಾಲ್ಮೀಕಿ ಜಯಂತಿ
16. 16/11/2020 ಸೋಮವಾರ : ಬಲಿಪಾಡ್ಯಮಿ
17. 3/12/2020 ಗುರುವಾರ : ಕನಕ ಜಯಂತಿ
18. 25/12/2020 ಶುಕ್ರವಾರ : ಕ್ರಿಸ್ ಮಸ್