ಕೊರೋನಾ ವೈರಸ್ ಕಾರಣ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಉಲ್ಬಣಿಸಿದೆ. ಹೀಗಾಗಿ ಶಾಸಕರ ವರ್ಷದ ವೇತನ ಬಳಸಲು ಸಲಹೆ ನೀಡಲಾಗಿದೆ. 100 ದಿನದಲ್ಲಿ ಅಮೆರಿಕ ಕೊರೋನಾ ಗೆದ್ದಿದ್ದಾರೆ. ಸುಶೀಲ್‌ ಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಜೊತೆ ಜೊತೆಯಲಿ ಹೊಸ ಸಂಚಿಕೆ ಇನ್ನೆಷ್ಟು ದಿನ, ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ವಾಯು ದಾಳಿ ಇನ್ನಷ್ಟು ತೀವ್ರ ಸೇರಿದಂತೆ ಮೇ.17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕೊರೋನಾದಿಂದ ತಂದೆ ಸಾವು; ಆಸ್ಪತ್ರೆಗೆ ಕಾರು ನುಗ್ಗಿಸಿ ದಾಂಧಲೆ ಮಾಡಿದ ಜನ ನಾಯಕ!...

ನಾಸಿಕ್‌ನ ಬಿಜೆಪಿ MLA ತನ್ನ ತಂದೆಯ ಸಾವಿಗೆ ಸೇಡು ತೀರಿಸಲು ಕೋವಿಡ್ ಕೇರ್ ಸೆಂಟರ್ ವಾರ್ಡ್ ಒಳಗೆ ಕಾರು ನುಗ್ಗಿಸಿ ದಾಂಧಲೆ ಮಾಡಿದ ಘಟನೆ ನಡೆದಿದೆ.

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ವಾಯು ದಾಳಿ ಇನ್ನಷ್ಟು ತೀವ್ರ!...

ಪ್ಯಾಲೆಸ್ತೀನ್‌ ಮೇಲಿನ ಆಕ್ರಮಣವನ್ನು ಇಸ್ರೇಲ್‌ ಇನ್ನಷ್ಟುತೀವ್ರಗೊಳಿಸಿದೆ. ಇಸ್ರೇಲ್‌ನ ವಾಯು ದಾಳಿಗೆ ಗಾಜಾ ನಗರದಲ್ಲಿನ ಮೂರು ಕಟ್ಟಡಗಳು ಭಾನುವಾರ ಧರಾಶಾಯಿಯಾಗಿದ್ದು, 33 ಮಂದಿ ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಲ್ಲಿ ಇಸ್ರೇಲ್‌ ನಡೆಸಿದ ಅತೀ ಭೀಕರ ವಾಯು ದಾಳಿ ಇದಾಗಿದೆ.

ಸುಶೀಲ್‌ ಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ..!...

ಇತ್ತೀಚೆಗೆ ಇಲ್ಲಿನ ಛತ್ರಾಸಾಲ್‌ ಕ್ರೀಡಾಂಗಣದಲ್ಲಿ ನಡೆದ ಗಲಾಟೆಯಲ್ಲಿ ಕುಸ್ತಿಪಟುವೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ 2 ಬಾರಿ ಒಲಿಂಪಿಕ್‌ ಪದಕ ವಿಜೇತ ಸುಶೀಲ್‌ ಕುಮಾರ್‌ ಹೆಸರು ಸಹ ತಳುಕು ಹಾಕಿಕೊಂಡಿದ್ದು, ಸುಶೀಲ್‌ ತಲೆಮರಿಸಿಕೊಂಡಿದ್ದಾರೆ. 

ಅಂತ್ಯಕ್ರಿಯೆ ವೇಳೆ ಚಟ್ಟದ ಮೇಲಿಂದ ಎದ್ದ ಅಜ್ಜಿ, ಬೆಚ್ಚಿ ಬಿದ್ದ ಜನ!...

76 ವರ್ಷದ ವೃದ್ಧೆಯೊಬ್ಬರು ಸತ್ತಿದ್ದಾರೆ ಎಂದು ಭಾವಿಸಿ ಅಂತಿಮ ಕ್ರಿಯೆಗೆ ಸಿದ್ಧತೆ ನಡೆಸಿ ಇನ್ನೇನು ಚಿತೆಗೆ ಬೆಂಕಿ ಹಚ್ಚಬೇಕು ಎನ್ನುವಷಷ್ಟರಲ್ಲಿ ಎದ್ದು ಕುಳಿತ ಘಟನೆ ವರದಿಯಾಗಿದೆ. ಇದನ್ನು ಕಂಡ ಜನರೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ.

ಜೊತೆ ಜೊತೆಯಲಿ ಹೊಸ ಸಂಚಿಕೆ ಇನ್ನೆಷ್ಟು ದಿನ?...

ಲಾಕ್‌ಡೌನ್‌ ವೇಳೆ ಜೊತೆ ಜೊತೆಯಲಿ ಹೊಸ ಸಂಚಿಕೆಗಳನ್ನು ವೀಕ್ಷಿಸಿ ವೀಕ್ಷಕರು ಸಂಭ್ರಮಿಸುತ್ತಿದ್ದಾರೆ. ಆದರೆ ಎಷ್ಟು ದಿನ ಹೊಸ ಎಪಿಸೋಡ್ಸ್ ಬರುತ್ತವೆ?

ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿದ ಈ ಹುಡುಗ ನಿಮಗೆ ಗೊತ್ತೆ?...

ಭಾರತಕ್ಕೆ ಕೋವಿಡ್ ಎದುರಿಸಲು 8.3 ಲಕ್ಷ ಕೋಟಿ ರೂಪಾಯಿಯಷ್ಟು ದೇಣಿಗೆ ನೀಡಿದ ಈ ಹುಡುಗ ಉದ್ಯಮಿ ಯಾರು?

ಕೊರೋನಾ : ಎಲ್ಲಾ ಶಾಸಕರ ವರ್ಷದ ವೇತನ ಬಳಸಿಕೊಳ್ಳಲು ಸಲಹೆ...

ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವಾಗಲೇ ಕೊರೋನಾ ಸೋಂಕು ಉಲ್ಬಣಗೊಂಡಿದೆ. ಕಳೆದೊಂದು ವರ್ಷದಿಂದ ಯಾವುದೇ ಅಭಿವೃದ್ದಿ ಕೆಲಸ ಅಗಿಲ್ಲ. ಆದ್ದರಿಂದ ಜನರ ಸಮಸ್ಯೆ ಪರಿಹಾರಕ್ಕಾಗಿ ಎಲ್ಲಾ ಶಾಸಕರು ವಿಧಾನಪರಿಷತ್ ಸದಸ್ಯರ ಒಂದು ವರ್ಷದ ವೇತನ ಬಳಸಿಕೊಳ್ಳಿ ಎಂದು ಸಾ ರಾ ಮಹೇಸ್ ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಲಹೆ ನೀಡಿದರು. 

ಸಮುದ್ರದ ಮದ್ಯದಲ್ಲಿ ಸಿಲುಕಿದ್ದ ಟಗ್‌ನಲ್ಲಿದ್ದ ಕಾರ್ಮಿಕರ ರಕ್ಷಣೆ...

ಅರಬ್ಬಿ ಸಮುದ್ರದಲ್ಲಿ ತೌಕ್ಟೆ ಚಂಡಮಾರುತದ ವೇಳೆ ಸಿಲುಕಿದ್ದ ಟಗ್ ನಲ್ಲಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. 

ನೂರು ದಿನ, ಕೊರೋನಾ ಯುದ್ಧ ಗೆದ್ದ ಅಮೆರಿಕ: ಬೈಡೆನ್ ಮಾಡಿದ ಮ್ಯಾಜಿಕ್ ಏನು?...

ಕಡೆಗೂ ಬಂದೇ ಬಿಡ್ತು ಅಮೆರಿಕಾಗೆ ಬಂತು ಬಹುದೊಡ್ಡ ದಿನ. ಚೀನಾ ವೈರಸ್‌ನಿಂದ ಮುಕ್ತವಾಯ್ತಾ ಅಮೆರಿಕಾ? ನೂರೇ ದಿನಗಳಲ್ಲಿ ವೈರಸ್‌ ಯುದ್ಧ ಗೆದ್ದಿದ್ದು ಹೇಗೆ ಜಗತ್ತಿನ ಹಿರಿಯಣ್ಣ? ಮಾಸ್ಕ್ ಬೇಕಿಲ್ಲ, ಬಾಗಿಲು ಮುಚ್ಚುವಂತಿಲ್ಲ...!,