ಸಮುದ್ರದ ಮಧ್ಯೆ ಸಿಲುಕಿದ ಟಗ್; ಕಾರ್ಮಿಕರ ರಕ್ಷಣೆ

  • ಅರಬ್ಬಿ ಸಮುದ್ರದಲ್ಲಿ ತೌಕ್ಟೆ ಚಂಡಮಾರುತದ ಅಬ್ಬರ
  • ಸಮುದ್ರದ ಮಧ್ಯದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ಇಂಡಿಯನ್ ಕೋಸ್ಟ್ ಗಾರ್ಡ್, ಇಂಡಿಯನ್ ನೇವಿ ಸಿಬ್ಬಂದಿ
  • ನಾಲ್ವರು ಕಾರ್ಮಿಕರನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಲಾಗಿದ್ದು,  ಐವರನ್ನು ಕೋಸ್ಟ್ ಗಾರ್ಡ್ ನ ಸ್ಪೀಡ್ ಬೋಟ್ ಮೂಲಕ ರಕ್ಷಣೆ 
Cyclone Tauktae Labourers Rescued From mid Of the sea  Mangaluru snr

ಮಂಗಳೂರು (ಮೇ.17): ಅರಬ್ಬಿ ಸಮುದ್ರದಲ್ಲಿ ತೌಕ್ಟೆ ಚಂಡಮಾರುತದ ವೇಳೆ  ಸಿಲುಕಿದ್ದ ಟಗ್ ನಲ್ಲಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. 

 ತೌಕ್ಟೆ ಚಂಡಮಾರುತದ ವೇಳೆ ಸಮುದ್ರದ ಮಧ್ಯದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಇಂಡಿಯನ್ ಕೋಸ್ಟ್ ಗಾರ್ಡ್, ಇಂಡಿಯನ್ ನೇವಿ ಸಿಬ್ಬಂದಿ  ದಡ ಸೇರಿಸಿದ್ದಾರೆ.

ನಾಲ್ವರು ಕಾರ್ಮಿಕರನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಲಾಗಿದ್ದು,  ಐವರನ್ನು ಕೋಸ್ಟ್ ಗಾರ್ಡ್ ನ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. 

ಚಂಡಮಾರುತದಿಂದ ಕರ್ನಾಟಕ ಪಾರು: ಭಾರೀ ಹಾನಿ ಮಾಡದೇ ಸಾಗಿದ ತೌಕ್ಟೆ!

ಮಂಗಳೂರು ಎನ್.ಎಂ.ಪಿ.ಟಿಯ ಆಸ್ಪತ್ರೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ. 

ಕಳೆದ ಎರಡು ದಿನಗಳಿಂದ ಟಗ್ ನಲ್ಲಿ ಸಮುದ್ರ ಮಧ್ಯೆ ಸಿಲುಕಿ ಆಹಾರ ನೀರು ಖಾಲಿಯಾಗಿ ಸಮಸ್ಯೆ ಎದುರಿಸುತ್ತಿದ್ದವರನ್ನು ರಕ್ಷಿಸಲಾಗಿದ್ದು,  ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

Latest Videos
Follow Us:
Download App:
  • android
  • ios