ಸೂಪರ್ ಸ್ಟಾರ್ ರಜನೀಕಾಂತ್ ತಮಿಳುನಾಡು ರಾಜಕೀಯ ಕಣಕ್ಕಿಳಿಯುವುದು ಖಚಿತವಾಗಿದೆ. ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಅರೆಸ್ಟ್ ಸಂಭವಿಸಿದೆ. ಟ್ರಂಪ್ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧ ರದ್ದು ಪಡಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಹೊಸ ರಾಜಕೀಯ ಸುಳಿವು ನೀಡಿದ್ದಾರೆ. KGF 2 ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್, ಏಕದಿನ ಸೂಪರ್ ಲೀಗ್ ಪಟ್ಟಿಯಲ್ಲಿ ಕುಸಿದ ಭಾರತ ಸೇರಿದಂತೆ ಡಿಸೆಂಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲವೆ.
ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ...
ಮದುವೆಯಾಗುವುದಕ್ಕೆ ಮತಾಂತರ ವಿಚಾರದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮುಖೇನ ಕಾನೂನು ಪಾಸ್ ಮಾಡಿತ್ತು. ಇದೀಗ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ಮೊಟ್ಟ ಮೊದಲನೆ ವ್ಯಕ್ತಿಯ ಬಂಧನವಾಗಿದೆ.
ರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ, ಮಹತ್ವದ ಮಾಹಿತಿ ಕೊಟ್ಟ ಸೂಪರ್ ಸ್ಟಾರ್!...
ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನೀಕಾಂತ್ ತಮಿಳುನಾಡು ರಾಜಕೀಯ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಬಗ್ಗೆ ಖುದ್ದು ರಜನೀಕಾಂತ್ ಟ್ವೀಟ್ ಮಾಡಿದ್ದು, ತಮುಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷ ಆರಂಭಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಡಿ.31ರಂದು ಘೋಷಣೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.
ಫಸ್ಟ್ ನೈಟ್ ದಿನವೇ ಗಂಡನಿಂದಾಯ್ತು ಮಹಾ ಯಡವಟ್ಟು : ಅರೆಸ್ಟ್ ಆದ ಪತಿರಾಯ...
ಮೊದಲ ರಾತ್ರಿ ದಿನವೇ ದಂಪತಿ ನಡುವೆ ಮಹಾ ಯಡವಟ್ಟಾಗಿದ್ದು ಇದರಿಂದ ಆಕೆ ಕೊಟ್ಟ ದೂರಿನ ಅಡಿಯನ್ನು ಆತನನ್ನು ಅರೆಸ್ಟ್ ಮಾಡಲಾಗಿದೆ
ಟ್ರಂಪ್ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧ ರದ್ದು!...
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ತಿಂಗಳ ಹಿಂದೆ ಜಾರಿಗೊಳಿಸಿದ್ದ ಎಚ್1ಬಿ ವೀಸಾ ನಿರ್ಬಂಧಗಳನ್ನು ಜಿಲ್ಲಾ ನ್ಯಾಯಾಲಯ ರದ್ದುಪಡಿಸಿದ್ದು, ಸಾವಿರಾರು ಭಾರತೀಯರ ಅಮೆರಿಕನ್ ಕನಸಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ.
ಏಕದಿನ ಸೂಪರ್ ಲೀಗ್ ಪಟ್ಟಿಯಲ್ಲಿ ಕುಸಿದ ಭಾರತ...
ಪುರುಷರ ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ ಟೇಬಲ್‌ನಲ್ಲಿ ವಿರಾಟ್ ಕೊಹ್ಲಿ ಅಂಕಗಳ ಖಾತೆ ತೆರೆದಿದೆ. ಆದರೆ ಮಂದಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗಾಗಿ ಒಂದು ಅಂಕ ಕಳೆದುಕೊಂಡಿದೆ.
KGF 2 ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್..!...
ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ
ಹೊಸ ಸುಳಿವು ನೀಡಿದ ನಿಖಿಲ್ ಕುಮಾರಸ್ವಾಮಿ...
ಮುಂದಿನ ರಾಜಕೀಯದ ಬಗ್ಗೆ ಜೆಡಿಎಸ್ ಯೂತ್ ಲೀಡರ್ ನಿಖಿಲ್ ಕುಮಾರಸ್ವಾಮಿ ಹೊಸ ಸುಳಿವೊಂದನ್ನು ನೀಡಿದ್ದಾರೆ. ಏನದು ನಿಖಿಲ್ ಮುಂದಿನ ರಾಜಕೀಯ ಸುಳಿವು..?
ಪತಂಜಲಿ, ಡಾಬರ್ ಸೇರಿ ಪ್ರಸಿದ್ಧ ಕಂಪನಿಗಳ ಜೇನುತುಪ್ಪ ಕಲಬೆರಕೆ!...
ದೇಶದ ಖ್ಯಾತನಾಮ ಬ್ರಾಂಡ್‌ಗಳು ಮಾರಾಟ ಮಾಡುವ ಜೇನುತುಪ್ಪ ಕಲಬೆರಕೆಯಾಗಿದೆ. ಈ ಜೇನುತುಪ್ಪದಲ್ಲಿ ಸಕ್ಕರೆ ಸಿರಪ್ ಮಿಶ್ರಣವಾಗಿದೆ ಎಂಬ ಆತಂಕಕಾರಿ ವಿಷಯವನ್ನು ಪರಿಸರದ ಮೇಲೆ ನಿಗಾ ಇಡುವ ‘ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್’ (ಸಿಎಸ್‌ಇ) ಸಂಸ್ಥೆ ಸಂಶೋಧಕರು ಹೇಳಿದ್ದಾರೆ.
10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!...
ಭಾರತದ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಈಗಾಗಲೇ ಹಲವು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಕೈಗೆಟುಕುವ ದರದಲ್ಲಿ, ಗರಿಷ್ಟ ಮೈಲೇಜ್, 5 ಸ್ಟಾರ್ ಸೇಫ್ಟಿ ಸೇರಿದಂತ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಪಾತ್ರವಾಗಿದೆ. ನೆಕ್ಸಾನ್ EV ಬಿಡುಗಡೆಯಾಗಿ 10 ತಿಂಗಳು ಕಳೆದಿದೆ. ಇದೀಗ ಮತ್ತೊಂದು ದಾಖಲೆ ಬರೆದಿದೆ.
ಭಾನುವಾರವೇ ಸಂಪುಟ ವಿಸ್ತರಣೆ; ಕೊನೆ ತೀರ್ಮಾನಕ್ಕೆ ಬಂದ ಬಿಎಸ್‌ವೈ!...
ಡಿಸೆಂಬರ್ 6 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆಯಾ ಎಂಬ ಮಾತು ಜೋರಾಗಿದೆ. ಮಂತ್ರಿ ಪದವಿಗಾಗಿ ಆಕಾಂಕ್ಷಿಗಳ ಒತ್ತಡ ಹೆಚ್ಚಿದೆ. ಅಧಿವೇಶನ ಆರಂಭಕ್ಕೆ ಮುನ್ನ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಯಡಿಯೂರಪ್ಪ ಪ್ಲಾನ್..
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 3, 2020, 5:12 PM IST