ಬೆಂಗಳೂರು (ಡಿ.03):  ಫಸ್ಟ್ ನೈಟ್ ನಲ್ಲಿಯೇ  ಗಂಡ ಫುಲ್ ಟೈಟ್ ಆಗಿದ್ದು ಮದುವೆಯಾದ ಹೊಸತರಲ್ಲೇ ದಂಪತಿ ನಡುವೆ ಕಿರಿಕ್ ಶುರುವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಎಲ್ ಬಿಎಸ್ ನಗರದಲ್ಲಿ ನಡೆದ ಘಟನೆ ನಡೆದಿದ್ದು ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.  ಪತ್ನಿಗೆ ಕಿರುಕುಳ ಕೊಟ್ಟ ಆರೋಪದಡಿ ಭರತ್ ಎಂಬಾತನನ್ನು ಬಂಧಿಸಲಾಗಿದೆ. 

ಒಂದು ತಿಂಗಳ ಹಿಂದೆ ಗುರು ಹಿರಿಯರು ನಿಶ್ಚಯಿಸಿದಂತೆ ವಿವಾಹ ಮಹೋತ್ಸವ ನೆರವೇರಿತ್ತು.   29/10/2020ರಂದು ವಿವಾಹ  ನಡೆದಿದ್ದು ವಿವಾಹದ ಬಳಿಕ ಫಸ್ಟ್ ನೈಟ್ ವೇಳೆ ಭರತ್ ಕುಡಿದು ಬಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. 

ಕೇರಳ - ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಎಂಟ್ರಿ ಕೊಟ್ಟ ಮಧುಮಗಳು! ...

ಈ ವೇಳೆ ಆತನ ಜೊತೆ ಇರಲು ಯುವತಿ ನಿರಾಕರಿಸಿದ್ದು,  ಮತ್ತೆ ಮರುದಿನ ಸಹ ಶೋಭನ ಮಾಡಲು ಹೋದ ವೇಳೆ ಸಹ ಮತ್ತೆ ಕುಡಿದು ಬಂದಿದ್ದಾನೆ.   ಇದರಿಂದ ಆಕೆ ಆತನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಈ ವಿಚಾರ ಮನೆಯವರಿಗೆ ತಿಳಿದಿದ್ದು ಭರತ್ ಪೋಷಕರು ಯುವತಿಗೆ ಹಿಂಸೆ ನೀಡಿದ್ದಾರೆನ್ನಲಾಗಿದೆ. 

ಮಿಲನದ ಬಳಿಕ ಹೀಗ್ ಮಾಡದಿದ್ದರೆ ಕಾಡುತ್ತೆ ಅನಾರೋಗ್ಯ! ..

ಮಾಟಮಂತ್ರ ಮಾಡಿ ಚಿತ್ರ ಹಿಂಸೆ ನೀಡಿದ್ದಾಗಿ ಆರೋಪಿಸಿದ್ದು , ಜೊತೆಗೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಅತ್ತೆ ಮಾವನು ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ಯುವತಿ ದೂರಿದ್ದಾಳೆ. 
 
ಇನ್ನು ಈ ಹಿಂದೆ ಆತನಿಗೆ ಇನ್ನೊಂದು ಮದುವೆಯಾಗಿತ್ತು. ಇದನ್ನೂ ಕೂಡ ನಮಗೆ ತಿಳಿಸದೇ ವಂಚಿಸಿದ್ದಾರೆ ಎಂದು ಎಚ್‌ಎಎಲ್ ಠಾಣೆಯಲ್ಲಿ ದೂರು ನೀಡಲಾಗಿದೆ.  

ನವೆಂಬರ್ 29/11/2020ರಂದು ಭರತ್ ವಿರುದ್ಧ ದೂರು ನೀಡಿದ್ದು ಎಚ್‌ಎಎಲ್ ಪೊಲೀಸರು ಭರತ್‌ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.