ಯಶ್‌ ಅಭಿನಯದ ‘ಕೆಜಿಎಫ್‌ 2’ ಚಿತ್ರದ ಟೀಸರ್‌ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಜನವರಿ 8ರಂದು ‘ಕೆಜಿಎಫ್‌ 2’ ಚಿತ್ರದ ಟೀಸರ್‌ ಅನಾವರಣಗೊಳ್ಳುತ್ತಿದೆ. ಈ ವಿಚಾರವನ್ನು ಖುದ್ದು ಕೆಜಿಎಫ್‌ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ತಿಳಿಸಿದ್ದಾರೆ.

ಇಲ್ಲಿಯವರೆಗೂ ಪಾರ್ಟ್‌-2 ಸಂಬಂಧಿಸಿದಂತೆ ಕೆಜಿಎಫ್‌ ತಂಡದ ಫಸ್ಟ್‌ ಲುಕ್‌ ಪೋಸ್ಟರ್‌ ಹೊರತಾಗಿ ಬೇರೆ ಏನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಯಶ್‌ ಹುಟ್ಟು ಹಬ್ಬದ ಅಂಗವಾಗಿ ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಪ್ರಭಾಸ್‌ಗೆ ಆಕ್ಷನ್‌ ಕಟ್ ಹೇಳುತ್ತಿರುವ ಪ್ರಶಾಂತ್‌ ನೀಲ್; ಇದು 'ಹೊಂಬಾಳೆ' ನಿರ್ಮಾಣ!

ಆ ಮೂಲಕ ಯಶ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಚಿತ್ರತಂಡ ಮುಂದಾಗಿದೆ. ಅಲ್ಲದೆ ಬಹುನಿರೀಕ್ಷಿತ ಚಿತ್ರದ ಟೀಸರ್‌ ಬಿಡುಗಡೆ ಆಗುತ್ತಿರುವುದು ಯಶ್‌ ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಲಿದೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು ‘ಕೆಜಿಎಫ್‌ 2’ ಚಿತ್ರದ ಟೀಸರ್‌ ಅನ್ನು ವಿಶೇಷವಾಗಿ ರೂಪಿಸಿ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ. ಸಂಜಯ್ ದತ್ ಸೇರಿದಂತೆ ಪ್ರಮುಖ ಸೆಲೆಬ್ರಿಟಿಗಳು ಕೆಜಿಎಫ್ ತಂಡ ಸೇರಿಕೊಂಡಿದ್ದು, ಚಾಪ್ಟರ್ 2 ಸಿನಿಮಾ ಇನ್ನಷ್ಟು ಕುತೂಹಲ ಸೃಷ್ಟಿಸಿದೆ.