I Am leaving bangalore ಬ್ಯುಸಿನೆಸ್‌ ಮ್ಯಾನ್ ಪರ್ಸನಲ್‌ ನೋಟ್‌ ವೈರಲ್‌

ಸಿಲಿಕಾನ್ ಸಿಟಿ ಬೆಂಗಳೂರು ಉದ್ಯಮಿಗಳಿಗೆ ಸ್ವರ್ಗ. ಈ ಸಿಟಿಯಲ್ಲಿ ಒಮ್ಮೆ ತಳವೂರಿಗೆ ಬಿಟ್ಟು ಹೋಗೋದು ಕಷ್ಟ. 14 ವರ್ಷಗಳಿಂದ ಇಲ್ಲಿಯ ನಂಟು ಬೆಳೆಸಿಕೊಂಡಿದ್ದ ಉದ್ಯಮಿಯೊಬ್ಬರು ಬೆಂಗಳೂರು ತೊರೆಯುತ್ತಿದ್ದು, ಕಾರಣ ಹೇಳಿದ್ದಾರೆ. 
 

I am leaving bangalore personal note gone viral roo

ಬೆಂಗಳೂರು (Bangalore), ಕರ್ನಾಟಕ, ಕನ್ನಡಿಗರ ಬಗ್ಗೆ ಆಗಾಗ ಚರ್ಚೆಗಳು ಆಗ್ತಾನೆ ಇರುತ್ವೆ. ಕೆಲ ದಿನಗಳ ಹಿಂದೆ ಸಿಲಿಕಾನ್ ಸಿಟಿ (Silicon City) ಬಗ್ಗೆ ಮಾತನಾಡಿದ್ದ ಉತ್ತರ ಭಾರತದ ಮಹಿಳೆಯೊಬ್ಬಳು ಕೆಲಸ ಕಳೆದುಕೊಂಡಿದ್ದಳು. ಈಗ ಬ್ಯುಸಿನೆಸ್ ಮ್ಯಾನ್ (Business Man) ಒಬ್ಬರ ಪೋಸ್ಟ್ ವೈರಲ್ ಆಗಿದೆ. 14 ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದ ಬ್ಯುಸಿನೆಸ್ ಮ್ಯಾನ್, ಪುಣೆಗೆ ಶಿಫ್ಟ್ ಆಗ್ತಿದ್ದಾರೆ. ಇದನ್ನು ತಮ್ಮ ಎಕ್ಸ್ ಖಾತೆ (X Account)ಯಲ್ಲಿ ಹಂಚಿಕೊಂಡಿರುವ ಅವರು, ಬೆಂಗಳೂರಿನ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಿದ್ದಾರೆ. ಬೆಂಗಳೂರು ಹಾಗೆ, ಹೀಗೆ ಎನ್ನುವವರು ಅವರ ಅನುಭವವನ್ನು ಓದ್ಲೇಬೇಕು.

ಬೆಂಗಳೂರಿನಿಂದ ಪುಣೆಗೆ ಹೋಗ್ತಿರುವ ಉದ್ಯಮಿ ಹೆಸರು ಉಜ್ವಲ್ ಅಸ್ಥಾನ. ಅವರು ಜಿಮ್ರಾಟ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪರ್ಸನಲ್ ನೋಟ್ ಹಂಚಿಕೊಂಡಿದ್ದಾರೆ.  ಬೆಂಗಳೂರು ತನಗೆ ಜೀವನದಲ್ಲಿ ಉತ್ತಮವಾದ ಎಲ್ಲವನ್ನೂ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಉಜ್ವಲ್ ಅಸ್ಥಾನ್ ಪರ್ಸನಲ್ ನೋಟ್ನಲ್ಲಿ ಏನಿದೆ? : ಬೆಂಗಳೂರು ಐಟಿ ಹಬ್. ದಿನ ದಿನಕ್ಕೂ ಬೆಂಗಳೂರಿಗೆ ಬರ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದ್ರ ಮಧ್ಯೆ ಕನ್ನಡಿಗರ ಚಳುವಳಿಯಿಂದಾಗಿ ವಲಸಿಗರ ವಿರೋಧ ಹೆಚ್ಚಾಗ್ತಿದೆ. ಆದ್ರ ಉಜ್ವಲ್, ಬೆಂಗಳೂರು ತೊರೆಯಲು ಇದು ಕಾರಣವಲ್ಲ. ತಮ್ಮ ವ್ಯವಹಾರಕ್ಕಾಗಿ ಉಜ್ವಲ್ ಬೆಂಗಳೂರು ಬಿಡ್ತಿದ್ದಾರೆ. ನಾನು ವಲಸಿಗನಾದ್ರೂ ಬೆಂಗಳೂರು ನನ್ನನ್ನು ಎಂದೂ ಬೇರೆಯವನಂತೆ ನೋಡಿಲ್ಲ ಎಂದು ಉಜ್ವಲ್ ಬರೆದಿದ್ದಾರೆ.

ನಾನು ಬೆಂಗಳೂರು ಬಿಟ್ಟು ಪುಣೆಗೆ ಹೋಗುತ್ತಿದ್ದೇನೆ. 14 ವರ್ಷಗಳಿಂದ ಬೆಂಗಳೂರು ನನ್ನ ಮನೆಯಾಗಿದೆ. ಈ ನಗರವು ನನ್ನ ಜೀವನದಲ್ಲಿ ನನಗೆ ಎಲ್ಲಾ ಒಳ್ಳೆಯದನ್ನು ನೀಡಿದೆ. ಮೊದಲ ಕೆಲಸ, ಮೊದಲ ವಿದೇಶಿ ಪ್ರವಾಸ, ಜೀವನ ಸಂಗಾತಿ, 2 ಯಶಸ್ವಿ ವ್ಯಾಪಾರ, ಹಣಕಾಸು, ಸ್ಟಾರ್ಟ್‌ಅಪ್‌ಗಳು, ಉತ್ತಮ ಸ್ನೇಹಿತರು, ಚಿನ್ನದ ಮೌಲ್ಯದ ನೆಟ್‌ವರ್ಕ್ ಮತ್ತು ಇನ್ನೂ ಅನೇಕವು ನನಗೆ ಬೆಂಗಳೂರಿನಲ್ಲಿ ಸಿಕ್ಕಿದೆ ಎಂದು ಅವರು ಬರೆದಿದ್ದಾರೆ. 

ಗೃಹಿಣಿಯರೇ ಇನ್ಮುಂದೆ ಆರಾಮಾಗಿ ಬಜ್ಜಿ, ಬೋಂಡಾ, ಪುರಿ ಮಾಡ್ಕೊಂಡು ಆನಂದಿಸಿ

ನಾನು ಹೊರಗಿನವನಾದ್ರೂ ಬೆಂಗಳೂರು ನನ್ನನ್ನು ಹಾಗೆ ನೋಡಿಲ್ಲ. ನಾನು ಹೊರಗಿನವ ಎಂದು ಎಂದೂ ನನಗೆ ಭಾಸವಾಗಿಲ್ಲ. ಐಷಾರಾಮಿ ಬಂಗಲೆಯಲೆಯಲ್ಲಿ ವಾಸ, ಕಾರಿನಲ್ಲಿ ಓಡಾಟ ಮಾಡ್ತಿದ್ದ ಕಾರಣ ಇದೆಲ್ಲ ಸಿಕ್ಕಿದೆ ಅಂದ್ಕೊಳ್ಬೇಡಿ. ನಾನು ಅನೇಕ ವರ್ಷ ಬಿಎಂಟಿಸಿ ಬಸ್ನಲ್ಲಿ ಓಡಾಟ ನಡೆಸಿದ್ದೇನೆ. ಆಟೋ, ಕ್ಯಾಬ್ ಬಳಸಿದ್ದೇನೆ. ನೀವು ಅಲ್ಲಿನ ಜನರೊಂದಿಗೆ ವಾಸ ಮಾಡಿದಾಗ, ಜಯನಗರದ ಬೀದಿಗಳನ್ನು ಸುತ್ತಿದಾಗ ನಿಮಗೆ ಬೆಂಗಳೂರಿನ ಅನುಭವವಾಗುತ್ತದೆ. ಬೆಂಗಳೂರು ನಗರವಲ್ಲ, ಸುಂದರ ಅನುಭವ ಎಂಬುದು ನಿಮಗೆ ಗೊತ್ತಾಗುತ್ತದೆ. ಪುಣೆಯಲ್ಲಿ ಮನೆ ಮಾಡಲು ನಾನು ಉತ್ಸುಕನಾಗಿದ್ದೇನೆ. ಆದ್ರೆ ಬೆಂಗಳೂರಿಗೆ ಮರಳಿ ಬಂದಾಗ ಅಲ್ಲಿನ ಬೀದಿಗಳನ್ನು ಸುತ್ತುತ್ತೇನೆ ಎಂದು ಉಜ್ವಲ್ ಬರೆದಿದ್ದಾರೆ. ಅಷ್ಟೇ ಅಲ್ಲ, ಒಂದು ಕಮೆಂಟ್ ಗೆ ಪ್ರತಿಕ್ರಿಯೆ ನೀಡಿದ ಉಜ್ವಲ್, ಪುಣೆಯಲ್ಲೂ ಈ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದೇನೆ. ಸರಿಯಾದ ಜನರಿಗೆ ಸಂಬಳ ಅಡ್ಡಿಯಾಗುವುದಿಲ್ಲ. ನಾವು ಚೆನ್ನಾಗಿ ಬಂಡವಾಳ ಹಾಕಿದ್ದೇವೆ. ಉನ್ನತ ಏಜೆನ್ಸಿಗಳು, ಮಾಜಿ ಸಂಸ್ಥಾಪಕರು, ಸ್ಥಾಪಕ ತಂಡದ ಸದಸ್ಯರಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

ವಿಡಿಯೋಗಳಿಲ್ಲದೆ YouTube ನಿಂದ ಹಣ ಗಳಿಸುವುದು ಹೇಗೆ?

ಉಜ್ವಲ್ ಈ ಪೋಸ್ಟ್ ವೈರಲ್ ಆಗಿದೆ. ಬೆಂಗಳೂರು ಹಾಗೂ ಪುಣೆಯ ಮಧ್ಯೆ ಹೋಲಿಕೆ ಶುರುವಾಗಿದೆ. ಕೆಲವರು ಪುಣೆ ಉತ್ತಮ ಸ್ಥಳ. ಅಲ್ಲಿನ ಆಹಾರ, ಹವಾಮಾನ ವಾಸಕ್ಕೆ ಯೋಗ್ಯವಾಗಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದ ಎಲ್ಲ ನಗರದಲ್ಲಿ ಉತ್ತಮ ಭಾಗವಿದೆ. ಇಲ್ಲಿ ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. 

Latest Videos
Follow Us:
Download App:
  • android
  • ios