ನವದೆಹಲಿ(ಡಿ.03): ದೇಶದ ಖ್ಯಾತನಾಮ ಬ್ರಾಂಡ್‌ಗಳು ಮಾರಾಟ ಮಾಡುವ ಜೇನುತುಪ್ಪ ಕಲಬೆರಕೆಯಾಗಿದೆ. ಈ ಜೇನುತುಪ್ಪದಲ್ಲಿ ಸಕ್ಕರೆ ಸಿರಪ್‌ ಮಿಶ್ರಣವಾಗಿದೆ ಎಂಬ ಆತಂಕಕಾರಿ ವಿಷಯವನ್ನು ಪರಿಸರದ ಮೇಲೆ ನಿಗಾ ಇಡುವ ‘ಸೆಂಟರ್‌ ಫಾರ್‌ ಸೈನ್ಸ್‌ ಆ್ಯಂಡ್‌ ಎನ್ವಿರಾನ್‌ಮೆಂಟ್‌’ (ಸಿಎಸ್‌ಇ) ಸಂಸ್ಥೆ ಸಂಶೋಧಕರು ಹೇಳಿದ್ದಾರೆ. ಆದರೆ ವರದಿ ದುರುದ್ದೇಶ ಪೂರಿತವಾಗಿದೆ. ನಾವು ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟಪ್ರಾಧಿಕಾರ ರೂಪಿಸಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿಯೇ ಜೇನುತುಪ್ಪ ಮಾರಾಟ ಮಾಡುತ್ತಿದ್ದೇವೆ ಎಂದು ಡಾಬರ್‌ ಮತ್ತು ಪತಂಜಲಿ ಸಂಸ್ಥೆಗಳು ವರದಿ ಕುರಿತು ಪ್ರತಿಕ್ರಿಯಿಸಿವೆ.

"

ವೇಯಿಟ್ ಲಾಸ್: ಆಲೋವೆರಾ, ನಿಂಬೆ, ಜೇನು ಸೇರಿ ಮಾಡುತ್ತೆ ಮ್ಯಾಜಿಕ್

ಶೇ.77ರಷ್ಟು ಕಲಬೆರಕೆ:

ಭಾರತದಲ್ಲಿ ಜೇನುತುಪ್ಪ ಮಾರಾಟ ಮಾಡುವ 13 ದೊಡ್ಡ ಹಾಗೂ ಸಣ್ಣ ಬ್ರಾಂಡ್‌ಗಳ ನಮೂನೆಯನ್ನು ಅವರು ಸಂಗ್ರಹಿಸಿದ್ದರು. ಇವುಗಳ ಶುದ್ಧತೆಯನ್ನು ತಪಾಸಣೆಗೆ ಒಳಪಡಿಸಿದಾಗ ಶೇ.77ರಷ್ಟುನಮೂನೆಗಳಲ್ಲಿ ಕಲಬೆರಕೆ ಕಂಡುಬಂದಿದೆ. ಒಟ್ಟು 22 ಸ್ಯಾಂಪಲ್‌ಗಳಲ್ಲಿ 5ರಲ್ಲಿ ಮಾತ್ರ ಉತ್ತಮ ಗುಣಮಟ್ಟಕಂಡುಬಂದಿದೆ. ಡಾಬರ್‌, ಪತಂಜಲಿ, ಬೈದ್ಯನಾಥ, ಝಂಡು, ಹಿತಕಾರಿ ಹಾಗೂ ಆಪಿಸ್‌ ಹಿಮಾಲಯ- ಈ ಎಲ್ಲ ಬ್ರಾಂಡ್‌ಗಳು ತಪಾಸಣೆಯಲ್ಲಿ ಫೇಲ್‌ ಆಗಿವೆ ಎಂದು ಅಧ್ಯಯನ ಹೇಳಿದೆ.

ಈ ಜೇನುತುಪ್ಪದಲ್ಲಿ ಸಕ್ಕರೆ ಸಿರಪ್‌ ಮಿಶ್ರಣ ಕಂಡುಬಂದಿದೆ. ಚೀನಾದ ಟ್ರೇಡ್‌ ಪೋರ್ಟಲ್‌ಗಳು ಸಕ್ಕರೆ ಸಿರಪ್‌ ಪೂರೈಸುತ್ತವೆ. ದೇಶದ ಪ್ರಯೋಗಾಲಯಗಳಲ್ಲಿ ತಪಾಸಣೆಯಲ್ಲೂ ಪತ್ತೆಯಾಗದಂತ ಅಂಶಗಳನ್ನು ಆ ಸಿರಪ್‌ಗಳಲ್ಲಿ ಸೇರಿಸಲಾಗುತ್ತದೆ. ಈ ಕುರಿತು ಸ್ಟಿಂಗ್‌ ಆಪರೇಶನ್‌ ನಡೆಸಿದಾಗ ಅದು ದೃಢಪಟ್ಟಿದೆ ಎಂದು ಸಿಎಸ್‌ಇ ಮಹಾನಿರ್ದೇಶಕಿ ಸುನಿತಾ ನಾರಾಯಣ್‌ ಹೇಳಿದ್ದಾರೆ. ಆದರೆ ಕೊನೆಗೆ ಜರ್ಮನಿ ಪ್ರಯೋಗಾಲಯದಲ್ಲಿ 13 ಬ್ರಾಂಡ್‌ಗಳನ್ನು ತಪಾಸಣೆಗೆ ಒಳಪಡಿಸಿದಾಗ 8 ಬ್ರಾಂಡ್‌ಗಳಲ್ಲಿ ಕಲಬೆರಕೆ ಪತ್ತೆಯಾಗಿದೆ ಎಂದು ವರದಿ ಹೇಳಿದೆ.

ಯುರೋಪ್‌ನ ಮುದುಕಿಯರು ಸೆಕ್ಸ್‌ಗಾಗಿ ಎಲ್ಲಿ ಹೋಗುತ್ತಾರೆ ಗೊತ್ತೆ?

ಕೊರೋನಾ ಸಮಯದಲ್ಲಿ ಜೇನುತುಪ್ಪವನ್ನು ರೋಗನಿರೋಧಕವಾಗಿ ಬಳಸುವುದು ಹೆಚ್ಚಿದೆ. ಆದರೆ ಈ ಕಲಬೆರಕೆ ಜೇನುತುಪ್ಪ ಆರೋಗ್ಯಕ್ಕೆ ಮತ್ತಷ್ಟುಹಾನಿಕರ. ನಿರೋಧಕ ಶಕ್ತಿಯನ್ನು ಅದು ಕುಂದಿಸುತ್ತದೆ. ಕೇವಲ ಕಲಬೆರಕೆ ಜೇನುತುಪ್ಪದ ಬಗ್ಗೆ ಅಷ್ಟೇ ಅಲ್ಲ. ಕಲಬೆರಕೆ ಪತ್ತೆಯಾಗಲು ಸಾಧ್ಯವಾಗದ ಸಕ್ಕರೆ ಸಿರಪ್‌ ಮಿಶ್ರಣ ಮಾಡುತ್ತಿರುವುದು ಇನ್ನೂ ಆತಂಕಕಾರಿ ಎಂದು ಅವರು ಹೇಳಿದ್ದಾರೆ.