Asianet Suvarna News Asianet Suvarna News

ರಾಜ್ಯದಲ್ಲಿ ಬಿಟ್‌ಕಾಯಿನ್ ಚಂಡಮಾರುತ, ಆಯೋಧ್ಯೆ ಸ್ಫೋಟದ ಪತ್ರ ತಂದ ಆತಂಕ; ನ.10ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿದೆ. ಸಿಎಂ ತಲೆದಂಡವಾಗಲಿದೆ ಅನ್ನೋ ಆರೋವನ್ನು ಕಾಂಗ್ರೆಸ್ ಮಾಡಿದೆ. ಡಿಸೆಂಬರ್ 6 ರಂದು ಆಯೋಧ್ಯೆ ಸೇರಿ ಹಲವೆಡೆ ಸ್ಫೋಟಿಸುವ ಬೆದರಿಕೆ ಪತ್ರ ಆತಂಕ ಹೆಚ್ಚಿಸಿದೆ. ರಫೇಲ್ ಕಿಕ್‌ಬ್ಯಾಕ್ ತೂಗುಗತ್ತಿ ಇದೀಗ ಕಾಂಗ್ರೆಸ್ ಮೇಲೆ ನೇತಾಡುತ್ತಿದೆ. ರವಿಶಾಸ್ತ್ರಿಗೆ ಭಾವುಕ ವಿದಾಯ, ಹೊಸ ಸೆಲೆರಿಯಾ ಕಾರು ಬಿಡುಗಡೆ ಸೇರಿದಂತೆ ನವೆಂಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Karnataka Bitcoin fraud case to Bomblast threat in Ayohdya top 10 News of November 10 ckm
Author
Bengaluru, First Published Nov 10, 2021, 6:33 PM IST
  • Facebook
  • Twitter
  • Whatsapp

ಡಿಸೆಂಬರ್ 6ರಂದು ಅಯೋಧ್ಯೆ ಸೇರಿ ಅನೇಕ ಸ್ಥಳ ಸ್ಫೋಟಿಸುವ ಬೆದರಿಕೆ!

Karnataka Bitcoin fraud case to Bomblast threat in Ayohdya top 10 News of November 10 ckm

ಉತ್ತರ ಪ್ರದೇಶದ ಮೀರತ್ (Meerut, Uttar Pradesh) ನಗರ ಸೇರಿದಂತೆ 9 ರೈಲು ನಿಲ್ದಾಣಗಳಿಗೆ ಪತ್ರ ಕಳುಹಿಸುವ ಮೂಲಕ ಬಾಂಬ್ ಸ್ಫೋಟದ (Bomb Blast) ಬೆದರಿಕೆ ಹಾಕಲಾಗಿದೆ. ಡಿಸೆಂಬರ್ 6 ರಂದು ಅಯೋಧ್ಯೆಯ (Ayodhya) ಹನುಮಾನ್‌ಗರ್ಹಿ ಸೇರಿದಂತೆ ಹಲವಾರು ದೇವಾಲಯಗಳನ್ನು ಸ್ಫೋಟಿಸುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ

ಕಾಂಗ್ರೆಸ್‌ ಕಾಲದಲ್ಲಿ ರಫೇಲ್‌ ಕಿಕ್‌ಬ್ಯಾಕ್‌: ಬಿಜೆಪಿ ತಿರುಗೇಟು!

Karnataka Bitcoin fraud case to Bomblast threat in Ayohdya top 10 News of November 10 ckm

 ಫ್ರಾನ್ಸ್‌ನಿಂದ ರಫೇಲ್‌ ಯುದ್ಧವಿಮಾನ ಖರೀದಿಸುವಾಗ ಅಕ್ರಮ ನಡೆದಿದೆ ಎಂಬ ಫ್ರೆಂಚ್‌ ಮಾಧ್ಯಮ ವರದಿಯ ಬೆನ್ನಲ್ಲೇ, ವರದಿಯಲ್ಲಿನ ಅಂಶಗಳನ್ನು ಮುಂದಿಟ್ಟುಕೊಂಡೇ ವಿಪಕ್ಷ ಕಾಂಗ್ರೆಸ್‌ ಮೇಲೆ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಪ್ರತಿದಾಳಿ ನಡೆಸಿದೆ. 

Team India ಮುಖ್ಯ ಕೋಚ್ ರವಿಶಾಸ್ತ್ರಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಅಪ್ಪುಗೆಯ ವಿದಾಯ..!

Karnataka Bitcoin fraud case to Bomblast threat in Ayohdya top 10 News of November 10 ckm

 ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರವಿಶಾಸ್ತ್ರಿ (Ravi Shastri) ಒಪ್ಪಂದಾವಧಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಭಿಯಾನ ಅಂತ್ಯವಾಗುವುದರೊಂದಿಗೆ ಮುಕ್ತಾಯವಾಗಿದೆ. ಸೂಪರ್‌ 12 ಹಂತದಲ್ಲಿ ಭಾರತ ಪಾಲಿನ ಕೊನೆಯ ಪಂದ್ಯವಾದ ನಮೀಬಿಯಾ ವಿರುದ್ದದ ಪಂದ್ಯದ ಬಳಿಕ ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಅಪ್ಪುಗೆಯ ಮೂಲಕ ಕೋಚ್ ರವಿಶಾಸ್ತ್ರಿಯನ್ನು ಬೀಳ್ಕೊಟ್ಟಿದ್ದಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Puneeth Rajkumar: ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ ಎಂದ ನಟಿ ರಾಧಿಕಾ ಪಂಡಿತ್

Karnataka Bitcoin fraud case to Bomblast threat in Ayohdya top 10 News of November 10 ckm

ಅಪ್ಪು ಸರ್ ನೀವು ಇನ್ನು ಮುಂದೆ ಇಲ್ಲ ಎಂಬುದನ್ನು ನಮ್ಮ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಇದು ನಂಬಲಾಗದ ವಿಷಯವಾಗಿದೆ. ನೀವು ಇಲ್ಲದ ಚಿತ್ರರಂಗ ಬರಡಾಗಿದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ರಾಧಿಕಾ ಪಂಡಿತ್.

ಗರಿಷ್ಠ ಮೈಲೇಜ್, ಕನಿಷ್ಠ ಬೆಲೆ; ಹೊಚ್ಚ ಹೊಸ ಮಾರುತಿ ಸುಜುಕಿ ಸೆಲೆರಿಯೋ ಕಾರು ಲಾಂಚ್!

Karnataka Bitcoin fraud case to Bomblast threat in Ayohdya top 10 News of November 10 ckm

 ಭಾರತದಲ್ಲಿ ಹೊಚ್ಚ ಹೊಸ,  ನ್ಯೂ ಜನರೇಶನ್ ಮಾರುತಿ ಸುಜುಕಿ ಸೆಲೆರಿಯೋ(Maruti Suzuki Celerio) ಹ್ಯಾಚ್‌ಬ್ಯಾಕ್ ಕಾರು(Car) ಬಿಡುಗಡೆಯಾಗಿದೆ.

ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ: ಆರೋಪಕ್ಕೆ ಪ್ರತಿಕ್ರಿಯಿಸಲು ಬೊಮ್ಮಾಯಿ ನಿರಾಕರಣೆ

Karnataka Bitcoin fraud case to Bomblast threat in Ayohdya top 10 News of November 10 ckm

ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತದೆ. ಈ ಬಾರಿಯೂ ಬಿಜೆಪಿಯಲ್ಲಿ 3 ಸಿಎಂಗಳು ಆಗುತ್ತಾರೆ. ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿಯವರಿದ್ದಾರೆ. ಬೇರೆ ಪಕ್ಷದವರು ಭಾಗಿಯಾಗಿದರೆ ತನಿಖೆ ಮಾಡಿಸಲಿ. ತನಿಖೆಯಲ್ಲಿ ಯಾರಿದ್ದಾರೆಂದು ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

Katrina Kaif: ಮದುವೆ ನಂತ್ರ ವಿರುಷ್ಕಾ ನೆರೆಮನೆಯವರಾಗ್ತಾರೆ ಕತ್ರೀನಾ & ವಿಕ್ಕಿ

Karnataka Bitcoin fraud case to Bomblast threat in Ayohdya top 10 News of November 10 ckm

ಬಾಲಿವುಡ್ ಸೆಲೆಬ್ರಿಟಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ವದಂತಿಗಳ ಪ್ರಕಾರ ದಂಪತಿಗಳು ಈ ವರ್ಷ ಡಿಸೆಂಬರ್ ಆರಂಭದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದಾರೆ.

26 ಅನಾಥಾಶ್ರಮಗಳು, 16 ವೃದ್ಧಾಶ್ರಮ, 45 ಶಾಲೆಗಳನ್ನು ನಿರ್ವಹಿಸುತ್ತಿದ್ದರು ಅಪ್ಪು..!

Karnataka Bitcoin fraud case to Bomblast threat in Ayohdya top 10 News of November 10 ckm

ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಬರೀ ತೆರೆ ಮೇಲಿನ ಹೀರೋ ಆಗಿರಲಿಲ್ಲ, ನಿಜ ಜೀವನದಲ್ಲೂ ಅದೆಷ್ಟೋ ಮಂದಿಯ ಪಾಲಿಗೆ ಹೀರೋ ಆಗಿದ್ದರು. ದಾನ-ಧರ್ಮ ಮಾಡುವುದರಲ್ಲಿ ಅಪ್ಪಾಜಿಯನ್ನೇ ಮೀರಿಸಿದ ಮಗ. 

Follow Us:
Download App:
  • android
  • ios