Asianet Suvarna News Asianet Suvarna News

ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ: ಆರೋಪಕ್ಕೆ ಪ್ರತಿಕ್ರಿಯಿಸಲು ಬೊಮ್ಮಾಯಿ ನಿರಾಕರಣೆ

Nov 10, 2021, 3:45 PM IST
  • facebook-logo
  • twitter-logo
  • whatsapp-logo

ನವದೆಹಲಿ, (ನ.10):  ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತದೆ. ಈ ಬಾರಿಯೂ ಬಿಜೆಪಿಯಲ್ಲಿ 3 ಸಿಎಂಗಳು ಆಗುತ್ತಾರೆ. ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿಯವರಿದ್ದಾರೆ. ಬೇರೆ ಪಕ್ಷದವರು ಭಾಗಿಯಾಗಿದರೆ ತನಿಖೆ ಮಾಡಿಸಲಿ. ತನಿಖೆಯಲ್ಲಿ ಯಾರಿದ್ದಾರೆಂದು ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

Bitcoin Scam: ಬಿಟ್ ಕಾಯಿನ್ ಹಗರಣ ಸಿಎಂ ಬಲಿ ಪಡೆಯುತ್ತೆ: ಶಾಸಕ ಸ್ಫೋಟಕ ಹೇಳಿಕೆ

ಈ ಬಗ್ಗೆ  ನವದೆಹಲಿಯಲ್ಲಿರುವ ಬಸವರಾಜ ಬೊಮ್ಮಾಯಿ ಅವರನ್ನ ಮಾಧ್ಯಮಗಳು ಪ್ರಶ್ನಿಸಿದ್ರೆ, ಪ್ರಿಯಾಂಕ್ ಖರ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಿ ಎಂದು ಹೇಳುತ್ತಾ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ ತೆರಳಿದರು.