New Car Launch: ಗರಿಷ್ಠ ಮೈಲೇಜ್, ಕನಿಷ್ಠ ಬೆಲೆಯ ಹೊಸ ಮಾರುತಿ ಸುಜುಕಿ ಸೆಲೆರಿಯೋ ಮಾರುಕಟ್ಟೆಗೆ!
- ಹೊಸ ವಿನ್ಯಾಸ, ಆಕರ್ಷಕ ಲುಕ್, ಮಾರುತಿ ಸುಜುಕಿ ಸೆಲೆರಿಯಾ ಕಾರು ಬಿಡುಗಡೆ
- ನೂತನ ಸೆಲೆರಿಯೋ ಕಾರಿನ ಬೆಲೆ 4.99 ಲಕ್ಷ ರೂಪಾಯಿಯಿಂದ ಆರಂಭ
- ಗರಿಷ್ಠ ಮೈಲೇಜ್ ನೀಡುವ ಕಾರು ಅನ್ನೋ ಹೆಗ್ಗಳಿಕೆ, 26.68 kmpl
ನವದೆಹಲಿ(ನ.10): ಭಾರತದಲ್ಲಿ ಹೊಚ್ಚ ಹೊಸ, ನ್ಯೂ ಜನರೇಶನ್ ಮಾರುತಿ ಸುಜುಕಿ ಸೆಲೆರಿಯೋ(Maruti Suzuki Celerio) ಹ್ಯಾಚ್‌ಬ್ಯಾಕ್ ಕಾರು(Car) ಬಿಡುಗಡೆಯಾಗಿದೆ. ಹಾರ್ಟ್‌ಟೆಕ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸುಜುಕಿ ಸೆರಿಯೋ ಕಾರು ಅತ್ಯಾಕರ್ಷ ಲುಕ್ ಹೊಂದಿದೆ. ವಿಶೇಷ ಅಂದರೆ ಅತೀ ಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್(Mileage) ನೀಡಬಲ್ಲ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಸೆಲೆರಿಯೋ ಕಾರಿನ ಬೆಲೆ 4.99 ಲಕ್ಷ ರೂಪಾಯಿ ಬೆಲೆ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಮಾರುತಿ ಸುಜುಕಿ ಕಾರು ಭಾರತದ ಗರಿಷ್ಠ ಮೈಲೇಜ್ ನೀಡಬಲ್ಲ ಕಾರು ಅನ್ನೋ ದಾಖಲೆ ಬರೆದಿದೆ. ARAI ಸರ್ಟಿಫಿಕೇಶನ್ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 26.68 ಕಿ.ಮೀ ಮೈಲೇಜ್ ನೀಡಲಿದೆ. ಇತರ ಎಲ್ಲಾ ಕಾರುಗಳಿಗೆ ಹೋಲಿಸಿದರೆ ಇದು ಗರಿಷ್ಠ ಮೈಲೇಜ್ ಆಗಿದೆ. ಇದಕ್ಕೆ ಕಾರಣ 1.0 ಲೀಟರ್ ಡ್ಯುಯೆಲ್ ಜೆಟ್, ಡ್ಯುಯೆಲ್ VVT K10C ಎಂಜಿನ್. ಇದು ಅತ್ಯಂತ ಕಡಿಮೆ ಇಂಧನದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಗರಿಷ್ಠ ಮೈಲೇಜ್ ನೀಡುತ್ತಿದೆ.
ಮಾರುತಿ ಸುಜುಕಿ ಸೆಲೆರಿಯೋ ಕಾರಿನ ಮುಂಭಾಗ ಲುಕ್ ಸಂಪೂರ್ಣ ಬದಲಾಗಿದೆ. ಹೊಸ ವಿನ್ಯಾಸ ಗ್ರಿಲ್ ಅಳವಡಿಸಲಾಗಿದೆ. ಇದರಲ್ಲಿ ಸಿಂಗ್ ಕ್ರೋಮ್ ಬಳಸಲಾಗಿದೆ. ಹೆಡ್‌ಲ್ಯಾಪ್ಸ್, ಫಾಗ್ ಲ್ಯಾಂಪ್ಸ್ ಹಾಗೂ ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಫಾಗ್‌ಲ್ಯಾಂಪ್ಸ್ ಮೇಲ್ಬಾಗದಲ್ಲಿ ಬ್ಲಾಕ್ ಕ್ಲಾಡಿಂಗ್ ಬಳಸಲಾಗಿದೆ. ಒಟ್ಟಾರೆ ಮುಂಭಾಗದಲ್ಲಿ ಅಗ್ರೆಸ್ಸೀವ್ ಹಾಗೂ ಸ್ಪೋರ್ಟಿ ಲುಕ್ ನೂತನ ಸೆಲೆರಿಯಾ ಕಾರಿನ ಅಂದ ಹೆಚ್ಚಿಸಿದೆ. ಈ ಕಾರನ್ನು ಸುಜುಕಿ 3D ಆರ್ಗಾನಿಕ್ ಸ್ಕಲ್ಪ್‌ಟೆಡ್ ಡಿಸೈನ್ ಎಂದು ಕರೆದಿದೆ. ಹಿಂಭಾಗದಲ್ಲಿ ಡ್ರಾಪ್‌ಲೈಟ್ ಟೈಲ್ಸ್ ಲೈಟ್ಸ್ ಹೊಂದಿದೆ.
Maruti Suzuki: ಬಹು ನಿರೀಕ್ಷಿತ ಹೊಸ ತಲೆಮಾರಿನ Celerio ಬುಕಿಂಗ್ ಪ್ರಾರಂಭ!
ಹೊಸ ಕಲರಿನ ORVMs, ಜೊತೆಗೆ ಇಂಟಿಗ್ರೇಟೆಡ್ ಇಂಡಿಕೇಟರ್, 15 ಇಂಚಿನ ಅಬ್ರನ್ ಬ್ಲಾಕ್ ಅಲೋಯ್ ವೀಲ್ಸ್, ರೇರ್ ವಿಂಡ್‌ಶೀಲ್ಡ್ ವೈಪರ್ಸ್, ಬಾಡಿ ಕಲರ್ ಬಂಪರ್ ಹಾಗೂ ರಿಫ್ಲೆಕ್ಟ್ಸ್ ಹೊಂದಿದೆ. ನೂತನ ಸೆಲೆರಿಯೋ 6 ಬಣ್ಣಗಳಲ್ಲಿ ಲಭ್ಯವಿದೆ. ಹೀಗಾಗಿ ಗ್ರಾಹಕರು ತಮಗಿಷ್ಠ ಬಣ್ಣದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು.
ನೂತನ ಸೆಲೆರಿಯೋ ಕಾರಿನ ಉದ್ದ 3695 mm, ಅಗಲ 1655 mm, ಎತ್ತರ 1555 mm ಹಾಗೂ ವೀಲ್ ಬೇಲ್ 2435 mm. ಹೊರಭಾಗ ಅತ್ಯಾಕರ್ಷಕವಾಗಿದೆ. ಇನ್ನು ಒಳಭಾಗದಲ್ಲೂ ಬ್ಲಾಕ್ ಕ್ಯಾಬಿನ್ ನೀಡಲಾಗಿದೆ. ಸಂಪೂರ್ಣವಾಗಿ ಬ್ಲಾಕ್ ಡ್ಯಾಶ್‌ಬೋರ್ಡ್ ಹಾಗೂ ಇಂಟಿರಿಯರ್ ಡಿಸೈನ್ ಮಾಡಲಾಗಿದೆ. 3 ಸ್ಪೋಟ್ ಟಿಲ್ಟ್ ಅಡ್ಜಸ್ಟೇಬಲ್ ಸ್ಟೀರಿಂಗ್, ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್ ಆಡಿಯೋ ಹಾಗೂ ಟೆಲಿಫೋನ್, ದೊಡ್ಡದಾದ ಇನ್ಸ್ಟುಮೆಂಟ್ ಕ್ಲಸ್ಟರ್, ಮ್ಯಾನ್ಯುಯೆಲ್ ಏರ್ ಕಾನ್ ಸಿಸ್ಟಮ್, 12V ಚಾರ್ಜರ್, USB ಹಾಗೂ AUX ಕೇಬಲ್ ಇನ್ ಹೊಂದಿದೆ. 7 ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ ಸಿಸ್ಟಮ್, ಸ್ಮಾರ್ಟ್ ಫೋನ್ ನ್ಯಾವಿಗೇಶನ್ ಹೊಂದಿದೆ.
ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ
ಮಾರುತಿ ಸುಜುಕಿ ಸೆಲೆರಿಯೋ ಕಾರು ಎಂದಿನಂತೆ ನಾಲ್ಕು ವೇರಿಯೆಂಟ್‌ನಲ್ಲಿ ಲಭ್ಯವಿದೆ. LXI, VXI, ZXI ಹಾಗೂ ZXI+ ಎಂಬು ನಾಲ್ಕು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇನ್ನು ನೂತನ ಸೆಲೆರಿಯೋದಲ್ಲಿ ಅಟೋ ಗೇರ್ ಶಿಫ್ಟ್ ಪರಿಚಯಿಯಲಾಗಿದೆ.
LXI ಕಾರಿನ ಬೆಲೆ 4.99 ಲಕ್ಷ ರೂಪಾಯಿ. ಇನ್ನು VXI ಮ್ಯಾನ್ಯುಯೆಲ್ ಕಾರಿನ ಬೆಲೆ 5.63 ಲಕ್ಷ ರೂಪಾಯಿ ಆಗಿದ್ದರೆ ಆಟೋ ಗೇರ್ ಶಿಫ್ಟ್ 6.13 ಲಕ್ಷ ರೂಪಾಯಿ, ZXI ಮಾನ್ಯುಯೆಲ್ ಕಾರಿನ ಬೆಲೆ 5.94 ಲಕ್ಷ ರೂಪಾಯಿ ಆಗಿದ್ದರೆ, ಆಟೋಮ್ಯಾಟಿಕ್ ಕಾರಿನ ಬೆಲೆ 6.44 ಲಕ್ಷ ರೂಪಾಯಿ. ಇನ್ನು ZXI+ ಮ್ಯಾನ್ಯುಯೆಲ್ ಕಾರಿನ ಬೆಲೆ 6.44 ಲಕ್ಷ ರೂಪಾಯಿ ಆಗಿದ್ದರೆ, ಆಟೋಮ್ಯಾಟಿಕ್ ಕಾರಿನ ಬೆಲೆ 6.94 ಲಕ್ಷ ರೂಪಾಯಿ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆಯಾಗಿದೆ.
ಇತರ ಫೀಚರ್ಸ್‌ಗಳೆಂದರೆ ಪುಶ್ ಸ್ಟಾರ್ಟ್ ಬಟರ್ ಹೊಂದಿದೆ. ಇನ್ನು ಸುರಕ್ಷತೆ ಕಡೆಗೂ ಮಾರುತಿ ಸುಜುಕಿ ಗಮನ ಹರಿಸಿದೆ. ಸೆಲೆರಿಯೋ ಕಾರಿನಲ್ಲಿ 12 ಸೇಫ್ಟಿ ಫೀಚರ್ಸ್ ಸೇರಿಸಲಾಗಿದೆ. ಹಿಲ್ ಹೋಲ್ಟ್ ಅಸಿಸ್ಟ್, ಡ್ಯುಯೆಲ್ ಏರ್ ಬ್ಯಾಗ್, ABS ಬ್ರೇಕ್ EBD, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಹೈಸ್ಪೀಡ್ ಅಲರ್ಟ್, ರೇರ್ ಕ್ಯಾಮಾರ ಸೇರಿದಂತೆ ಹಲವು ಫೀಚರ್ಸ್ ಸೇರಿಸಲಾಗಿದೆ