ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣಿಸುತ್ತಿದೆ ಅನ್ನೋ ಮಾತಿಗೆ ಇದೀಗ ಮತ್ತೊಂದು ಪುಷ್ಠಿ ಸಿಕ್ಕಿದೆ. ಪ್ರಾದೇಶಿಕ ಪಕ್ಷದಿಂದ ಇದೀಗ ಮತ್ತೊರ್ವ ಮುಖಂಡ ಹೊರಕ್ಕೆ ಕಾಲಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ, ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಹೀಗೆ ಸೆ.16ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.

1) ವಿಧಾನಸಭೆ ಮಾಜಿ ಸ್ಪೀಕರ್ ರಾವ್ ಆತ್ಮಹತ್ಯೆ!

ಆಂಧ್ರಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಟಿಡಿಪಿ ನಾಯಕ ಕೊಡೆಲ ಶಿವಪ್ರಸಾದ್‌ ರಾವ್ ಹೈದರಾಬಾದ್ ನ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 72 ವರ್ಷದ ಕೊಡೆಲ ಶಿವಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾವ್ ಟಿಡಿಪಿ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲೊಬ್ಬರಾಗಿದ್ದರು. 

2) ಮಗಳನ್ನು ಚುಡಾಯಿಸಿ, ಕಿರುಕುಳ ಕೊಟ್ಟ RSS ಕಾರ್ಯಕರ್ತನನ್ನು ಕೊಂದ ತಂದೆ!


ತಂದೆಯೊಬ್ಬ ತನ್ನ ಮಗಳನ್ನು ಚುಡಾಯಿಸಿ, ಕಿರುಕುಳ ನೀಡಿದ್ದ RSS ಕಾರ್ಯಕರ್ತನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಜಫ್ಫರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 


3) 74ರಲ್ಲಿ ಮಗು ಹೆತ್ತ ವೃದ್ಧೆ: ಪತಿ, ಪತ್ನಿ ಇಬ್ಬರೂ ಐಸಿಯುನಲ್ಲಿ!

74ನೇ ವಯಸ್ಸಿನಲ್ಲಿ ಅವಳಿ ಹೆಣ್ಣುಮಕ್ಕಳನ್ನು ಹೆರುವ ಮೂಲಕ 10 ದಿನಗಳ ಹಿಂದೆ ವಿಶ್ವದ ಗಮನ ಸೆಳೆದಿದ್ದ ಆಂಧ್ರಪ್ರದೇಶದ ಮಹಿಳೆ ಎರ್ರಮಟ್ಟಿಮಂಗಯಮ್ಮ ಹಾಗೂ ಅವರ ಪತಿ ರಾಜಾರಾವ್‌ (78) ಅವರಿಗೆ ಸಂಭ್ರಮದ ಜತೆಗೆ ಸಮಸ್ಯೆಯೂ ಎದುರಾಗಿದೆ. ವಿವಾಹವಾದ 57 ವರ್ಷಗಳ ಬಳಿಕ ಕೃತಕ ಗರ್ಭಧಾರಣೆ ವಿಧಾನದ ಮೂಲಕ ಮಗು ಪಡೆದ ಸಂಭ್ರಮದಲ್ಲಿದ್ದ ಈ ದಂಪತಿ ಸದ್ಯ ಆಸ್ಪತ್ರೆಯ ತುರ್ತು ನಿಗಾ ಘಟಕ ಸೇರಿದ್ದಾರೆ.

4) ಪಂತ್‌ಗೆ ಖಡಕ್‌ ಎಚ್ಚ​ರಿಕೆ ಕೊಟ್ಟ ರವಿ ಶಾಸ್ತ್ರಿ!

ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬೇಜ​ವಾ​ಬ್ದಾರಿತನದ ಬ್ಯಾಟಿಂಗ್ ಮುಂದು​ವ​ರಿ​ಸಿ​ದರೆ ಅವ​ರಿಗೆ ಕಠಿಣ ಶಿಕ್ಷೆ ನೀಡ​ಲಾ​ಗು​ತ್ತದೆ ಎಂದು ಪ್ರಧಾನ ಕೋಚ್‌ ರವಿಶಾಸ್ತ್ರಿ ಎಚ್ಚ​ರಿಕೆ ನೀಡಿ​ದ್ದಾರೆ. 

5) ಟೀಂ ಇಂಡಿಯಾದ ಈ ಮೂವರು ಕ್ರಿಕೆಟಿಗರಿಗೆ ಮಾತ್ರ 7 ಕೋಟಿ ಸಂಬಳ!

ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಯಾಲರಿ ಪಡೆಯುತ್ತಿರುವ ಆಟಗಾರರು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಆಟಗಾರರಿಗೆ ಕೋಟಿ ಕೋಟಿ ಸಂಬಳ ನೀಡುತ್ತಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆಯಾದ ರವಿ ಶಾಸ್ತ್ರಿಗೆ 10 ಕೋಟಿ ರೂಪಾಯಿ ವೇತನ ನಿಗದಿ ಪಡಿಸಲಾಗಿದೆ. ಇನ್ನು ಆಟಗಾರರು ಕೂಡ ಕೋಟಿ ಕೋಟಿ ರೂಪಾಯಿಯಲ್ಲೇ ವೇತನ ಪಡೆಯುತ್ತಿದ್ದಾರೆ. ಆದರೆ ಭಾರತದ ಮೂವರು ಕ್ರಿಕೆಟಿಗರು ವಾರ್ಷಿಕ 7 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ.

6) ಪೈಲ್ವಾನ್ ಗೆ ಸಖತ್ ರೆಸ್ಪಾನ್ಸ್; ಧನ್ಯವಾದ ಹೇಳಿದ ಸುದೀಪ್

ಕಿಚ್ಚ ಸುದೀಪ್ ‘ಪೈಲ್ವಾನ್’ ಸಿನಿಮಾಗೆ ಎಲ್ಲಾ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಾ ಇದೆ. ಇದರಿಂದ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಫ್ಯಾನ್ಸ್ ಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ಚಿತ್ರಕ್ಕೆ ಉತ್ತಮ ರಿವ್ಯೂ ಕೊಟ್ಟ ಮಾಧ್ಯಮಗಳಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಧನ್ಯವಾದದ ವಿಡಿಯೋ ಪೋಸ್ಟ್ ಮಾಡಿದ್ದಾರೆ. 

7) ಅಯ್ಯಯ್ಯೋ.. ಇಲಿಯಾನಗೆ ಇದ್ಯಂತೆ ಗಂಭೀರ ಕಾಯಿಲೆ!

ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ನಿಂದಾಗಿ ನಿನ್ನೆ ಮೊನ್ನೆಯವರೆಗೆ ಸುದ್ದಿಯಲ್ಲಿದ್ದ ಬಹುಭಾಷಾ ನಟಿ ಇಲಿಯಾನಾ ಡಿಸೋಜಾ ಇದೀಗ ತಮಗಿರುವ ಕಾಯಿಲೆಯನ್ನು ಬಹಿರಂಗಪಡಿಸಿ ಶಾಕ್ ನೀಡಿದ್ದಾರೆ. 

8) ನಾರಾಯಣಗೌಡಗೆ ಓಪನ್ ಚಾಲೆಂಜ್ ಹಾಕಿದ KR ಪೇಟೆ ಟಿಕೆಟ್ ಆಕಾಂಕ್ಷಿ

ಜೆಡಿಎಸ್ ಮುಖಂಡ ದೇವೇಗೌಡರ ವಿರುದ್ಧ ಮಾತನಾಡಿದರೆ ಬೇರೆ ಪಕ್ಷದವರು ಗುರುತಿಸುತ್ತಾರೆ ಎಂದು ನಾರಾಯಣ ಗೌಡ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಕೃಷ್ಣೇಗೌಡ ಹೇಳಿದ್ದಾರೆ. ಕಳ್ಳನ ಮನಸ್ಸು ಒಳ ಒಳಗೆ ಎನ್ನುವಂತೆ ನಾರಾಯಣ ಗೌಡ ವರ್ತಿಸುತ್ತಿದ್ದಾರೆ. ಬೇರೆಯವರು ಸರಿ ಇಲ್ಲ ಎನ್ನುತ್ತಿದ್ದಾರೆ. ನಾನು ನಾರಾಯಣ ಗೌಡಗೆ ಓಪನ್ ಚಾಲೇಂಜ್ ಹಾಕುತ್ತೇನೆ ಎಂದು ಹೇಳಿದರು. 

9) ICICI ಗ್ರಾಹಕರಿಗೆ ಬ್ಯಾಡ್ ನ್ಯೂಸ್: ಅ.16ರಿಂದ ಪ್ರತಿ ವ್ಯವಹಾರಕ್ಕೂ ಶುಲ್ಕ!

ಐಸಿಐಸಿಐ ಬ್ಯಾಂಕಿನಲ್ಲಿ ಶೂನ್ಯ ಮೊತ್ತದ (ಜೀರೋ ಬ್ಯಾಲೆನ್ಸ್‌) ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಶಾಖೆಗೆ ಹೋಗಿ ಹಣ ಹಿಂಪಡೆದರೆ 100ರಿಂದ 125 ರು.ವರೆಗೂ ಶುಲ್ಕ ಪಾವತಿಸಬೇಕಾಗುತ್ತದೆ. ನಗದು ಸ್ವೀಕಾರ, ವಿತರಣೆ ಯಂತ್ರದಲ್ಲಿ ಗ್ರಾಹಕರು ನಡೆಸುವ ವ್ಯವಹಾರಕ್ಕೂ ಈ ಶುಲ್ಕ ಅನ್ವಯವಾಗುತ್ತದೆ. ಅ.16ರಿಂದ ಇದು ಜಾರಿಗೆ ಬರಲಿದೆ.

10) ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುವುದನ್ನು ಬದಿಗಿಟ್ಟು ದೋಸ್ತಿ ಸರ್ಕಾರದ ಹಗರಣಗಳ ತನಿಖೆಗೆ ಮುಂದಾಗಿದೆ. ಇದೀಗ ಎಚ್‌.ಡಿ.ಕುಮಾರಸ್ವಾಮಿ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಕೊಟ್ಟಿದ್ದಾರೆ ಎಂಬ ಹಗರಣದ ತನಿಖೆಗೆ ಖುದ್ದು ಸಿಎಂ ಯಡಿಯೂರಪ್ಪ ಮುಂದಾಗಿದ್ದು ಕಡತಗಳನ್ನು ತರಿಸಿಕೊಂಡಿದ್ದಾರೆ..