ಲಕ್ನೋ[ಸೆ.16]: ತಂದೆಯೊಬ್ಬ ತನ್ನ ಮಗಳನ್ನು ಚುಡಾಯಿಸಿ, ಕಿರುಕುಳ ನೀಡಿದ್ದ RSS ಕಾರ್ಯಕರ್ತನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಜಫ್ಫರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿ ಕವರ್ಪಾಲ್ 'RSS ಕಾರ್ಯಕರ್ತ ಪ್ರಮೋದ್, ಕೆಲ ತಿಂಗಳ ಹಿಂದೆ ನನ್ನ ಮಗಳಿಗೆ ಕಿರುಕುಳ ನೀಡಿದ್ದ. ಹಿಗಾಗಿ ನಾನು, ನನ್ನ ಮಗ ಮೋನು ಹಾಗೂ ತಮ್ಮ ಸೇರಿ ಆತನನ್ನು ಕೊಂದಿದ್ದೇವೆ' ಎಂದಿದ್ದಾರೆ.

ಲವರ್ ಜೊತೆಗಿದ್ದ ಪತಿರಾಯ: ರಸ್ತೆಗೆ ಎಳೆತಂದು ಲಟ್ಟಣಿಗೆಯಲ್ಲೇ ಥಳಿಸಿದ ಪತ್ನಿ!

ಭಾನುವಾರ ಸಂಜೆ ತಿತಾವಿ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಕರ್ವಾರಾದಲ್ಲಿ ಕವರ್ಪಾಲ್ ಹಾಗೂ ಆತನ ಮಗ ಮೋನುನನ್ನು ಪೊಲೀಸರು ಬಂಧಿಸಿದ್ದಾರೆ. 'ಕೊಲೆಗೈಯ್ಯಲು ಬಳಸಲಾಗಿದ್ದ ಆಯುಧಗಳನ್ನು ನಾವೀಗಾಗಲೇ ವಶಪಡಿಸಿಕೊಂಡಿದ್ದೇವೆ' ಎಮದು ಹಿರಿಯ ಪೊಲೀಸ್ ಆಯುಕ್ತ ಅಭಿಷೇಕ್ ಯಾದವ್ ತಿಳಿಸಿದ್ದಾರೆ.

RSS ಕಾರ್ಯಕರ್ತ ಪಂಕಜ್ ಶನಿವಾರದಂದು ಶವವಾಗಿ ಪತ್ತೆಯಾಗಿದ್ದ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರಮೋದ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.