Asianet Suvarna News Asianet Suvarna News

ಟೀಂ ಇಂಡಿಯಾದ ಈ ಮೂವರು ಕ್ರಿಕೆಟಿಗರಿಗೆ ಮಾತ್ರ 7 ಕೋಟಿ ಸಂಬಳ!

ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆಯಾದ ರವಿ ಶಾಸ್ತ್ರಿಗೆ ವಾರ್ಷಿಕ 10 ಕೋಟಿ ರೂಪಾಯಿ ಸ್ಯಾಲರಿ ಫಿಕ್ಸ್ ಮಾಡಲಾಗಿದೆ. ಹಾಗಾದರೆ ಟೀಂ ಇಂಡಿಯಾ ಕ್ರಿಕೆಟಿಗರು ಪಡೆಯುತ್ತಿರುವ ವೇತನ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

Team India players annual salary list 2018-19
Author
Bengaluru, First Published Sep 16, 2019, 3:48 PM IST

ಮುಂಬೈ(ಸೆ.16): ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ವ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಯಾಲರಿ ಪಡೆಯುತ್ತಿರುವ ಆಟಗಾರರು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಆಟಗಾರರಿಗೆ ಕೋಟಿ ಕೋಟಿ ಸಂಬಳ ನೀಡುತ್ತಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಚ್ ಆಗಿ ಮರು ಆಯ್ಕೆಯಾದ ರವಿ ಶಾಸ್ತ್ರಿಗೆ 10 ಕೋಟಿ ರೂಪಾಯಿ ವೇತನ ನಿಗದಿ ಪಡಿಸಲಾಗಿದೆ. ಇನ್ನು ಆಟಗಾರರು ಕೂಡ ಕೋಟಿ ಕೋಟಿ ರೂಪಾಯಿಯಲ್ಲೇ ವೇತನ ಪಡೆಯುತ್ತಿದ್ದಾರೆ. ಆದರೆ ಭಾರತದ ಮೂವರು ಕ್ರಿಕೆಟಿಗರು ವಾರ್ಷಿಕ 7 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!

ಬಿಸಿಸಿಐ ಪ್ರತಿ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಆಟಗಾರರ ವೇತನ ಒಪ್ಪಂದವನ್ನು ನವೀಕರಿಸುತ್ತದೆ. 2018-19ರ ಸಾಲಿನ ಒಪ್ಪಂದ ಈ ಸೆಪ್ಟೆಂಬರ್ 30ಕ್ಕೆ ಅಂತ್ಯವಾಗಲಿದೆ. ಪ್ರಸಕ್ತ ಒಪ್ಪಂದದಲ್ಲಿ ನಾಯಕ ವಿರಾಟ್ ಕೊಹ್ಲಿ, ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ವಾರ್ಷಿಕ 7 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಈ ಮೂವರು ಕ್ರಿಕೆಟಿಗರು A+ ಗ್ರೇಡ್ ಪಡೆದಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ಪಟ್ಟಿ ಇಲ್ಲಿದೆ.

ವಾರ್ಷಿಕ 7 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು

Team India players annual salary list 2018-19

ವಾರ್ಷಿಕ 5 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು

Team India players annual salary list 2018-19

ವಾರ್ಷಿಕ 3 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು

Team India players annual salary list 2018-19

ವಾರ್ಷಿಕ 1 ಕೋಟಿ ರೂ. ವೇತನ ಪಡೆಯುತ್ತಿರುವ ಕ್ರಿಕೆಟಿಗರು

Team India players annual salary list 2018-19

 

Follow Us:
Download App:
  • android
  • ios