ಬಹುಭಾಷಾ ನಟಿ ಇಲಿಯಾನಾಗೆ ಗಂಭೀರ ಕಾಯಿಲೆ | ಇಲಿಯಾನಾ ಹೇಳಿಕೆಯಿಂದ ಅಭಿಮಾನಿಗಳು ಶಾಕ್ | ಏನಪ್ಪಾ ಆ ಕಾಯಿಲೆ? ಈ ಸುದ್ದಿ ಓದಿ.  

ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ನಿಂದಾಗಿ ನಿನ್ನೆ ಮೊನ್ನೆಯವರೆಗೆ ಸುದ್ದಿಯಲ್ಲಿದ್ದ ಬಹುಭಾಷಾ ನಟಿ ಇಲಿಯಾನಾ ಡಿಸೋಜಾ ಇದೀಗ ತಮಗಿರುವ ಕಾಯಿಲೆಯನ್ನು ಬಹಿರಂಗಪಡಿಸಿ ಶಾಕ್ ನೀಡಿದ್ದಾರೆ. 

Scroll to load tweet…

ನನಗೆ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇದೆ. ಬೆಳಿಗ್ಗೆ ಎದ್ದು ನೋಡುವಾಗ ಕಾಲಿನ ಮೇಲೆಲ್ಲಾ ಗಾಯಗಳಾಗಿರುತ್ತವೆ ಎಂದಿದ್ದಾರೆ. 

ನಿದ್ದೆಯಲ್ಲಿ ನಡೆಯುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಇದಕ್ಕೆ ಅನುವಂಶೀಯತೆ, ತೀವ್ರ ಆಯಾಸ, ದೇಹದ ಉಷ್ಣಾಂಶದಲ್ಲಿ ಗಮನಾರ್ಹ ಬದಲಾವಣೆ, ಮದ್ಯಪಾನ, ಧೂಮಪಾನ, ವೈಯಕ್ತಿಕ ಆಘಾತಗಳು ಕಾರಣವಾಗಿರಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದರೆ ಪರಿಹಾರ ಸಿಗುತ್ತದೆ.