ಕೊರೋನಾ ವಿರುದ್ದ ಹೋರಾಟಕ್ಕೆ ರಾಜ್ಯಕ್ಕೆ ಆರ್‌ಬಿಐ ನೆರವು...

ಕೊರೋನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಆರ್‌ಬಿಐ ಹಣಕಾಸಿನ ನೆರವು ನೀಡಲಿದೆ. ಶೇ.60 ರಷ್ಟು ಹೆಚ್ಚು ಹಣವನ್ನು ಆರ್‌ಬಿಐ ರಾಜ್ಯ ಸರ್ಕಾರಗಳಿಗೆ ನೀಡಲಿದೆ.

ವಿಶ್ವದ 108 ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ

ವಿಶ್ವದ ನಾನಾ ರಾಷ್ಟ್ರಗಳಿಗೆ ಭಾರತೀಯ ವಾಯುಪಡೆ ವಿಮಾನಗಳು, ವಿದೇಶಿ ಚಾರ್ಟರ್‌ಗಳು ಹಾಗೂ ರಾಯಭಾರಿ ಕಾರ್ಗೊಗಳ ಮೂಲಕ ಮಾತ್ರೆಗಳನ್ನು ಕಳುಹಿಸಿಕೊಡಲಾಗಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರ ವಿವಿಧ ರಾಷ್ಟ್ರಗಳಿಗೆ ನೆರವಿನ ಹಸ್ತ ನೀಡಿದೆ.

ಅಡಿಲೇಡ್‌ನ ಹೋಟೆಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆಗೆ ಕ್ವಾರಂಟೈನ್‌?.

ಟೂರ್ನಿಗಳನ್ನು ಹೇಗಾದರೂ ಮಾಡಿ ನಡೆಸಲು ತನ್ನಲ್ಲಿರುವ ಆಯ್ಕೆಗಳನ್ನು ಪಟ್ಟಿ ಮಾಡುತ್ತಿರುವ ಕ್ರಿಕೆಟ್‌ ಆಸ್ಪ್ರೇಲಿಯಾ, ಭಾರತ ತಂಡಕ್ಕೆ ಅಡಿಲೇಡ್‌ನಲ್ಲಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಇನ್ನೂ ಉದ್ಘಾಟನೆಯಾಗದ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ.

ಪ್ರಭಾಸ್ ಜೊತೆ ನಟಿಸಲು ದೀಪಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ?

ಮಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟಿ. ಇದೀಗ ಪ್ರಭಾಸ್ ಜೊತೆ ಸಿನಿಮಾ ಮಾಡಲು ಕೇಳಿದರೆ ಡಿಪ್ಪಿ ಕೇಳಿದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೆ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ, ರೇವತಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. 

ಪುತ್ರಿ ಆಸ್ಪತ್ರೆಯಲ್ಲಿದ್ದರೂ ಕೊರೋನಾ ಕರ್ತವ್ಯ ಬಿಡದ PSI

ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ವೇಳೆಯಲ್ಲಿಯೇ ತಮ್ಮ ಮುದ್ದಾದ ಮಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದರೂ ಒಂದಿಷ್ಟು ವಿಚಲಿತರಾಗದೇ ಕರ್ತವ್ಯ ಪ್ರಜ್ಞೆ ಮೆರೆದಿರುವ ಹುಕ್ಕೇರಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


40 ವರ್ಷದಲ್ಲಿ ಮೊದಲ ಬಾರಿ ದೇಶದ ಜಿಡಿಪಿ ಮೈನಸ್‌ಗೆ?.

ಕೊರೋನಾ ವೈರಸ್ ಭೀತಿಯಿಂದಾಗಿ ಎರಡನೇ ಭಾರಿಗೆ ಭಾರತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಭಾರತ ಇದೇ ಮೊದಲ ಬಾರಿಗೆ ಜಿಡಿಪಿ ಮಹಾ ಕುಸಿತ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

U ಟರ್ನ್ ಬದಲು ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿದ, ಇಳಿದಾಗ ಸಾಹಸಿಗೆ ಕಾದಿತ್ತು ಅಚ್ಚರಿ!

ನಗರ ಪ್ರದೇಶಗಳಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಸೇತುವೆ, ಅಂಡರ್‌ ಪಾಸ್ ಸೇರಿದಂತೆ ಹಲವು ಸೇತುಗಳನ್ನು ಮಾಡಲಾಗಿರುತ್ತದೆ. ಇತ್ತ ರಸ್ತೆ ಬದಿಯಲ್ಲಿ ಪಾದಾಚಾರಿ ರಸ್ತೆಗಳು ಇರುತ್ತವೆ. ಈ ರಸ್ತೆಗಳಲ್ಲಿ ಬೈಕ್ ಸವಾರರೇ ಹೆಚ್ಚು ಕಾಣಿಸುತ್ತಾರೆ. ಇಲ್ಲೊಬ್ಬ ಪಾದಾಚಾರಿ ರಸ್ತೆ ಮೇಲಲ್ಲ, ಅದಕ್ಕಿಂತಲೂ 10 ಹೆಜ್ಜೆ ಮುಂದೆ ಹೋಗಿರುವ ಈತ ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿದ್ದಾನೆ. ಸೇತುವೆಯಿಂದ ಇಳಿದಾಗ ಈತನ ಸಾಹಸಕ್ಕೆ ಅಚ್ಚರಿ ಕಾದಿತ್ತು. 


ಮೋದಿ ಮನವಿಗೆ ಸ್ಪಂದಿಸಿದ ಟಾಟಾ ಮಾಲೀಕತ್ವದ TCS, ನೌಕರರಿಗೆ ಉದ್ಯೋಗ ಭದ್ರತೆ!

 ಲಾಕ್‌ಡೌನ್ ವಿಸ್ತರಣೆಯಿಂದ ಕಾರ್ಮಿಕರು, ದಿನಗೂಲಿ ನೌಕರರು ಮಾತ್ರವಲ್ಲ, ಲಾಭದಲ್ಲಿದ್ದ ಕಂಪನಿಗಳು ಕೂಡ ಇದೀಗ ನಷ್ಟದಲ್ಲಿದೆ. ಹೀಗಾಗಿ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾಗಿತ್ತು. ಆದರೆ ಪ್ರಧಾನಿ ಮೋದಿ ಲಾಕ್‌ಡೌನ್ ವಿಸ್ತರಣೆ ವೇಳೆ  ಕೆಲಸದಿಂದ ಯಾರನ್ನು ತೆಗೆಯಬೇಡಿ ಎಂದು ಮನವಿ ಮಾಡಿದ್ದರು. ಇದೀಗ ಈ ಮನವಿಗೆ  TCS ಸ್ಪಂದಿಸಿದೆ.

ವಿಶ್ವಗುರು ಅಂದ್ರೆ ಸುಮ್ಮನೇನಾ, ಭಾರತಕ್ಕೆ ವಂದಿಸಿ ವಿಮಾನ ಏರಿದ ಬ್ರಿಟನ್ ಪ್ರೊಫೆಸರ್!...

 ಕೊರೋನಾ ವೈರಸ್ ಯಾವ ಪ್ರದೇಶವನ್ನು ಬಿಟ್ಟಿಲ್ಲ. ತಿರುಪತಿಯ ಪದ್ಮಾವತಿ ನಿಲಯದಲ್ಲಿ ಬ್ಟಿಟಿಷ್ ಪ್ರಜೆಯೊಬ್ಬರು ಕ್ವಾರಂಟೈನ್ ಆಗಿದ್ದರು. ಆಂಧ್ರಪ್ರದೇಶ ಸರ್ಕಾರದ ಆಶ್ರಯ ಪಡೆದಿದ್ದ ಬ್ರಿಟನ್ ಪ್ರಜೆ ಇದೀಗ ಅಲ್ಲಿನ ಸರ್ಕಾರಕ್ಕೆ ಅನಂತ ಅನಂತ ಧನ್ಯವಾದ ಸಲ್ಲಿಸಿದ್ದಾರೆ.