Asianet Suvarna News Asianet Suvarna News

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

ದೇವೇಗೌಡ್ರ ಮನೆಯಲ್ಲಿ ಮದುವೆ ಸಂಭ್ರಮ | ಲಾಕ್‌ಡೌನ್‌ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ | ಕುಟುಂಬದ ಆಪ್ತರಷ್ಟೇ ಭಾಗಿ 

Sandalwood actor Nikhil Kumaraswamy tie the knot with Revathi on April 17
Author
Bengaluru, First Published Apr 17, 2020, 10:36 AM IST

ಬೆಂಗಳೂರು (ಏ. 17): ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ, ರೇವತಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. 

"

Sandalwood actor Nikhil Kumaraswamy tie the knot with Revathi on April 17

ನಿಖಿಲ್-ರೇವತಿ ಕಲ್ಯಾಣೋತ್ಸವಕ್ಕೆ ಯಾರೆಲ್ಲ ಬಂದಿದ್ದಾರೆ? ಚಿತ್ರಗಳಲ್ಲಿ

ಬಿಡದಿ ಸಮೀಪದ ಕೇತಗಾನಹಳ್ಳಿಯ ಫಾರ್ಮ್‌ ಹೌಸ್‌ನಲ್ಲಿ ಮದುವೆ ನಡೆಯುತ್ತಿದ್ದು ಶಾಸ್ತ್ರಗಳು ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಪ್ರಾರಂಭಗೊಂಡಿವೆ.  9 ರಿಂದ 9.45 ರ ಶುಭ ಗಳಿಗೆಯಲ್ಲಿ ಮಾಂಗಲ್ಯ ಧಾರಣೆ  ನಡೆದಿದೆ. ಇಂದು ಸಂಜೆಯೇ ಸೊಸೆಯನ್ನು ಮನೆ ತುಂಬಿಸಿಕೊಳ್ಳಲಿದೆ ಗೌಡ್ರ ಕುಟುಂಬ. ಕೊರೋನಾ ಹಿನ್ನಲೆಯಲ್ಲಿ ಕುಟುಂಬದ ಅಪ್ತರಷ್ಟೇ ಭಾಗಿಯಾಗಿದ್ದಾರೆ. 

"

Sandalwood actor Nikhil Kumaraswamy tie the knot with Revathi on April 17


 

Follow Us:
Download App:
  • android
  • ios