Asianet Suvarna News Asianet Suvarna News

ವಿಶ್ವಗುರು ಅಂದ್ರೆ ಸುಮ್ಮನೇನಾ, ಭಾರತಕ್ಕೆ ವಂದಿಸಿ ವಿಮಾನ ಏರಿದ ಬ್ರಿಟನ್ ಪ್ರೊಫೆಸರ್!

ಕೊರೋನಾ ವಿರುದ್ಧದ ಹೋರಾಟ/ ಆಂಧ್ರ ಸರ್ಕಾರಕ್ಕೆ ವಿಶೇಷ ಧನ್ಯವಾದ ತಿಳಿಸಿದ ಬ್ರಿಟಿಷ್ ಪ್ರಜೆ/ ವಿಶೇಷ ವಿಮಾನದ ಮೂಲಕ ಸ್ವದೇಶಕ್ಕೆ ಹಿಂದಿರುಗಿದ ಪ್ರೊಫೆಸರ್

British national thanks Andhra Pradesh govt Tirupati staff for taking care of him in quarantine
Author
Bengaluru, First Published Apr 17, 2020, 4:06 PM IST

ಅಮರಾವತಿ(ಏ. 17) ಕೊರೋನಾ ವೈರಸ್ ಯಾವ ಪ್ರದೇಶವನ್ನು ಬಿಟ್ಟಿಲ್ಲ. ತಿರುಪತಿಯ ಪದ್ಮಾವತಿ ನಿಲಯದಲ್ಲಿ ಬ್ಟಿಟಿಷ್ ಪ್ರಜೆಯೊಬ್ಬರು ಕ್ವಾರಂಟೈನ್ ಆಗಿದ್ದರು.

ಆಂಧ್ರಪ್ರದೇಶ ಸರ್ಕಾರದ ಆಶ್ರಯ ಪಡೆದಿದ್ದ ಬ್ರಿಟನ್ ಪ್ರಜೆ ಇದೀಗ ಅಲ್ಲಿನ ಸರ್ಕಾರಕ್ಕೆ ಅನಂತ ಅನಂತ ಧನ್ಯವಾದ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆರಡು ಹಾಟ್ ಸ್ಪಾಟ್

ಲಂಡನ್ ನಲ್ಲಿ ಭೂಗೋಳಶಾಶ್ತ್ರದ ಪ್ರೊಫೆಸರ್ ಆಗಿರುವ ಕುಲ್ಲೆ ಕ್ಲೈವ್ ಬ್ರಯಾಂಟ್ ಅಕ್ಟೋಬರ್ ನಲ್ಲಿ ಭಾರತಕ್ಕೆ ಆಗಮಿಸಿದ್ದರು. ತಿರುಪತಿ ತಿರುಮಲದ ವೆಂಕಟೇಶ್ವರನ ದರ್ಶನವನ್ನು ಕೆಲ ದಿನಗಳ ಹಿಂದೆ ಪಡೆದಿದ್ದರು.

ಲಾಕ್  ಡೌನ್ ಘೋಷಣೆಯಾದ ವೇಳೆ ತಿರುಪತಿಯಲ್ಲೇ ಇದ್ದ ಬ್ರಯಾಂಟ್ ಅಲ್ಲಿಯೇ ಹೋಂ ಕ್ವಾರಂಟೈನ್ ಹೋಗುವುದಾಗಿ ತಿಳಿಸಿದ್ದರು.  ಮಾರ್ಚ್ 24 ರಂದು ಹೋಂ ಕ್ವಾರಂಟೈನ್ ಗೆ ತೆರಳಿದ್ದ ಪ್ರೊಫೆಸರ್ ಈಗ ಬಿಡುಗಡೆಯಾಗಿದ್ದು ತಮ್ಮನ್ನು ಆರೈಕೆ ಮಾಡಿಕೊಂಡ ರೀತಿಯನ್ನು ಮನಸಾರೆ ಹೊಗಳಿದ್ದಾರೆ. ಬ್ರಿಟನ್ ಸರ್ಕಾರದ ಒಪ್ಪಿಗೆ ಪಡೆದುಕೊಂಡು ಬ್ರಯಾಂಟ್ ಶುಕ್ರವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಲಂಡನ್ ಗೆ ತೆರಳಿದ್ದಾರೆ.

ಇಂಗ್ಲಿಷ್ ನಲ್ಲಿಯೂ ಓದಿ

"

Follow Us:
Download App:
  • android
  • ios