ಮುಂಬೈ(ಏ.17): ಮೊದಲ ಹಂತದ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ನಷ್ಟ ಅನುಭವಿಸಿದೆ. ಇದೀಗ ಎರಡನೇ ಹಂತದ ಲಾಕ್‌ಡೌನ್ ಕಾರಣ ಹಲವು ಕಂಪನಿಗಳು ಅಪಾಯಕ್ಕೆ ಸಿಲುಕಿದೆ. ಹೀಗಾಗಿ ತನ್ನ ನೌಕರರ ಉದ್ಯೋಗ ಕಡಿತ, ವೇತನ ಕಡಿತಕ್ಕೆ ಮುಂದಾಗಿದೆ. ಆದರೆ 2ನೇ ಹಂತದ ಲಾಕ್‌ಡೌನ್ ವಿಸ್ತರಣೆ ಘೋಷಣೆ ವೇಳೆ ಪ್ರಧಾನಿ ಮೋದಿ ಉದ್ಯೋಗ ಕಡಿತ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇದೀಗ ಭಾರತ ಅತೀ ದೊಡ್ಡ ಕಂಪನಿಯಾದ  TCS ಮೋದಿ ಮನವಿಗೆ ಸ್ಪಂದಿಸಿದೆ.

ಕೊರೋನಾ ಹೊಡೆತ: ಬೆಂಗ್ಳೂರಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವುದು ಖಚಿತ..!

ಲಾಕ್‌ಡೌನ್ ಹಾಗೂ ನಷ್ಟದ ಕಾರಣ TCS ತನ್ನ ಯಾವುದೇ ನೌಕರರನ್ನು ಉದ್ಯೋಗದಿಂದ ತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಈ ವರ್ಷ ನೀಡಬೇಕಿದ್ದ ವೇತನ ಹೆಚ್ಚಳ ಕೈಬಿಟ್ಟಿದೆ.  TCS ಕಂಪನಿಯಲ್ಲಿ ಒಟ್ಟು 4.5 ಲಕ್ಷ ನೌಕರರಿದ್ದಾರೆ. ಇಷ್ಟೇ ಅಲ್ಲ ಲೌಕ್‌ಡೌನ್ ಮೊದಲು 40,000 ಹೊಸ ಉದ್ಯೋಗಿಗಳನ್ನು ಆಯ್ಕೆ ಮಾಡಿದೆ.ಸಂದರ್ಶನದ ಮೂಲಕ ಆಯ್ಕೆ ಮಾಡಿದ ಹೊಸ ಉದ್ಯೋಗಿಗಳನ್ನೂ ಲಾಕ್‌ಡೌನ್ ಬಳಿಕ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು  TCS ಎಂಡಿ ಹಾಗೂ ಸಿಇಓ ರಾಜೇಶ್ ಗೋಪಿನಾಥನ್ ಹೇಳಿದ್ದಾರೆ.

TCS ಒಟ್ಟು ಉದ್ಯೋಗಿಗಳ ಪೈಕಿ 3.5 ಲಕ್ಷ ನೌಕರರು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಕೆಲಸ ಮಾಡಲು ನೌಕರರಿಗೆ ಹೊಸ ಮಾಡೆಲ್ ನೀಡಲಾಗಿದೆ. ಕಂಪನಿ ಅಧ್ಯಯನ ನಡೆಸಿದ ಈ ಮಾಡೆಲ್ ರೆಡಿ ಮಾಡಿದೆ. ಮನೆಯಿಂದ ಕೆಲಸ, ನೌಕರರಿಗೆ ಬೇಕಾದ ಸೌಲಭ್ಯ ಸೇರಿದಂತೆ ಇತರ ಪ್ರಮುಖ ಅಂಶಗಳನ್ನು ಗಮನದಲ್ಲಿಡಲಾಗಿದೆ ಎಂದು ಕಂಪನಿ ಹೇಳಿದೆ.