ಈ ಉಸಾಬರಿ ಬೇಕಿತ್ತಾ?: ಅಯೋಧ್ಯೆ ತೀರ್ಪು ವ್ಯಾಖ್ಯಾನಿಸಿ ಬೈಸಿಕೊಂಡ ಪಾಕಿಸ್ತಾನ!
ಅಯೋಧ್ಯೆ ತೀರ್ಪು ವ್ಯಾಖ್ಯಾನಿಸಿ ಬೈಯಿಸಿಕೊಂಡ ಪಾಕಿಸ್ತಾನ/ ‘ಅಯೋಧ್ಯೆ ತೀರ್ಪು ಮೋದಿ ಸರ್ಕಾದ ಧರ್ಮಾಂಧತೆಯನ್ನು ಬಿಂಬಿಸುತ್ತದೆ’/ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ,ಮೆಹಮೂದ್ ಖುರೇಷಿ ಅಭಿಮತ/ ಕರ್ತಾರ್’ಪುರ್ ಕಾರಿಡಾರ್ ಉದ್ಘಾಟನೆ ದಿನವೇ ಅಯೋಧ್ಯೆ ತೀರ್ಪು ಪ್ರಕಟಿಸಿದ್ದೇಕೆ ಎಂದು ಕೇಳಿದ ಖುರೇಷಿ/ ‘ಪಾಕಿಸ್ತಾನದ ಜಾತ್ಯಾತೀತ ನಿಲುವು ವಿಶ್ವ ಗಮನಿಸದಿರಲಿ ಎಂಬ ಹುನ್ನಾರ’/ ‘ಭಾರತದ ಭಯೋತ್ಪಾದನೆಯ ನೈಜ ಮುಖ ಜಗತ್ತಿನ ಮುಂದೆ ಅನಾವರಣಗೊಂಡಿದೆ’/ ಪಾಕ್ ಸೇನಾ ವಕ್ತಾರ ಮೇ.ಜ . ಆಸೀಫರ್ಫ ಗಫೂರ್ ಅಭಿಪ್ರಾಯ/ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸದಂತೆ ಪಾಕಿಸ್ತಾನಕ್ಕೆ ಭಾರತದ ಪ್ರತಿಕ್ರಿಯೆ/
ಇಸ್ಲಾಮಾಬಾದ್(ನ.10): ಅಯೋಧ್ಯೆ ಭೂವಿವಾದದ ಸುಪ್ರೀಂಕೋರ್ಟ್ ತೀರ್ಪನ್ನು ಸಾಮರಸ್ಯದ ಸಂದೇಶ ಎಂದೇ ಇಡೀ ವಿಶ್ವ ವ್ಯಾಖ್ಯಾನಿಸಿದೆ. ಎರಡು ಪ್ರಮುಖ ಸಮುದಾಯಗಳು ಒಪ್ಪುವಂತ ಐತಿಹಾಸಿಕ ತಿರ್ಪು ಎಂದೇ ಎಲ್ಲರೂ ಕೊಂಡಾಡಿದ್ದಾರೆ.
ಆದರೆ ಪಾಕಿಸ್ತಾನ ಮಾತ್ರ ಈ ತೀರ್ಪನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡಿದ ಮೋಸ ಎಂದು ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಬಣ್ಣಿಸಿದೆ.
ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!
ಈ ಕುರಿತು ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ,ಮೆಹಮೂದ್ ಖುರೇಷಿ, ಅಯೋಧ್ಯೆ ತೀರ್ಪು ಮೋದಿ ಸರ್ಕಾದ ಧರ್ಮಾಂಧತೆಯನ್ನು ಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಕರ್ತಾರ್’ಪುರ್ ಕಾರಿಡಾರ್ ಉದ್ಘಾಟನೆ ದಿನವೇ ಅಯೋಧ್ಯೆ ತೀರ್ಪು ಪ್ರಕಟಿಸಿದ್ದು, ಪಾಕಿಸ್ತಾನದ ಜಾತ್ಯಾತೀತ ನಿಲುವನ್ನು ವಿಶ್ವ ಗಮನಿಸದರಿರಲಿ ಎಂಬ ಹುನ್ನಾರದ ಭಾಗ ಎಂದು ಖುರೇಷಿ ಹರಿಹಾಯ್ದಿದ್ದಾರೆ.
ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!
ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಕ್ ಸೇನಾ ವಕ್ತಾರ ಮೇ.ಜ. ಆಸೀಫ್ ಗಫೂರ್, ಭಾರತದ ಭಯೋತ್ಪಾದನೆಯ ನೈಜ ಮುಖ ಜಗತ್ತಿನ ಮುಂದೆ ಅನಾವರಣಗೊಂಡಿದೆ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಇತರ ಧರ್ಮಗಳನ್ನು ಗೌರವಿಸುವ ಪಾಕಿಸ್ತಾನ ಕರ್ತಾರ್’ಪುರ್ ಕಾರಿಡಾರ್ ತೆರೆದು ಭಕ್ತರಿಗೆ ನೆರವು ನೀಡುತ್ತದೆ. ಆದರೆ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವ ಭಾರತ ಅವರಿಂದ ಬಾಬರಿ ಮಸೀದಿಯನ್ನು ಕಸಿದುಕೊಳ್ಳುತ್ತದೆ ಎಂದು ಗಫೂರ್ ಕಿಡಿಕಾರಿದ್ದಾರೆ.
ವಿವಾದ ಇತ್ಯರ್ಥ ಬಯಸಿದ್ದೇವು, ಬಗೆಹರಿದಿದೆ: ಮೋಹನ್ ಭಾಗವತ್!
ನಿಮಗ್ಯಾಕೆ ಈ ಉಸಾಬರಿ?:
ಇನ್ನು ಅಯೋಧ್ಯೆ ತೀರ್ಪನ್ನು ವ್ಯಾಖ್ಯಾನಿಸಿರುವ ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ನಮ್ಮ ಆಂತರಿಕ ವಿಷಯದಲ್ಲಿ ಪಾಕಿಸ್ತಾನ ಮೂಗು ತೂರಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.
5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಅಯೋಧ್ಯೆ ತೀರ್ಪಿಗೂ, ಕರ್ತಾರ್’ಪುರ್ ಕಾರಿಡಾರ್’ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಿರುವುದನ್ನು ಪಾಕ್ ನಿಲ್ಲಿಸಬೇಕು ಎಂದು ಆಗ್ರಹಿಸಿರುವ ರವೀಶ್ ಕುಮಾರ್, ಅಯೋಧ್ಯೆ ತೀರ್ಪು ಭಾರತದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ