ಇಸ್ಲಾಮಾಬಾದ್(ಸೆ.20): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಭಾರತದ ಆಂತರಿಕ ವಿಚಾರ ಎಂದು ಇಡೀ ಜಗತ್ತೇ ಸ್ಪಷ್ಟ ಧ್ವನಿಯಲ್ಲಿ ಅರಚುತ್ತಿದೆ. ಆದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮಾತ್ರ ಈ ಧ್ವನಿ ಕೇಳಿಸುತ್ತಿಲ್ಲ. ಅಥವಾ ಕೇಳಿಯೂ ಕೇಳದವರಂತೆ ಇಮ್ರಾನ್ ನಟಿಸುತ್ತಿದ್ದಾರೆ.

ಇಮ್ರಾನ್ ಖಾನ್ ಇದೇ ಸೆ.23ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ನ್ಯೂಯಾರ್ಕ್‌ನಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಟ್ರಂಪ್ ಭೇಟಿ ವೇಳೆ ಇಮ್ರಾನ್ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸುವ ಸಾಧ್ಯತೆ ದಟ್ಟವಾಗಿದೆ.

ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಮ್ರಾನ್ ಖಾನ್ ಅಮೆರಿಕಕ್ಕೆ ತೆರಳಲಿದ್ದು, ಟ್ರಂಪ್ ಅವರೊಂದಿಗಿನ ಖಾಸಗಿ ಭೇಟಿ ವೇಳೆ ಕಾಶ್ಮೀರ ವಿಚಾರ ಪಸ್ತಾಪಿಸಿ ನೆರವಿಗೆ ಬರುವಂತೆ ಮನವಿ ಮಾಡಲಿದ್ದಾರೆ.

ಇನ್ನು ಭಾರತ ಪ್ರಧಾನಿ ಮೋದಿ ಕೂಡ ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಲಿದ್ದು, ಸೆ.22ರಂದೇ ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಭಾರತದ ಆಂತರಿಕ ವಿಚಾರ ಎಂದು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಿದ್ದಾರೆ.