ಕಾಶ್ಮೀರ ಭಾರತದ್ದು ಎಂದ ಪಾಕ್ ವಿದೇಶಾಂಗ ಸಚಿವ| ಕಾಶ್ಮೀರ ವಿಷಯದಲ್ಲಿ ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ| ಜಿನೆವಾದಲ್ಲಿ ಭಾರತದ ವಿರುದ್ಧ ಹರಿಹಾಯ್ದ ಶಾ ಮೆಹಮೂದ್ ಖುರೇಷಿ| ಭಾರತ ನಿಷೇಧಾಜ್ಞೆ ಹಿಂಪಡೆಯುವ ನಾಟಕವಾಡುತ್ತಿದೆ ಎಂದ ಖುರೇಷಿ| ಮಾತಿನ ಭರದಲ್ಲಿ ‘ಇಂಡಿಯನ್ ಸ್ಟೇಟ್ ಆಫ್ ಕಾಶ್ಮೀರ್’ ಎಂದ ಶಾ ಖುರೇಷಿ| ಭಾರತ ಆಕ್ರಮಿತ ಕಾಶ್ಮೀರ(IOK) ಎಂದೇ ಕರೆಯುತ್ತಿದ್ದ ಪಾಕ್ ನಾಯಕರು| 

ಜಿನೆವಾ(ಸೆ.10):Truth Comes First ಅಂತಾರೆ. ಈ ಮಾತು ಅದೆಷ್ಟು ಸತ್ಯ ಎಂಬುದನ್ನು ಪಾಕ್ವಿದೇಶಾಂಗ ಸಚಿವ ಸಾಬೀತುಪಡಿಸಿದ್ದಾರೆ. 

ಜಿನೆವಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಜಗತ್ತಿನ ಮುಂದೆ ಸತ್ಯ ನುಡಿದಿದ್ದಾರೆ.

ಜಿನೆವಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಖುರೇಷಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿಷೇಧಾಜ್ಞೆ ಹಿಂಪಡೆಯುವ ಮೂಲಕ ಪರಿಸ್ಥಿತಿ ಶಾಂತವಾಗಿದೆ ಎಂದು ನಾಟಕವಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. ಕಾಶ್ಮೀರದಲ್ಲಿ ನಿಜಕ್ಕೂ ಪರಿಸ್ಥಿತಿ ಸಹಜವಾಗಿದ್ದರೆ, ಅಂತಾರಾಷ್ಟ್ರೀಯ ಮಾಧ್ಯಮ, ಸಂಘ ಸಂಸ್ಥೆಗಳಿಗೆ ಕಾಶ್ಮೀರ ಭೇಟಿಗೆ ಅವಕಾಶ ಏಕೆ ನೀಡುತ್ತಿಲ್ಲ ಎಂದು ಖುರೇಷಿ ಪ್ರಶ್ನಿಸಿದ್ದಾರೆ.

Scroll to load tweet…

ಆದರೆ ಜಮ್ಮು ಮತ್ತು ಮತ್ತು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ(IOK) ಎಂದೇ ಕರೆಯುತ್ತಿದ್ದ ಪಾಕ್ ನಾಯಕರು, ಇದೀಗ ಕಾಶ್ಮೀರ ಭೂಭಾಗ ಭಾರತಕ್ಕೆ ಸೇರಿದ್ದು ಎಂದು ಸತ್ಯ ಒಪ್ಪಿಕೊಳ್ಳುತ್ತಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಖುರೇಷಿ, ‘ಇಂಡಿಯನ್ ಸ್ಟೇಟ್ ಆಫ್ ಕಾಶ್ಮೀರ್’ ಎಂದು ಹೇಳುವ ಮೂಲಕ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.