ಸೋಶಿಯಲ್ ಮೀಡಿಯಾ ಬಳಕೆದಾರರು ಗಮನಿಸಿ: ಅಯೋಧ್ಯೆ ರೂಲ್ಸ್ ಒಮ್ಮೆ ವಿಚಾರಿಸಿ!
ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್ ತೀರ್ಪಿಗೆ ದಿನಗಣನೆ| ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾದ ಸರ್ಕಾರ| ಪ್ರಚೋದನಕಾರಿ ಸುದ್ದಿ ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ|ಪ್ರಚೋದಕಾರಿ ವಿಷಯಗಳನ್ನು ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಿ ಆದೇಶ| ಸಾಮಾಜಿಕ ಜಾಲತಾಣಗಳ ಬಳಕೆಗೆ ಮಾರ್ಗದರ್ಶಿ ಸೂತ್ರ ಕೊಟ್ಟ ಪೊಲೀಸ್ ಇಲಾಖೆ
ನವದೆಹಲಿ(ನ.08): ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ತೀರ್ಪಿನ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಾಧಿಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.
ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಜವಾಬ್ದಾರಿ ಹೊತ್ತಿರುವ ಉತ್ತರಪ್ರದೇಶ ಸರ್ಕಾರ, ಪ್ರಚೋದನಕಾರಿ ಸುದ್ದಿ ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಲು ಬಯಸಿದೆ.
ಅಯೋಧ್ಯೆ ತೀರ್ಪು: ವಾಟ್ಸಪ್, ಟ್ವಿಟ್ಟರ್ ಮೇಲೆ ಸರ್ಕಾರದ ನಿಯಂತ್ರಣ!
ವಾಟ್ಸಪ್, ಟ್ವೀಟರ್, ಟೆಲಿಗ್ರಾಮ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದಕಾರಿ ವಿಷಯ ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಿ ಉತ್ತರಪ್ರದೇಶ ಸರ್ಕಾರ ಆದೇಶ ನೀಡಿದೆ.
ಅಯೋಧ್ಯೆ: ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ರಾಜ್ಯಗಳಿಗೆ ಸೂಚನೆ
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರವಹಿಸಿರುವ ಪೊಲೀಸ್ ಇಲಾಖೆ, ಈಗಾಗಲೇ ಅಯೋಧ್ಯೆ ನಗರದಲ್ಲಿ 4 ಸಾವಿರಕ್ಕೂ ಅಧಿಕ ತುಕಡಿಗಳನ್ನು ನಿಯೋಜಿಸಿದೆ. ಅಲ್ಲದೇ ಪ್ರಚೋದನಕಾರಿ ಸಂದೇಶ ಹರಡದಂತೆ ತೀವ್ರ ನಿಗಾವಹಿಸಿದೆ.
Fact Check: ಅಯೋಧ್ಯೆ ಪೊಲೀಸರಿಂದ ಫೇಸ್ಬುಕ್ ಮೇಲೆ ಕಣ್ಣು!
ತೀರ್ಪಿನ ಹಿನ್ನಲೆಯಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸಲಿದ್ದು, ಪ್ರಮುಖವಾಗಿ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರದಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
1. ಎಲ್ಲಾ ಖಾಸಗಿ ಕರೆಗಳ ರೆಕಾರ್ಡ್
2. ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ
3. ಮೊಬೈಲ್ ಮತ್ತು ಇತರ ಸಾಧನಗಳನ್ನು ಸಚಿವಾಲಯದ ವ್ಯವಸ್ಥೆಗೆ ಸಂಪರ್
4. ತಪ್ಪು ಮತ್ತು ಸುಳ್ಳು ಸಂದೇಶಗಳ ಮೇಲೆ ತೀವ್ರ ನಿಗಾ
5.ಜಾಲತಾಣಗಳಲ್ಲಿ ಯಾವುದೇ ಆಕ್ಷೇಪಾರ್ಹ ಪೋಸ್ಟ್‌ಗಳು ಅಥವಾ ವೀಡಿಯೊಗಳನ್ನು ಕಳುಹಿಸಬಾರದು.
6. ರಾಜಕೀಯ ಅಥವಾ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶವನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧ
7.ಪೋಲಿಸ್ ಅಧಿಸೂಚನೆಯ ಪ್ರಕಾರ ಸೈಬರ್ ಅಪರಾಧ ಘಟಕ ಪ್ರಚೋದನಕಾರಿ ಸಂದೇಶಗಳ ಮೇಲೆ ನಿಗಾ
ಬರಲಿದೆ ಅಯೋಧ್ಯೆ ಆದೇಶ: ಸ್ವಪಕ್ಷೀಯರಿಗೆ ಮೋದಿ ಕೊಟ್ಟ ಸಂದೇಶ?