Asianet Suvarna News Asianet Suvarna News

ಅಯೋಧ್ಯೆ ತೀರ್ಪು: ವಾಟ್ಸಪ್, ಟ್ವಿಟ್ಟರ್ ಮೇಲೆ ಸರ್ಕಾರದ ನಿಯಂತ್ರಣ!

ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ತೀರ್ಪಿನ ಹಿನ್ನೆಲೆ| ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಲು ಮುಂದಾದ ಯುಪಿ ಸರ್ಕಾರ| ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಜವಾಬ್ದಾರಿ ಹೊತ್ತಿರುವ ಉತ್ತರಪ್ರದೇಶ ಸರ್ಕಾರ| ಪ್ರಚೋದನಕಾರಿ ಸುದ್ದಿ ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ| ಪ್ರಚೋದಕಾರಿ ವಿಷಯಗಳನ್ನು ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಿ ಆದೇಶ| ವಿದ್ಯುನ್ಮಾನ ಮಾಧ್ಯಮಗಳಲ್ಲಿ ತೀರ್ಪಿನ ಕುರಿತು ಚರ್ಚೆಗೆ ನಿರ್ಬಂಧ|

Restriction Imposed On Social Media Ahead Of Ayodhya Verdict
Author
Bengaluru, First Published Nov 4, 2019, 4:46 PM IST

ಲಕ್ನೋ(ನ.04): ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ತೀರ್ಪಿನ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಾಧಿಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.

ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಇದೇ ತಿಂಗಳ 17ರಂದು ನಿವೃತ್ತರಾಗಲಿದ್ದು, ಇದಕ್ಕೂ ಮೊದಲೇ ಅಯೋಧ್ಯೆ ಭೂವಿವಾದ ಕುರಿತ ಅಂತಿಮ ತೀರ್ಪು ಹೊರ ಬೀಳಲಿದೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಜವಾಬ್ದಾರಿ ಹೊತ್ತಿರುವ ಉತ್ತರಪ್ರದೇಶ ಸರ್ಕಾರ, ಪ್ರಚೋದನಕಾರಿ ಸುದ್ದಿ ಹರಡದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಲು ಬಯಸಿದೆ.

ಡಿಸೆಂಬರ್ 6ರಿಂದ ಮಂದಿರ ನಿರ್ಮಾಣ ಶುರು: ಸಾಕ್ಷಿ ಮಹಾರಾಜ್ ಭವಿಷ್ಯ ನುಡಿದರು!

ವಾಟ್ಸಪ್, ಟ್ವೀಟರ್, ಟೆಲಿಗ್ರಾಮ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದಕಾರಿ ವಿಷಯಗಳನ್ನು ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಿ ಉತ್ತರಪ್ರದೇಶ ಸರ್ಕಾರ ಆದೇಶ ನೀಡಿದೆ. 

ಅಯೋಧ್ಯೆ ತೀರ್ಪು ಮುಸ್ಲಿಂ ಪರ ಬಂದರೆ ಮಸೀದಿ ಕಟ್ಟಲ್ಲ ಎಂದ ದಾವೇದಾರರು!

ತೀರ್ಪಿನ ಬಳಿಕ ಸುಮಾರು ಎರಡು ತಿಂಗಳ ಕಾಲ ಅಯೋಧ್ಯೆಯಲ್ಲಿ ಈ ನಿರ್ಬಂಧ ಮುಂದುವರಿಯಲಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ತೀರ್ಪಿನ ಕುರಿತು ಯಾವುದೇ ಚರ್ಚೆಯನ್ನು ನಡೆಸದಂತೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ ಎನ್ನಲಾಗಿದೆ.
'ಅಯೋಧ್ಯೆ ಬಗ್ಗೆ ಮಾತು ಆಡುವಾಗ ಹುಷಾರ್‌' ಸಚಿವರಿಗೆ ಸಿಎಂ ವಾರ್ನಿಂಗ್

Follow Us:
Download App:
  • android
  • ios