ಅಟಲ್ ಬುಹಾರಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ವಿದೇಶಗಳಿಂದಲೂ ಗಣ್ಯರು ಆಗಮಿಸುತ್ತಿದ್ದಾರೆ. ಶ್ರೀಲಂಕಾ, ನೇಪಾಳ, ಭೂತಾನ್ ನಿಂದಲೂ ಪ್ರತಿನಿಧಿಗಳು ಬರುತ್ತಿದ್ದಾರೆ.

ನವದೆಹಲಿ[ಆ.17] ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ಪಾಕಿಸ್ತಾನ, ಶ್ರೀಲಂಕಾ, ಭೂತಾನ್‌, ನೇಪಾಳದಿಂದ ಗಣ್ಯರು ಆಗಮಿಸುತ್ತಿದ್ದಾರೆ.

ಒಂದೆಡೆ ಪಾಕ್ ಕಾನೂನು ಸಚಿವ ಜಾಫರ್ ಅಲಿ ಭಾಗಿಯಾಗಲಿದ್ದರೆ, ಭೂತಾನ್‌ ದೊರೆ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್ ಸಹ ವಾಜಪೇಯಿ ಅಂತಿಮ ದರ್ಶನ ಮಾಡಲಿದ್ದಾರೆ.

ಅಟಲ್ ಅವಿವಾಹಿತರಾಗಿಯೇ ಉಳಿಯಲು ಏನು ಕಾರಣ?

ಶ್ರೀಲಂಕಾದಿಂದ ವಿದೇಶಾಂಗ ಸಚಿವ ಲಕ್ಷ್ಮಣ್‌ ಕಿರಿಯೆಲ್ಲಾ , ನೇಪಾಳದಿಂದ ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗ್ಯಾವಾಲಿ, ಬಾಂಗ್ಲಾದೇಶದಿಂದ ವಿದೇಶಾಂಗ ಸಚಿವ ಮಹಮೂದ್‌ ಅಲಿ ಅವರು ಆಗಮಿಸುತ್ತಿದ್ದಾರೆ. ಅಂತಿಮ ಯಾತ್ರೆ ಈಗಾಗಲೇ ಆರಂಭವಾಗಿದ್ದು ಸಾವಿರಾರು ಜನರು ಹೆಜ್ಜೆ ಹಾಕುತ್ತಿದ್ದಾರೆ. ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ.

ವಾಜಪೇಯಿ ಬಗ್ಗೆ ಗೊತ್ತಿರದ 10 ಸಂಗತಿಗಳು