ಮಾಜಿ ಪ್ರಧಾನಿಯಯ ಜೀವನಗಳು ಮುಂದಿನ ಪೀಳಿಗೆಗೆ ಒಂದು ಆದರ್ಶ,  ಅವರ ಜೀವನದ ಗೊತ್ತಿರದ ಸಂಗತಿಗಳ ಮೇಲೆ ಒಂದು ನೋಟ ಇಲ್ಲಿದೆ.

1. ಗ್ವಾಲಿಯರ್ ನಲ್ಲಿ 1924 ರ ಡಿಸೆಂಬರ್ 24 ರಂದು ಅಟಲ್ ಜನನವಾಗಿತ್ತು.

2.ಮೊದಲು ಸಮಾಜವಾದದ ನೆಲೆಯಲ್ಲೇ ಇದ್ದ ಅಟಲ್ ಬ್ರಿಟಿಷ್ ರೂಲ್ ವಿರೋಧಿಸಿ ತಮ್ಮ ಯೌವನಾವಸ್ಥೆಯಲ್ಲಿ ಜೈಲು ಕಂಡಿದ್ದರು.ಅಜಾತಶತ್ರು ಅಸ್ತಂಗತ

3. 1950ರ ವೇಳೆಗೆ ತಮ್ಮ ಕಾನೂನು ಅಧ್ಯಯನ ಬಿಟ್ಟ ವಾಜಪೇಯಿ ಆರ್‌ ಎಸ್‌ ಎಸ್‌ ನ  ಪತ್ರಿಕೆಯೊಂದನ್ನು ಮುನ್ನಡಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. 

4. ಸಮಾಜವಾದದ ಚಿಂತನೆಯಿಂದಲೇ 1942  ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸುತ್ತಾರೆ.

5. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಶಿಷ್ಯರಾಗಿ ವಾಜಪೇಯಿ ಗುರುತಿಸಿಕೊಳ್ಳುತ್ತಾರೆ.

ಸಾವಿನ ಆಯಸ್ಸು ಕ್ಷಣ ಮಾತ್ರ:ಅಟಲ್ ಕಾವ್ಯ ಲಹರಿ!

6. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಶ್ಯಾಮ್ ಪ್ರಸಾದ್ ಮೂಖರ್ಜಿಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತಾರೆ. ಕೆಲ ದಿನಗಳಲ್ಲಿ ಮುಖರ್ಜಿ ಸಾವನ್ನಪ್ಪುತ್ತಾರೆ. ಈ ಬೆಳವಣಿಗೆ ಅಟಲ್ ಅವರ ಮೇಲೆ  ಪ್ರಭಾವ ಬೀರುತ್ತದೆ.

7. 1957ರಲ್ಲಿ ಮೊದಲ ಸಾರಿಗೆ ವಾಜಪೇಯಿ ಸಂಸತ್ ಸದಸ್ಯರಾಗುತ್ತಾರೆ.

ವಾಜಪೇಯಿ ಬಾಲ್ಯದ ದಿನಗಳು ಹೇಗಿದ್ದವು?

8. ಲೋಕಸಭೆಯ ಸದಸ್ಯರಾಗಿ 10 ಸಲ್ ಅಂದರೆ 1957 ರಿಂದ 2009ರ ವರೆಗೆ ವಾಪಜಪೇಯಿ ಇರುತ್ತಾರೆ.

9. ಕಾಂಗ್ರೆಸ್ ಯೇತರವಾಗಿ 5 ವರ್ಷಗಳ ಕಾಲ ಅಧಿಕಾರ ನಡೆಸಿದ ದೇಶದ ಪ್ರಥಮ ಪ್ರಧಾನಿ ವಾಜಪೇಯಿ.

10. ವಾಜಪೇಯಿ ಅವರಿಗೆ ಭಾರತ ಸರಕಾರ ಮಾರ್ಚ್ 27, 2015ರಂದು ಅತ್ಯುನ್ನತ ಗೌರವ ಭಾರತರತ್ನ ನೀಡಿ ಗೌರವಿಸಿದೆ.