ಅಗಲಿದ ಚೇತನ ಅಟಲ್ ಬಿಹಾರಿ ವಾಜಪೇಯಿ ಬ್ರಹ್ಮಚಾರಿ. ಅವರು ಬ್ರಹ್ಚಚಾರಿಯಾಗಿ ಉಳಿದ ಕತೆಯೂ ಅಷ್ಟೆ ಕುತೂಹಲಕಾರಿ. ದೇಶಕ್ಕೆ ಇಡೀ ಜೀವನವನ್ನೇ ಸಮರ್ಪಿಸಿಕೊಂಡಿದ್ದ ಅವರ ಜೀವನದ ಒಂದೊಂದು ಘಟನೆಗಳು ನಮಗೆ ಒಂದೊಂದು ಪಾಠ.
ನವದೆಹಲಿ[ಆ.16] ಹಾಗಾದರೆ ಅಟಲ್ ಬಿಹಾರಿ ವಾಜಪೇಯಿ ಬ್ರಹ್ಮಚಾರಿಯಾಗಿಯೇ ಉಳಿಯಲು ಏನು ಕಾರಣ? ಕವಿಯಾಗಿದ್ದ ಅಟಲ್ ಜೀವನದಲ್ಲಿ ಪ್ರೇಮದ ಪಾಠ ಮೂಡಲೇ ಇಲ್ಲವೇ?
ಅಖಂಡ ಬ್ರಹ್ಮಚಾರಿಯಾಗಿಯೇ 93 ವರ್ಷಗಳ ಪಯಣವನ್ನು ಅವರು ಮುಗಿಸಿದರು. ತಾವೇಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಅವರೇ ಹಲವಾರು ಬಾರಿ ಸ್ವಾರಸ್ಯಕರವಾಗಿ ಉತ್ತರ ನೀಡಿದ್ದಾರೆ. ಆ ಉತ್ತರದಲ್ಲಿ ಸತ್ಯ ಹುಡುಕುವುದಕ್ಕಿಂತ ಹಾಗೆ ಇದ್ದುಬಿಡುವುದು ಒಳ್ಳೆಯದು.
ಬಣ್ಣದೋಕುಳಿಯಾಡಿ ಮೋದಿಯೊಂದಿಗೆ ನರ್ತಿಸಿದ್ದ ವಾಜಪೇಯಿ
ಪತ್ರಕರ್ತರೊಬ್ಬರು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ "ಯಾವುದೇ ಮಹಿಳೆ ನನ್ನನ್ನು ಸೂಕ್ತ ವರ ಎಂದು ಪರಿಗಣಿಸಲಿಲ್ಲ" ಎಂಬ ಉತ್ತರ ನೀಡಿದ್ದರು. ಮತ್ತೊಮ್ಮೆ ನನಗೆ ಮದುವೆಯಾಗಲು ಸಮಯವೇ ಸಿಗಲಿಲ್ಲ ಎಂದು ಹೇಳಿದ್ದರು. ಮದುವೆಯಾಗದಿದ್ದರೂ ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕಿ ಸಲುಹಿ ಜವಾಬ್ದಾರಿಯುತ ತಂದೆಯಾಗಿ ಕರ್ತವ್ಯ ಪೂರೈಸಿದ್ದರು.
