ಬೆಂಗಳೂರಿನ ಬಿಡದಿಯಲ್ಲಿ, ತನ್ನಿಂದ ದೂರವಾಗುತ್ತಿದ್ದಾನೆ ಎಂಬ ಕೋಪದಲ್ಲಿ ಪ್ರೇಯಸಿಯೊಬ್ಬಳು ತನ್ನ ಜಿಮ್ ಟ್ರೈನರ್ ಪ್ರಿಯಕರನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾಳೆ. ಐದಾರು ವರ್ಷಗಳ ಪ್ರೀತಿಗೆ ಮನಸ್ತಾಪವೇ ಮುಳುವಾಗಿದೆ. ಪ್ರೇಯಸಿ ಇದೀಗ ಪೊಲೀಸರಿಗೆ ಶರಣಾಗಿದ್ದಾಳೆ.

ಬೆಂಗಳೂರು: ವ್ಯಾಲೆಂಟೈನ್ ಡೇ ಕಳೆದ ಇನ್ನೂ ಸರಿಯಾಗಿ ಹದಿನೈದು ದಿನಗಳಾಗಿಲ್ಲ. ಹೀಗಿರುವಾಗಲೇ ಪ್ರೇಯಸಿಯೊಬ್ಬಳು ತನ್ನ ಪ್ರೇಮಿ ಜಿಮ್ ಟ್ರೈನರ್‌ಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಿಯಕರ ತಮ್ಮಿಂದ ದೂರ ಆಗ್ತಿದ್ದಾನೆ ಎಂದು ಕೋಪಗೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.

Add Asianetnews Kannada as a Preferred SourcegooglePreferred

27 ವರ್ಷದ ಜಿಮ್ ಟ್ರೈನರ್ ವೇಣುಗೋಪಾಲ್ ಚಾಕು ಇರಿತಕ್ಕೆ ಒಳಗಾಗಿರುವ ಪ್ರೇಮಿಯಾಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ಸುಧಾ ಹಾಗೂ ವೇಣುಗೋಪಾಲ್ ಲವ್ ಮಾಡ್ತಾ ಇದ್ರು. 30 ವರ್ಷದ ಸುಧಾ ಇದೀಗ 27 ವರ್ಷದ ಲವರ್‌ ಮೇಲೆ ಮಾರಣಾಂತಿಕ ಹಲ್ಲೆಗೊಳಗಾಗಿದ್ದಾರೆ. ಬಿಡದಿಯ ಸಿಲ್ಕ್ ಫಾರ್ಮ್‌ ಕ್ವಾಟ್ರಸ್ ಬಳಿ ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ.

ಹಲ್ಲೆಗೆ ಕಾರಣವೇನು?

ಇನ್ನು ಕಳೆದ ಐದಾರು ವರ್ಷಗಳಿಂದ ಅತ್ಯಂತ ಸಲುಗೆಯಿಂದಿದ್ದ ಈ ಜೋಡಿಯ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಕಳೆದ ಕೆಲ ದಿನಗಳಿಂದ ವೇಣುಗೋಪಾಲ್, ಸುಧಾಳಿಂದ ಅಂತರ ಕಾಯ್ದುಕೊಂಡಿದ್ದ. ಈತ ನನ್ನಿಂದ ದೂರ ಸರಿಯುತ್ತಿದ್ದಾನೆ ಎಂದು ಕೋಪಗೊಂಡ ಸುಧಾ, ವೇಣುಗೋಪಾಲ್ ಅವರನ್ನು ಮನೆಗೆ ಕರೆದಿದ್ದಾಳೆ. ಮನೆಗೆ ಕರೆದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತುಕತೆ ವಿಕೋಪಕ್ಕೆ ತಿರುಗಿ ವೇಣುಗೋಪಾಲ್ ಮೇಲೆ ಚಾಕುವಿನಿಂದ ಚುಚ್ಚಿದ್ದಾರೆ.

ಇನ್ನು ಲವರ್ ಬಾಯ್‌ ವೇಣುಗೋಪಾಲ್‌ಗೆ ಚಾಕು ಇರಿತ ನಡೆದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಸುಧಾ ಶರಣಾಗಿದ್ದಾಳೆ. ಇನ್ನು ಮಾರಣಾಂತಿಕ ಹಲ್ಲೆಗೊಳಗಾಗಿರುವ ಯುವಕನಿಗೆ ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ವೇಣುಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.