ಕಳೆದ ನಾಲ್ಕು ದಿನಗಳಿಂದ ಕಣ್ಣೀರ ಮಡುವಿನಲ್ಲಿದ್ದ ಸುಮಲತಾ ಹಾಗೂ ಅಭಿಷೇಕ್‌ ಗೌಡ ಅವರು ಜಯನಗರದ ತಮ್ಮ ನಿವಾಸದಿಂದ ಸೋಮವಾರ ಹೊರಬರದೆ ಇಡೀ ದಿನ ಮನೆಯೊಳಗೇ ಇದ್ದರು. ಮಧ್ಯಾಹ್ನದ ನಂತರ ಮನೆಯ ಬಾಲ್ಕನಿಗೆ ಬಂದ ಅಭಿಷೇಕ್‌ ಗೌಡ, ತಂದೆ ಅಂಬರೀಷ್‌ ಅವರ ನೆಚ್ಚಿನ ಶ್ವಾನ ‘ಕನ್ವರ್‌’ನೊಂದಿಗೆ ಕೆಲ​ಕಾಲ ಕಳೆ​ದ​ರು.

ಬೆಂಗಳೂರು[ನ.28]: ಅಂಬರೀಷ್‌ ಅವರಿಲ್ಲದ ಜೆ.ಪಿ.ನಗರದ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ತಮ್ಮ ಭಾಗ್ಯಜ್ಯೋತಿಯನ್ನು ಕಳೆದುಕೊಂಡ ನೋವಿನಿಂದ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್‌ ಗೌಡ ಇನ್ನೂ ಹೊರಬಂದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಅಭಿಮಾನಿಯ ಮೈತುಂಬಾ ಅಂಬಿ ಸಿನಿಮಾಗಳ ಹಚ್ಚೆ

ಕಳೆದ ನಾಲ್ಕು ದಿನಗಳಿಂದ ಕಣ್ಣೀರ ಮಡುವಿನಲ್ಲಿದ್ದ ಸುಮಲತಾ ಹಾಗೂ ಅಭಿಷೇಕ್‌ ಗೌಡ ಅವರು ಜಯನಗರದ ತಮ್ಮ ನಿವಾಸದಿಂದ ಸೋಮವಾರ ಹೊರಬರದೆ ಇಡೀ ದಿನ ಮನೆಯೊಳಗೇ ಇದ್ದರು. ಮಧ್ಯಾಹ್ನದ ನಂತರ ಮನೆಯ ಬಾಲ್ಕನಿಗೆ ಬಂದ ಅಭಿಷೇಕ್‌ ಗೌಡ, ತಂದೆ ಅಂಬರೀಷ್‌ ಅವರ ನೆಚ್ಚಿನ ಶ್ವಾನ ‘ಕನ್ವರ್‌’ನೊಂದಿಗೆ ಕೆಲ​ಕಾಲ ಕಳೆ​ದ​ರು.

ಇದನ್ನೂ ಓದಿ: ಯಾರಿಗೆ ಸಲ್ಲುತ್ತೆ ಕ್ರೆಡಿಟ್, ಸಾವಿನ ವಿಚಾರದಲ್ಲೂ ರಾಜಕೀಯ ಶುರುವಾಯ್ತಾ?

ಮಧ್ಯಾಹ್ನದ ವೇಳೆಗೆ ಭಾರತಿ ವಿಷ್ಣುವರ್ಷನ್‌ ಅವರ ಮನೆಯಿಂದ ಸುಮಲತಾ ಹಾಗೂ ಅಭಿಷೇಕ್‌ ಅವರಿಗಾಗಿ ಎರಡು ಕ್ಯಾರಿಯರ್‌ನಲ್ಲಿ ಊಟ ಕಳುಹಿಸಲಾಯಿತು. ತಮ್ಮ ಕಾರು ಚಾಲಕನ ಮೂಲಕ ಭಾರತಿ ಅವರು ಊಟ ಕಳುಹಿಸಿದರು ಎಂದು ತಿಳಿದು ಬಂದಿದೆ.