ಮಂಡ್ಯ[ನ.27] ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತಂದ ಕ್ರೆಡಿಟ್ ಪಡೆಯಲು ಪೈಪೋಟಿ ಶುರುವಾಗಿದೆ. ಜೆಡಿಎಸ್- ಬಿಜೆಪಿ ಪಕ್ಷಗಳ ನಡುವೆ ಪೊಲಿಟಿಕಲ್ ವಾರ್ ಶುರುವಾಗಿದೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಾರ್ಥಿವ ಶರೀರ ತಂದ ಕ್ರೆಡಿಟ್ ಸಿಎಂಗೆ ಸಲ್ಲಬೇಕು ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ಸಹ ಪ್ರತಿಕ್ರಿಯೆ ನೀಡುತ್ತಿದೆ.

ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಡ್ಯಕ್ಕೆ ಪಾರ್ಥಿವ ಶರೀರ ತಂದ ಕೀರ್ತಿ ಸಿಎಂಗೆ ಹೋಗಬೇಕೆಂದು ಪದೇ ಪದೇ ಜೆಡಿಎಸ್ ನಾಯಕರು ಹೇಳುತ್ತಲೇ ಬಂದಿದ್ದಾರೆ. ಆದರೆ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತರಲು ಮೋದಿ ಕಾರಣ ಎಂದು ಬಿಜೆಪಿ ಮುಖಂಡರ ವಾದ. ಮಂಡ್ಯಕ್ಕೆ ರಕ್ಷಣಾ ಇಲಾಖೆ ಹೆಲಿಕಾಪ್ಟರ್ ಕಳುಹಿಸಿಕೊಟ್ಟಿದ್ದು ಮೋದಿ ಎಂಬ ವಿಚಾರವನ್ನು ಬಿಜೆಪಿ ನಾಯಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಮ್ಯಾಗಿದೆಯಾ ಆಸ್ಟಿಯೋಕ್ಲ್ಯಾಟೋಮಾ?: ಏನಿದು ರೋಗ?

ಕೇಂದ್ರ ಮತ್ತು ರಾಜ್ಯ ಸರಕಾರಗಳು ಎರಡು ಒಟ್ಟಾಗಿ ಕೆಲಸ ಮಾಡಿದ್ದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು. ಸಿಎಂ ಕುಮಾರಸ್ವಾಮಿ ಮಾಡಿದ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿದ ರೀತಿಯನ್ನು ಮೆಚ್ಚಿಕೊಳ್ಳಬೇಕು. ರಾಜ್ಯ ಸರಕಾರ ತೆಗೆದುಕೊಂಡ ಭದ್ರತಾ ಕ್ರಮಗಳು, ನಡೆದುಕೊಂಡ ರೀತಿಯನ್ನೂ ಮೆಚ್ಚಿಕೊಳ್ಳಲೇಬೇಕು.

ರೆಬಲ್‌ಸ್ಟಾರ್‌ಗೆ ಭಾವಪೂರ್ಣ ವಿದಾಯ