ಅರೆ ಬೆತ್ತಲೆಯಾಗಿ ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆಂದು ಕಂಠೀರವ ಸ್ಟುಡಿಯೋಗೆ ಬಂದ್ದಿದ್ದ.ದೇಹ​ದಲ್ಲಿ ಅಂಬರೀಷ್‌ ಅಭಿನಯದ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳ ಹೆಸರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದ. 

ಬೆಂಗಳೂರು : ಅರೆ ಬೆತ್ತಲೆಯಾಗಿ ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆಂದು ಕಂಠೀರವ ಸ್ಟುಡಿಯೋಗೆ ಬಂದ್ದಿದ್ದ ವ್ಯಕ್ತಿ ಕಂಡು ಪೊಲೀಸರು ಓಡಿಸಲು ಮುಂದಾಗಿದ್ದರು. ಆದರೆ, ಆತನ ಮೈ ಮೇಲಿದ್ದ ಹಚ್ಚೆ ಕಂಡು ಸುಮ್ಮನಾದರು...!

ಏಕೆಂದರೆ, ಆ ವ್ಯಕ್ತಿ ಅರೆ​ಬೆ​ತ್ತಲೆ ದೇಹ​ದಲ್ಲಿ ಅಂಬರೀಷ್‌ ಅಭಿನಯದ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳ ಹೆಸರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದ. ತನ್ನ ಹೆಸರು ಜಡೆ ಮಾಯಸಂದ್ರದ ಕೆ.ನಾಗೇಶ ಗೌಡನೆಂದು ಹೇಳಿಕೊಂಡ ಆ ವ್ಯಕ್ತಿ ಅಂಬ​ರೀಷ್‌ ಸಿನಿ​ಮಾ​ಗಳ ಹೆಸ​ರನ್ನು ದೇಹದ ತುಂಬೆಲ್ಲ ಹಚ್ಚೆ ಹಾಕಿ​ಸಿ​ಕೊಂಡ​ದ್ದರು. ನಾಗೇ​ಶ್‌​ಗೌಡ 40 ವರ್ಷಗಳಿಂದ ಅಂಬರೀಷ್‌ ಅಭಿಮಾನಿಯಂತೆ.

ಮೈಸೂರು ರಸ್ತೆಯಲ್ಲಿರುವ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡಿಕೊಂಡಿರುವ ಆತನಿಗೆ ಅಂಬರೀಷ್‌ ಎಂದರೆ ಬಲು ಇಷ್ಟ. ಎದೆಯ ಬಲಭಾಗದಲ್ಲಿ ಸುಮಲತಾ, ಅಂಬರೀಶ್‌, ಅಂಬಿ ನಿಲಯ, ಮಂಡ್ಯ ಗೌಡ್ರು, ದಾನಶೂರ ಕರ್ಣ ಎಂದು ಹಚ್ಚೆ ಹಾಕಿಸಿಕೊಂಡಿದ್ದರೆ, ಬಲಗೈ ತೋಳು, ಎಡಗೈನಲ್ಲೂ ಹಲವು ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ವಿಶೇಷವೆಂದರೆ ಕಳೆದ ಹಲವು ವರ್ಷಗಳಿಂದ ತನ್ನ ಮೊಬೈಲ್‌ ರಿಂಗ್‌ ಟೋನ್‌ ಕೂಡ ಅಂಬರೀಶ್‌ ಅಭಿನಯದ ಚಿತ್ರದ ಒಂದು ಹಾಡಿನ ಮ್ಯೂಸಿಕ್‌ ಆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

‘ಎಣ್ಣೆ ಹೊಡೆಯಲಿಲ್ಲಾ ಅಂದ್ರೆ ಧೈರ್ಯ ಬರಲ್ಲ. ಈಗ ಸ್ವಲ್ಪ ಎಣ್ಣೆ ಹೊಡೆದಿದ್ದೇನೆ. ಆದ್ರಿಂದ ಬಟ್ಟೆಬಿಚ್ಚಿಕೊಂಡು ಧೈರ್ಯವಾಗಿ ಬಂದಿದ್ದೀನಿ. ಅಂಬರೀಷಣ್ಣಾ ಅಂದ್ರೆ ನಂಗೆ ಪ್ರಾಣ’ಎನ್ನುತ್ತಾ ನಾಗೇಶ್‌ ಗೌಡ ಅವರು ಅಂಬ​ರೀಷ್‌ಗೆ ಜೈಕಾರ ಹಾಕು​ತ್ತಿ​ದ್ದದ್ದು ಕಂಡುಬಂತು.