ನವದೆಹಲಿ, (ಸೆ.21): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಜಾಮೀನು ತೀರ್ಪು ಮುಂದೂಡಲಾಗಿದೆ.

ಸದ್ಯಕ್ಕೆ ಡಿಕೆಶಿಗೆ ಜೈಲೇ ಗತಿ, ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ!

ಇಂದು (ಶನಿವಾರ) ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ಇಡಿ ವಿಶೇಷ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಡಿಕೆಶಿ ಜಾಮೀನು ತೀರ್ಪು ಅನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.

ಜಾಮೀನು ಸಿಗುತ್ತೋ ಅಥವಾ ಇಲ್ಲ ಎನ್ನುವುದು ಡಿಕೆಶಿ ಭವಿಷ್ಯ ಸೆಪ್ಟೆಂಬರ್ 25ರಂದು ತಿಳಿಯಲಿದೆ. ಅಲ್ಲಿಯವರೆಗೆ ಡಿಕೆ ಶಿವಕುಮಾರ್‌ಗೆ ತಿಹಾರ್ ಜೈಲೇ ಗತಿ.

ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್

ಇತ್ತ ಕರ್ನಾಟಕದ 15 ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಇದ್ರಿಂದ ಕಾಂಗ್ರೆಸ್‌ಗೆ ದಿಕ್ಕುತೋಚದಂತಾಗಿದೆ.