ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್
ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್| ಸುಪ್ರೀಂನಲ್ಲಿ ಅನರ್ಹರ ಅರ್ಜಿ ವಿಚಾರಣೆ, ಹೆಚ್ಚಿದ ಟೆನ್ಶನ್| ಒಂದೇ ಹಂತದಲ್ಲಿ ಚುನಾವಣೆ| ದಿನಾಂಕದ ವಿವರ ಹೀಗಿದೆ
ಬೆಂಗಳೂರು[ಸೆ,21]: ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಿಸಿದ್ದು, ಕರ್ನಾಟಕದ 15 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 21ಕ್ಕೆ ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರ ಬೀಳಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಮುಂದುವರೆದಿದ್ದು, ಚುನಾವಣಾ ದಿನಾಂಕ ಘೋಷಣೆಯಿಂದ ಮತ್ತಷ್ಟು ಟೆನ್ಶನ್ ಹೆಚ್ಚಿದೆ.
"
ಮಹತ್ವದ ದಿನಾಂಕಗಳು:
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24
2 ಕ್ಷೇತ್ರಗಳಿಗಿಲ್ಲ ಉಪ ಚುನಾವಣೆ
ಹೌದು 17 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 15 ಕ್ಷೇತ್ರಗಳಿಗಷ್ಟೇ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಅನರ್ಹ ಶಾಸಕ ಮುನಿರತ್ನ ಪ್ರತಿನಿಧಿಸುತ್ತಿದ್ದ ಆರ್. ಆರ್ ನಗರ ಕ್ಷೇತ್ರ ಹಾಗೂ ಪ್ರತಾಪ್ ಗೌಡ ಪಾಟೀಲ್ ಪ್ರತಿನಿಧಿಸುತ್ತಿದ್ದ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ.
ಉಪಚುನಾವಣೆಗೆ ಸದ್ದಿಲ್ಲದೆ ಬಿಜೆಪಿ ಸಿದ್ಧತೆ : 15ರ ಗುರಿ
ಯಾವೆಲ್ಲಾ ಕ್ಷೇತ್ರಗಳಿಗೆ ಚುನಾವಣೆ?
* ಗೋಕಾಕ್
* ಅಥಣಿ
* ರಾಣೆಬೆನ್ನೂರು
* ಕಾಗವಾಡ
* ಹಿರೇಕೆರೂರು
* ಯಲ್ಲಾಪುರ
* ಯಶವಂತಪುರ
* ವಿಜಯನಗರ
* ಶಿವಾಜಿನಗರ
* ಹೊಸಕೋಟೆ
* ಹುಣಸೂರು
* ಕೆ.ಆರ್.ಪೇಟೆ
* ಕೆ.ಆರ್.ಪುರಂ
* ಮಹಾಲಕ್ಷ್ಮೀ ಲೇಔಟ್
* ಚಿಕ್ಕಬಳ್ಳಾಪುರ
ದೇಶದ ಒಟ್ಟು 64 ಕ್ಷೇತ್ರಗಳಿಗೆ ಉಪಚುನಾವಣೆ
ಚುನಾವಣಾ ಆಯೋಗವು ಸುದ್ದಿಗೋಷ್ಠಿ ಮೂಲಕ ಭಾರತದ ಒಟ್ಟು 64 ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕವನ್ನು ಘೋಷಿಸಿದೆ. ಅರುಣಾಚಲ ಪ್ರದೇಶದ 1, ಅಸ್ಸಾಂನ 4,ಬಿಹಾರದ 5, ಛತ್ತೀಸ್ಗಢದ 1, ಗುಜರಾತ್‌ನ 4, ಹಿಮಾಚಲ ಪ್ರದೇಶದ 2, ಕರ್ನಾಟಕದ 15, ಕೇರಳದ 5, ಮಧ್ಯಪ್ರದೇಶದ 1, ಮೇಘಾಲಯದ 1, ಪಂಜಾಬ್‌ನ 4, ರಾಜಸ್ಥಾನದ 2, ಸಿಕ್ಕಿಂನ 3, ತಮಿಳುನಾಡಿನ 1, ತೆಲಂಗಾಣದ 1 ಹಾಗೂ ಉತ್ತರಪ್ರದೆಶದ 11 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ನಿಗಧಿಯಾಗಿದೆ.
ಚುನಾವಣೆ ಬಗ್ಗೆ ಕೋಡಿ ಶ್ರೀ ಭವಿಷ್ಯ : ಕೆಲವೇ ತಿಂಗಳಿದ್ಯಾ ಸರ್ಕಾರದ ಆಯುಷ್ಯ?
ಈ 15 ಅನರ್ಹ ಶಾಸಕರಿಗೆ ಫುಲ್ ಟೆನ್ಶನ್
ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದರು. ಇದರಿಂದಾಗಿ ಸರ್ಕಾರ ಬಹುಮತವಿಲ್ಲದೇ ಅಧಿಕಾರ ಕಳೆದುಕೊಂಡಿತ್ತು. ಬಳಿಕ ಈ ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಪಕ್ಷ ಸಲ್ಲಿಸಿದ ಅರ್ಜಿ ಮೇರೆಗೆ ವಿಚಾರಣೆ ನಡೆಸಿ ಅನರ್ಹಗೊಳಿಸಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿರುವಾಗಲೇ ಚುನಾವಣೆ ಘೋಷಣೆ ಆಗಿದೆ. ಇದು ಅನರ್ಹರಲ್ಲಿ ಭೀತಿಯುಂಟು ಮಾಡಿದೆ.
1. ರಮೇಶ್ ಜಾರಕಿಹೊಳಿ, ಗೋಕಾಕ್
2. ಮಹೇಶ್ ಕುಮಟಳ್ಳಿ, ಅಥಣಿ
3. ಶಂಕರ್, ರಾಣೆಬೆನ್ನೂರು
4. ಆನಂದ್ ಸಿಂಗ್, ಹೊಸಪೇಟೆ
5. ವಿಶ್ವನಾಥ್, ಹುಣಸೂರು
6. ಬಿ.ಸಿ. ಪಾಟೀಲ್, ಹಿರೆಕೇರೂರು
7. ಶಿವರಾಂ ಹೆಬ್ಬಾರ್, ಯಲ್ಲಾಪುರ
8. ನಾರಾಯಣಗೌಡ, ಕೆಆರ್.ಪೇಟೆ
9. ಎಸ್.ಟಿ. ಸೋಮಶೇಖರ್, ಯಶವಂತಪುರ
10. ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್
11. ಭೈರತಿ ಬಸವರಾಜ್, ಕೆ.ಆರ್.ಪುರಂ
12. ರೋಷನ್ ಬೇಗ್, ಶಿವಾಜಿನಗರ
13. ಎಂಟಿಬಿ ನಾಗರಾಜ್, ಹೊಸಕೋಟೆ
14. ಸುಧಾಕರ್, ಚಿಕ್ಕಬಳ್ಳಾಪುರ
15. ಶ್ರೀಮಂತ್ ಪಾಟೀಲ್, ಕಾಗವಾಡ