1)  ಡಿಕೆಶಿಗಿಲ್ಲ ಜಾಮೀನು: ತಿಹಾರ್ ಜೈಲು ವಾಸ ಮುಂದುವರಿಕೆ

ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಡಿಕೆಶಿಗೆ ತಿಹಾರ್ ಜೈಲೇ ಗತಿ. ಇಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್‌ ಅವರು ಡಿಕೆಶಿ ಜಾಮೀನು ಅರ್ಜಿ ಮಾಡಿ ಇಂದು (ಬುಧವಾರ) ತೀರ್ಪು ಪ್ರಕಟಿಸಿದರು.

2) IMA ಕಿಂಗ್‌ಪಿನ್ ಮನ್ಸೂರ್ ಖಾನ್ ಮತ್ತೊಂದು ಬಂಡವಾಳ ಬಯಲು!

ಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ಮಂದಿಯನ್ನು ವಂಚಿಸಿ ಜೈಲು ಸೇರಿರುವ ಮನ್ಸೂರ್ ಖಾನ್ ನ ಮತ್ತೊಂದು ಬಂಡವಾಳ ಬಯಲಾಗಿದೆ. ತನ್ನ ನಾಲ್ಕನೇ ಪತ್ನಿಗೆ ಎರಡನೇ ಗಂಡನಿಂದ ತಲಾಖ್ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ  ಲಂಚ ನೀಡಿರುವ ವಿಷಯ ಬೆಳಕಿಗೆ ಬಂದಿದೆ.


3) ಅನರ್ಹ ಪರ ಮುಕುಲ್ ರೋಹಟಗಿ ವಾದ ಅಂತ್ಯ: ಒಂದುವರೆ ತಾಸು ವಾದದ ಹೈಲೆಟ್ಸ್

 ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು (ಬುಧವಾರ) ಬೆಳಗ್ಗೆ 11ಗಂಟೆಯಿಂದ ಸುಪ್ರೀಂಕೋರ್ಟ್‌ನಲ್ಲಿ  ನಡೆಯುತ್ತಿದೆ. ಅನರ್ಹ ಶಾಸಕರ ಪರ ಮುಕುಲ್ ರೋಹಟಗಿ, ಸುಮಾರು ಒಂದುವರೆ ಗಂಟೆ ಪ್ರಬಲ ವಾದ ಮಂಡನೆ ಮಾಡಿದರು.


4) ಅವ್ರಿಬ್ರೇ ಮಾತಾಡ್ಲಿ: ಟ್ರಂಪ್ ಸಲಹೆ ಕೇಳಿ ಮೋದಿ ಅಂದ್ರು ಏನ್ ಹೇಳ್ಲಿ?

ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆಯ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ಭಾರತದ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಪರಸ್ಪರ ಮಾತುಕತೆ ನಡೆಸಲು ಎಂದಿದ್ದಾರೆ. ಕಾಶ್ಮೀರ ವಿವಾದದ ಶಾಶ್ವತ ಪರಿಹಾರಕ್ಕೆ ಭಾರತ-ಪಾಕ್ ಮುಂದಾಗಬೇಕು ಎಂದಿರುವ ಟ್ರಂಪ್, ಮೋದಿ-ಇಮ್ರಾನ್ ಖಾನ್ ಪರಸ್ಪರ ಚರ್ಚಿಸಿ ಕಾಶ್ಮೀರ ಕುರಿತು ನಿರ್ಣಯ ಕೈಗೊಂಡರೆ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.

5) PV ಸಿಂಧು ಕೋಚ್ ರಾಜೀನಾಮೆ..!

 ಭಾರತ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಕೋಚ್ ದಕ್ಷಿಣ ಕೊರಿಯಾದ ಕಿಮ್ ಜಿ ಹ್ಯೂನ್ ವೈಯಕ್ತಿಕ ಕಾರಣಗಳಿಂದ ಹುದ್ದೆ ತ್ಯಜಿಸಿದ್ದಾರೆ. ಇತ್ತೀ ಚೆಗೆ ಪಿ.ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆಲುವಿನಲ್ಲಿ ಕಿಮ್ ಪ್ರಮುಖ ಪಾತ್ರವಹಿಸಿದ್ದರು. 

6) ಟೀಂ ಇಂಡಿಯಾಗೆ ಟ್ವೀಟ್ ಮಾಡಿದ ಬೆಂಗಳೂರು ಪೊಲೀಸರಿಗೆ ಕ್ಲಾಸ್!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಮುಗಿದರೂ ಚುಟುಕು ಕ್ರಿಕೆಟ್ ಇನ್ನು ಸದ್ದು ಮಾಡುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್‌ಗೆ ಬೆಂಗಳೂರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ

7) ಏನಪ್ಪಾ! ಆರ್ಯವರ್ಧನ್‌ಗೆ ಅನು ಮಾತ್ರ ಅನ್ಕೊಂಡ್ರೆ ಊರ್‌ ಹುಡ್ಗಿರೆಲ್ಲಾ ಫ್ಯಾನ್ಸ್!

ವರ್ಧನ್ ಗ್ರೂಪ್ ಆಫ್ ಕಂಪನಿ ಮಾಲಿಕ ಆರ್ಯವರ್ಧನ್ 45 ವರ್ಷದ ಉದ್ಯಮಿ, ವಯಸ್ಸಿಗೆ ತಕ್ಕಂತೆ ಘನತೆ, ಗಾಂಭೀರ್ಯ, ಪ್ರಬುದ್ಧತೆ ಇರುವ ವ್ಯಕ್ತಿ. ಇತ್ತ ಇನ್ನೂ ಕಾಲೇಜು ಓದುತ್ತಿರುವ ಅನು ಇನ್ನೂ ಹುಡುಗಾಟಿಕೆ ಬುದ್ಧಿಯಿರುವ ಮುದ್ಮುದ್ದು ಹುಡುಗಿ. ಇವರಿಬ್ಬರ ನಡುವೆ ಪರಿಚಯ, ಸ್ನೇಹ, ಆತ್ಮೀಯತೆ ರೋಮಾಂಚನ ಹುಟ್ಟಿಸುವಂತಿದೆ.

8) ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

9) 'ಬಿಎಸ್‌ವೈಗೆ ಅಮಿತ್ ಶಾ ಅವರ ಕಣ್ಣು ನೋಡುವ ಧೈರ್ಯವಿಲ್ಲ'..!

ಏಕ ಭಾಷೆಯನ್ನು ಹೇರುವ ಮೂಲಕ ಬಿಜೆಪಿ ದೇಶದ ಬಹುತ್ವವನ್ನು ನಾಶ ಮಾಡಲು ಹೊರಟಿದೆ. ಇದನ್ನು ಪ್ರಜ್ಞಾವಂತ ನಾಗರೀಕರು ವಿರೋಧಿಸಬೇಕಾಗಿದೆ. ದೇಶದ ಬಹುತ್ವ ನಾಶವಾದರೆ ದೇಶ ಏಕ ಸಂಸ್ಕೃತಿಯತ್ತ ಸಾಗಿ ಅದು ಸರ್ವಾಧಿಕಾರಕ್ಕೆ ಎಡೆ ಮಾಡುತ್ತದೆ. ಇದು ದೇಶಕ್ಕೆ ಅಪಾಯಕಾರಿ ಎಂದು ನ್ಯಾಯವಾದಿ, ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೋಳಿ ಹೇಳಿದ್ದಾರೆ.

10) ಭಾರತದೊಂದಿಗೆ ವ್ಯಾಪಾರ: ಟ್ರಂಪ್ ಏಕಾಏಕಿ ಹೊಸ ಅವತಾರ!

ಪರಸ್ಪರ ಸುಂಕ ಏರಿಕೆ ಯುದ್ಧದಲ್ಲಿ ನಿರತರಾಗಿದ್ದ ಅಮೆರಿಕ-ಭಾರತ, ಇದೀಗ ಉತ್ತಮ ವ್ಯಾಪಾರ ಸಂಬಂಧ ಹೊಂದುವತ್ತ ಹೆಜ್ಜೆ ಹಾಕಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮತುಕತೆ ವೇಳೆ,  ಉತ್ತಮ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಕುರಿತು ಮಾತುಕತೆ ನಡೆಸಿದ್ದಾರೆ.