ಬೆಂಗಳೂರು(ಸೆ.25): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಮುಗಿದರೂ ಚುಟುಕು ಕ್ರಿಕೆಟ್ ಇನ್ನು ಸದ್ದು ಮಾಡುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್‌ಗೆ ಬೆಂಗಳೂರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭಾರತದ ಗೆಲುವಿಗೆ ಭಂಗ; ಸರಣಿ ಸಮಬಲ!

ಚಿನ್ನಸ್ವಾಮಿಯಲ್ಲಿ ನಡೆದ ಅಂತಿಮ ಟಿ20 ಪಂದ್ಯಕ್ಕೂ ಮುನ್ನ ಬೆಂಗಳೂರು ಪೊಲೀಸರು ಟ್ವೀಟ್  ಮೂಲಕ ಗಮನಸೆಳೆದಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಮಿತಿ ಮೀರಿದ ವೇಗಕ್ಕೆ ಖಂಡಿತ ನಾವು ದಂಡ ಹಾಕುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. 

 

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳಪೆ ಬ್ಯಾಟಿಂಗ್; ಟೀಂ ಇಂಡಿಯಾ ವಿರುದ್ಧ ಆಕ್ರೋಶ!

ಪೊಲೀಸರ ಟ್ವೀಟ್‍‌ಗೆ ಬೆಂಗಳೂರಿಗರು ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆಯಲ್ಲಿ ಅತೀ ವೇಗ ಬಿಟ್ಟು ನಿಧಾನವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಸ್ಪೀಡ್ ಹೋಗಲ್ಲ, ಉತ್ತಮ ರೀತಿಯಲ್ಲಿ ವರ್ತಿಸಲು ನಿಮ್ಮ ಪೊಲೀಸರಿಗೆ ಹೇಳಿ, ಟ್ವೀಟ್ ಮಾಡಿ ಕಾಲ ಕಳೆಯಬೇಡಿ ಎಂದು  ಬೆಂಗಳೂರಿಗರು ಪೊಲೀಸರನ್ನು ಟ್ರೋಲ್ ಮಾಡಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 134  ರನ್ ಸಿಡಿಸಿತ್ತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಸೌತ್ ಆಫ್ರಿಕಾ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡದ ಜೊತೆ ಕಿಚ್ಚನ ಪ್ರಯಾಣ; ಸರ್ಪ್ರೈಸ್ ನೀಡಿದ ಪೈಲ್ವಾನ!

ಬೆಂಗಳೂರು ಪಂದ್ಯ ಗೆದ್ದುಕೊಂಡ ಸೌತ್ ಆಫ್ರಿಕಾ ತಂಡ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು. ಈ ಮೂಲಕ ಟ್ರೋಫಿ ಹಂಚಿಕೊಂಡಿತು. ಧರ್ಮಶಾಲಾದಲ್ಲಿ ಆಯೋಜಿಸಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು.  ಮೊಹಾಲಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವು ಸಾಧಿಸಿತ್ತು.