ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ದೌಡು| ಮಲೇಷ್ಯಾ ಪ್ರವಾಸದಿಂದ ವಾಪಸ್ಸಾದ ಕುಮಾರಸ್ವಾಮಿ| ಡಿಕೆಸಿ ಬಂಧನದ ಸುದ್ದಿ ತಿಳಿದು ಗೌಡರ ನಿವಾಸಕ್ಕೆ ಧಾವಿಸಿದ ಎಚ್ಡಿಕೆ| ಡಿಕೆಶಿ ಬೆನ್ನಿಗೆ ನಿಲ್ಲುವ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಅಪ್ಪ-ಮಗ ಚರ್ಚೆ 

ಬೆಂಗಳೂರು, [ಸೆ.03]: ಮನಿ ಲಾಂಡರಿಂಗ್ ಪ್ರಕರಣದಲ್ಲಿ ನವದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸುತ್ತಿದ್ದಂತೆಯೇ ಇತ್ತ ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ದೌಡಾಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗ ಡಿಕೆಶಿ ಅರೆಸ್ಟ್ ಸುದ್ದಿ ಕೇಳಿ ತಾಯಿ ಗೌರಮ್ಮ ಅಸ್ವಸ್ಥ

ಮಲೇಷ್ಯಾ ಪ್ರವಾಸದಿಂದ ಇಂದು [ಮಂಗಳವಾರ] ಬೆಂಗಳೂರಿಗೆ ವಾಪಸ್ಸಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ದಿಢೀರ್ ದೇವೇಗೌಡರನ್ನು ಭೇಟಿ ಮಾಡಲು ಹೋಗಿದ್ದಾರೆ.

ಈ ಎರಡೇ ಎರಡು ಪ್ರಶ್ನೆಯೇ ಡಿಕೆಶಿ ಅರೆಸ್ಟ್ ಆಗಲು ಕಾರಣವಾಯ್ತು..!

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿರುವ ಕುಮಾರಸ್ವಾಮಿ ಅವರು ಡಿಕೆಶಿ ಬೆನ್ನಿಗೆ ನಿಲ್ಲಬೇಕೋ ಬೇಡವೋ? ಎನ್ನುವ ಪಕ್ಷದ ನಿಲುವಿನ ಬಗ್ಗೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಥ್ಯಾಂಕ್ಸ್ ಬಿಜೆಪಿ ಫ್ರೆಂಡ್ಸ್... ಬಂಧನದ ನಂತರ ಡಿಕೆಶಿ ಮೊದಲ ಮಾತು!

ಡಿಕೆಶಿ ಅರೆಸ್ಟ್ ಖಂಡಿಸಿ ಈಗಾಗಲೇ ರಾಜ್ಯಾದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ರಾಮನಗರ ಹಾಗೂ ಡಿಕೆಶಿ ಕ್ಷೇತ್ರ ಕನಕಪುರದಲ್ಲಿ ಮೂರ್ನಾಲ್ಕು KSRTC ಬಸ್ ಗಳಿಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಾಳೆ [ಬುಧವಾರ] ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ [ಕೆಪಿಸಿಸಿ] ಸೂಚನೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಕೇಂದ್ರಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ.