ಥ್ಯಾಂಕ್ಸ್ ಬಿಜೆಪಿ ಫ್ರೆಂಡ್ಸ್... ಬಂಧನದ ನಂತರ ಡಿಕೆಶಿ ಮೊದಲ ಮಾತು!
ಬಿಜೆಪಿ ನಾಯಕರಿಗೆ ಗುಡ್ ಲಕ್ ಹೇಳಿದ ಡಿಕೆಶಿ/ ನಾನು ಎಲ್ಲಿಗೂ ಓಡಿ ಹೋಗಲ್ಲ/ ನಾನು ಹೇಡಿ ಅಲ್ಲ/ ದೆಹಲಿ ಇಡಿ ಕಚೇರಿ ಎದುರು ಹೈಡ್ರಾಮಾ
ನವದೆಹಲಿ[ಸೆ. 03] ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧನ ಮಾಡಿದ್ದರೂ ಮಾಧ್ಯಮಗಳ ಮುಂದೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹೊರಕ್ಕೆ ಬಂದ ಡಿಕೆಶಿ ಎಂದಿನ ಗತ್ತಿನಲ್ಲಿಯೇ ಕೈ ಮೇಲಕ್ಕೆ ಎತ್ತಿ ಮುಂದೆ ನಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್: ಡಿಕೆ ಶಿವಕುಮಾರ್ ಅರೆಸ್ಟ್
ಇದೊಂದು ರಾಜಕೀಯ ಷಡ್ಯಂತ್ರ.. ಬಹಳ ಪ್ರಯತ್ನ ಪಟ್ಟ ನನ್ನ ಬಿಜೆಪಿ ಸ್ನೇಹಿತರಿಗೆ ಒಳ್ಳೆಯದಾಗಲಿ.. ನಾನು ಎಲ್ಲವನ್ನು ಎದರಿಸುತ್ತೇನೆ.. ನಾನು ಹೇಡಿ ಅಲ್ಲ.. ಇದೊಂದು ರಾಜಕೀಯ ಕುತಂತ್ರ ಎಂದು ಹೇಳುವಷ್ಟರಲ್ಲಿ ದೆಹಲಿ ಪೊಲೀಸರು ಮತ್ತು ಇಡಿ ಅಧಿಕಾರಿಗಳು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ತನಿಖೆಗೆ ಡಿಕೆ ಶಿವಕುಮಾರ್ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಇಡಿ ಅವರನ್ನು ಬಂಧಿಸಿದೆ. ಬಂಧನದ ನಂತರ ನವದೆಹಲಿಯ ಇಡಿ ಕಚೇರಿ ಮುಂದೆ ಸೇರಿದ್ದ ಅಪಾರ ಬೆಂಬಲಿಗರು ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.