ದೀಪಾವಳಿ ಸಂಭ್ರಮದಲ್ಲಿ ಜನ, ಟಿಪ್ಪು ಹೋರಾಟಕ್ಕೆ ವಾಟಾಳ್ ಬಣ, ಅ.27ರ ಟಾಪ್ 10 ಸುದ್ದಿ!
ದೇಶದೆಲ್ಲೆಡೆ ದೀಪಾವಳಿ ಹಬ್ಬದ ಆಚರಣೆ ನಡೆಯುತ್ತಿದೆ. ಇದೇ ವೇಳೆ ಅಯೋಧ್ಯೆಯಲ್ಲಿ ದೀಪಾವಳಿಗೆ ಗಿನ್ನೆಸ್ ದಾಖಲೆ ಬರೆಯಲಾಗಿದೆ. ದೀಪಾವಳಿ ಸಂಭ್ರಮದಲ್ಲೂ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ದೆಹಲಿಯ ಗೆಸ್ಟ್ ಹೌಸ್ ತ್ಯಜಿಸುವಂತೆ ದೇವೇಗೌಡರಿಗೆ ಸೂಚನೆ ನೀಡಲಾಗಿದೆ. ಇತ್ತ ಬಿಜೆಪಿ ಸರ್ಕಾರ ಕೆಡವಲು ಬಿಡುವುದಿಲ್ಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಭಾನುವಾರ(ಅ.27) ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
1) ದಿಲ್ಲಿ ಗೆಸ್ಟ್ ಹೌಸ್ ತ್ಯಜಿಸಲು ದೇವೇಗೌಡಗೆ ಸೂಚನೆ!
ಲ್ಯೂಟನ್ಸ್ ದೆಹಲಿಯ ವಿಟಲ್‌ಭಾಯ್ ಪಟೇಲ್ ಹೌಸ್‌ನಲ್ಲಿ ನೀಡಲಾಗಿರುವ ಗೆಸ್ಟ್ ಹೌಸ್ ಖಾಲಿ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿಯಾಗಿರುವುದರಿಂದ ಸಫ್ದರ್‌ಜಂಗ್‌ನಲ್ಲಿರುವ ಬಂಗಲೆಯಲ್ಲಿ ಉಳಿದುಕೊಳ್ಳುವ ಅವಕಾಶವನ್ನು ದೇವೇಗೌಡರಿಗೆ ನೀಡಲಾಗಿದೆ.
2) ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ: ಎಚ್‌ಡಿಕೆ ಅಚ್ಚರಿ ಹೇಳಿಕೆ!
ಉಪಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಹೊಂದಲಿದ್ದು, ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವವಾಗಲಿದೆ ಎಂಬ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಆಘಾತ ನೀಡಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಪತನಗೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
3) ಡಾಕ್ಟರ್ ವೇಷದಲ್ಲಿ ಹೋಗಿ ಡಿಕೆಶಿ ಭೇಟಿಯಾಗಿದ್ದ ಪರಂ!
ತಿಹಾರ್ ಜೈಲಿನ ಪೊಲೀಸರು ಪ್ರತಿಯೊಂದಕ್ಕೂ ಕಾನೂನು ಮಾತನಾಡುತ್ತಾರೆ. ಯಾರೊಬ್ಬರೂ ನನ್ನ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಆಸ್ಪತ್ರೆಗೆ ಕರೆತಂದಾಗ ಡಾ.ಜಿ. ಪರಮೇಶ್ವರ್ ಅವರನ್ನು ಡಾಕ್ಟರ್ ಎಂದು ಹೇಳಿ ಒಳಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೆ. ಸೂಟು ಬೂಟು ಧರಿಸಿ ಒಂದು ಸ್ಟೆತಸ್ಕೋಪ್ ಹಾಕಿಕೊಂಡು ಬನ್ನಿ ಎಂದು ಹೇಳಿದ್ದೆ. ಹಾಗೆ ಬಂದು ಭೇಟಿ ಮಾಡಿಕೊಂಡು ಹೋದರು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
4) ಟಿಪ್ಪು ಹೆಸರಿನ ರೈಲು ಸಂಚಾರ ರದ್ದು? ಎಚ್ಚರಿಕೆ
ಬಿಜೆಪಿ ಸರ್ಕಾರ ಟಿಪ್ಪು ರೈಲು ಸಂಚಾರವನ್ನು ಸ್ಥಗಿತಗೊಳಿಸಿದರೆ ಹಾಗೂ ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯವನ್ನು ತೆಗೆದರೆ ಕರ್ನಾಟಕದಲ್ಲಿ ಕ್ರಾಂತಿ ಆಗುತ್ತದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
5) ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್ ದಾಖಲೆ!
ದೀಪಾವಳಿ ನಿಮಿತ್ತ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶುಕ್ರವಾರ ಸಂಜೆ 5.4 ಲಕ್ಷ ದೀಪಗಳನ್ನು ಸರಯೂ ನದಿ ದಂಡೆಯಲ್ಲಿ ಬೆಳಗುವ ಮೂಲಕ ಗಿನ್ನೆಸ್ ವಿಶ್ವದಾಖಲೆ ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನದಿ ದಂಡೆಯ ‘ರಾಮ್ ಕಿ ಪೈಡಿ’ಯಲ್ಲಿ ಈ ದೀಪಗಳನ್ನು ಬೆಳಗಲಾಯಿತು.
6) ಸಮಸ್ತ ಭಾರತೀಯರಿಗೆ ದೀಪಾವಳಿ ಹಬ್ಬಕ್ಕ ಶುಭಕೋರಿದ ವಿಶ್ವ ಕ್ರಿಕೆಟರ್ಸ್!
ದೇಶೆದೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಜೋರಾಗಿದೆ. ಮನೆ ಮನೆ ದೀಪಗಳಿಂದ ಅಲಂಕಾರ ಗೊಂಡಿದ್ದು, ಎಲ್ಲರಲ್ಲಿ ಹೊಸ ಚೈತನ್ಯ ಮೂಡಿದೆ. ಕತ್ತಲೆಯನ್ನು ಹೊಡೆದೋಡಿಸಿ, ಬಾಳಲ್ಲಿ ಬೆಳಗಿಸುವ ಈ ಹಬ್ಬ ಹಲವು ವಿಶೇಷತೆಗಳಿಂದ ಕೂಡಿದೆ. ಭಾರತದ ಅತೀ ದೊಡ್ಡ ಹಬ್ಬಗಳಲ್ಲೊಂದಾದ ದೀಪಾವಳಿಗೆ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಶುಭಕೋರಿದ್ದಾರೆ.
7) ಏನಿದು ಗುಸುಗುಸು; ಪ್ರಗ್ನೆಂಟ್ ಅಂತೆ ಬಿಪಾಶಾ ಬಸು!?
ಮಾದಕ ಚೆಲುವೆ ಬಿಪಾಶಾ ಬಸು ಬಗ್ಗೆ ಪ್ರಗ್ನೆನ್ಸಿ ರೂಮರ್ ಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಬಿಪಾಶಾ ದೀಪಾವಳಿಗಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಲ್ಲಿ ಅವರ ಹೊಟ್ಟೆ ತುಸು ದಪ್ಪವಾದಂತೆ ಕಾಣಿಸುತ್ತದೆ. ಇದನ್ನು ನೋಡಿದ ಅಭಿಮಾನಿಗಳು ವಿಶ್ ಮಾಡಲು ಆರಂಭಿಸಿದ್ದಾರೆ.
8) ದೀಪಾವಳಿಗೆ ವಿಶ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ 'ಒಡೆಯ'!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂತೂ ಇಂತೂ ಶೂಟಿಂಗ್ ಮುಗಿತು. ಆದರೆ ಚಿತ್ರತಂಡ ಪೋಸ್ಟರ್ ಬಿಟ್ರೆ ಏನೂ ಸುಳಿವು ನೀಡುತ್ತಿಲ್ವಲ್ಲಾ ಅಂತ ಕಾಯ್ತಾ ಇದ್ದವರಿಗೆ ಸ್ವತಃ ದಾಸನೇ ಗುಡ್ ನ್ಯೂಸ್ ನೀಡಿದ್ದಾರೆ.
9) ದೀಪಾವಳಿ : ಚಿನಿವಾರ ಪೇಟೆಯಲ್ಲಿ ನಿರೀಕ್ಷೆಗೂ ಮೀರಿ 30 ಟನ್‌ನಷ್ಟು ಚಿನ್ನ ಮಾರಾಟ
ದೀಪಾವಳಿ ಹಬ್ಬದ ಧನ್‌ತೇರಸ್ ಪ್ರಯುಕ್ತ ನಿರೀಕ್ಷೆಗೂ ಮೀರಿ 30 ಟನ್ ಚಿನ್ನಾಭರಣ ಮಾರಾಟವಾಗಿದೆ ಎಂದು ಭಾರತೀಯ ಚಿನ್ನದ ಪೇಟೆ ಹಾಗೂ ಚಿನ್ನಾಭರಣ ಅಸೋಸಿಯೇಷನ್ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ತಿಳಿಸಿದ್ದಾರೆ.
10) ಬಂಪರ್ ಸೇಲ್: ಒಂದೇ ದಿನ 600 ಬೆಂಝ್ ಕಾರು ಸೇಲ್!
ಆರ್ಥಿಕ ಹಿಂಜರಿತ ಇದ್ದರೂ ಧನ್‌ತೆರಾಸ್ ದಿನ ದಾಖಲೆಯ ಐಷಾರಾಮಿ ಕಾರು ಖರೀದಿಸಿದ ಜನರು | ಚಿನ್ನಾಭರಣ, ಬೆಳ್ಳಿ ಹಾಗೂ ಇನ್ನಿತರ ಬೆಲೆ ಬಾಳುವ ಆಭರಣಗಳ ಖರೀದಿಗೆ ಧನ್‌ತೆರಾಸ್ ಪ್ರಶಸ್ತ ದಿನ ಎಂಬುದು ಉತ್ತರ ಮತ್ತು ದಕ್ಷಿಣ ಭಾರತೀಯರ ನಂಬಿಕೆಯಾಗಿದೆ.