ಅಯೋಧ್ಯೆ (ಅ. 27): ದೀಪಾವಳಿ ನಿಮಿತ್ತ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶುಕ್ರವಾರ ಸಂಜೆ 5.4 ಲಕ್ಷ ದೀಪಗಳನ್ನು ಸರಯೂ ನದಿ ದಂಡೆಯಲ್ಲಿ ಬೆಳಗುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ಮಾಡಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನದಿ ದಂಡೆಯ ‘ರಾಮ್‌ ಕಿ ಪೈಡಿ’ಯಲ್ಲಿ ಈ ದೀಪಗಳನ್ನು ಬೆಳಗಲಾಯಿತು. ಮುಖ್ಯ ಅತಿಥಿಯಾಗಿ ಫಿಜಿ ದೇಶದ ಭಾರತೀಯ ಮೂಲದ ಮಂತ್ರಿ ವೀಣಾ ಭಟ್ನಾಗರ್‌ ಹಾಗೂ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರೂ ಪಾಲ್ಗೊಂಡಿದ್ದರು. ಮೊದಲ ದೀಪವನ್ನು ಈ ಮೂರೂ ಗಣ್ಯರು ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹರ್ಯಾಣ ಸಿಎಂ ಆಗಿ ಖಟ್ಟರ್ ಡಿಸಿಎಂ ಆಗಿ ದುಷ್ಯಂತ್ ಶಪಥ

ಸಾವಿರಾರು ಜನ ಪಾಲ್ಗೊಂಡಿದ್ದ ಈ ಸಮಾರಂಭವು ದೀಪಗಳಿಂದ ಝಗಮಗಿಸಿ ಗಮನ ಸೆಳೆಯಿತು. 2017 ರಿಂದಲೇ ಇಲ್ಲಿ ದೀಪ ಬೆಳಗುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ದಾಖಲೆಯ 3 ಲಕ್ಷ ದೀಪ ಬೆಳಗಲಾಗಿತ್ತು. ಈ ದಾಖಲೆ ಮುರಿವ ಉದ್ದೇಶದಿಂದ ಸರ್ಕಾರ ಈ ಬಾರಿ 5.4 ಲಕ್ಷ ದೀಪಗಳನ್ನು ತಂದಿರಿಸಿತ್ತು. ಗಿನ್ನೆಸ್‌ ದಾಖಲೆ ಪುಸ್ತಕದ ಅಧಿಕಾರಿಗಳು ದೀಪ ಬೆಳಗುವುದನ್ನು ವೀಕ್ಷಿಸಿದ್ದು, ಅಧಿಕೃತವಾಗಿ ದಾಖಲೆ ಪುಸ್ತಕದಲ್ಲಿ ಸೇರಿಸುವುದೊಂದೇ ಬಾಕಿ ಇದೆ.

ಎಲ್ಲೆ ಮೀರದೇ ಜಯ- ಯೋಗಿ:

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್‌, ‘ರಾಮನ ನಡೆಯನ್ನು ಅನುಸರಿಸಿ, ಯಾವುದೇ ಎಲ್ಲೆಗಳನ್ನು ಮೀರದೇ ಜಯ ಸಾಧಿಸಲು ಅವಕಾಶವಿದೆ’ ಎಂದು ಮಾರ್ಮಿಕವಾಗಿ ಹೇಳಿದರು. ಈ ಮೂಲಕ ಅಯೋಧ್ಯೆ ರಾಮಜನ್ಮಭೂಮಿ ವಿವಾದದಲ್ಲಿ ರಾಮಮಂದಿರ ಕಟ್ಟುವ ಪರ ತೀರ್ಪು ಬರಲಿದೆ ಎಂದು ಪರೋಕ್ಷವಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ: