ದಿಲ್ಲಿ ಗೆಸ್ಟ್ ಹೌಸ್ ತ್ಯಜಿಸಲು ದೇವೇಗೌಡಗೆ ಸೂಚನೆ
ದೆಹಲಿ ಗೆಸ್ಟ್ ಹೌಸ್ ಖಾಲಿ ಮಾಡುವಂತೆ ದೇವೇಗೌಡರಿಗೆ ಕೇಂದ್ರದ ಸೂಚನೆ | ಮಾಜಿ ಪ್ರಧಾನಿಯಾಗಿರುವುದರಿಂದ ಸಫ್ದರ್‌ಜಂಗ್‌ನಲ್ಲಿರುವ ಬಂಗಲೆಯಲ್ಲಿ ಉಳಿದುಕೊಳ್ಳುವ ಅವಕಾಶ ನೀಡಲಾಗಿತ್ತು
ನವದೆಹಲಿ (ಅ. 27): ಲ್ಯೂಟನ್ಸ್ ದೆಹಲಿಯ ವಿಟಲ್‌ಭಾಯ್ ಪಟೇಲ್ ಹೌಸ್‌ನಲ್ಲಿ ನೀಡಲಾಗಿರುವ ಗೆಸ್ಟ್ ಹೌಸ್ ಖಾಲಿ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿಯಾಗಿರುವುದರಿಂದ ಸಫ್ದರ್‌ಜಂಗ್‌ನಲ್ಲಿರುವ ಬಂಗಲೆಯಲ್ಲಿ ಉಳಿದುಕೊಳ್ಳುವ ಅವಕಾಶವನ್ನು ದೇವೇಗೌಡರಿಗೆ ನೀಡಲಾಗಿದೆ.
ನಾನು ಮಾಜಿ ಪ್ರಧಾನಿ ಎಂಬುದೇ ಜನರಿಗೆ ಮರೆತು ಹೋಗಿದೆ: ದೇವೇಗೌಡ
ಅಧಿಕೃತ ನಿವಾಸದ ಜತೆಗೆ ಅವರು ಹಲವು ವರ್ಷಗಳಿಂದ ಗೆಸ್ಟ್ ಹೌಸ್ ಕೂಡ ಕೂಡ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ಗೆಸ್ಟ್ ಹೌಸ್ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಜೆಡಿಎಸ್ ರಾಷ್ಟಾ್ರಧ್ಯಕ್ಷರಾಗಿರುವ ದೇವೇಗೌಡರು, ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂಸ ಸ್ಫರ್ಧಿಸಿ ಸೋಲನುಭವಿಸಿದ್ದರು.
ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ: