ಬಂಪರ್ ಸೇಲ್: ಒಂದೇ ದಿನ 600 ಬೆಂಝ್ ಕಾರು ಸೇಲ್!
ಆರ್ಥಿಕ ಹಿಂಜರಿತ ಇದ್ದರೂ ಧನ್‌ತೆರಾಸ್ ದಿನ ದಾಖಲೆಯ ಐಷಾರಾಮಿ ಕಾರು ಖರೀದಿಸಿದ ಜನರು | ಚಿನ್ನಾಭರಣ, ಬೆಳ್ಳಿ ಹಾಗೂ ಇನ್ನಿತರ ಬೆಲೆ ಬಾಳುವ ಆಭರಣಗಳ ಖರೀದಿಗೆ ಧನ್‌ತೆರಾಸ್ ಪ್ರಶಸ್ತ ದಿನ ಎಂಬುದು ಉತ್ತರ ಮತ್ತು ದಕ್ಷಿಣ ಭಾರತೀಯರ ನಂಬಿಕೆಯಾಗಿದೆ.
ಮುಂಬೈ (ಅ. 27): ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಕಳೆದ 44 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಟೋಮೊಬೈಲ್ ವಲಯ ಕುಸಿದಿದೆ ಎಂಬ ವರದಿಗಳ ಹೊರತಾಗಿಯೂ, ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್, ಒಂದೇ ದಿನ 600 ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಇದೇ ವರ್ಷದ ದಸರಾ ಸೀಸನ್‌ನಲ್ಲಿ ಒಂದೇ ದಿನ 200 ಕಾರುಗಳನ್ನು ಮಾರಾಟ ಮಾಡಿ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಮುರಿದಿದೆ.
ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್ ರೈಡ್ !
ಚಿನ್ನಾಭರಣ, ಬೆಳ್ಳಿ ಹಾಗೂ ಇನ್ನಿತರ ಬೆಲೆ ಬಾಳುವ ಆಭರಣಗಳ ಖರೀದಿಗೆ ಧನ್‌ತೆರಾಸ್ ಪ್ರಶಸ್ತ ದಿನ ಎಂಬುದು ಉತ್ತರ ಮತ್ತು ದಕ್ಷಿಣ ಭಾರತೀಯರ ನಂಬಿಕೆಯಾಗಿದೆ. ಇದೇ ಕಾರಣದಿಂದ ಶುಕ್ರವಾರ ಒಂದೇ ದಿನ ಭಾರತದಾದ್ಯಂತ 600 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಮರ್ಸಿಡೀಸ್ ಬೆಂಜ್ ಕಾರು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪೈಕಿ ದೆಹಲಿ ರಾಷ್ಟ್ರ ರಾಜಧಾನಿ ಭಾಗದಲ್ಲಿ 250ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ ಎಂದು ಮರ್ಸಿಡೀಸ್ ಕಾರು ಸಂಸ್ಥೆ ಹೇಳಿದೆ. ಇನ್ನು, ದೆಹಲಿ, ಪಂಜಾಬ್, ಪಶ್ಚಿಮ ವಲಯದ ಮುಂಬೈ, ಪುಣೆ ಹಾಗೂ ಗುಜರಾತ್‌ನಲ್ಲಿ ಮರ್ಸಿಡೀಸ್ ಕಾರು ಖರೀದಿಗೆ ಗ್ರಾಹಕರು ಹೆಚ್ಚಿನ ಒಲವು ಹೊಂದಿದ್ದಾರೆ.
ಮತ್ತೊಂದೆಡೆ, ಮುಂದಿನ ವರ್ಷದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಜರ್ಮನಿ ಮೂಲದ ಬಹು ನಿರೀಕ್ಷಿತ ಮರ್ಸಿಡೀಸ್ ಬೆಂಜ್‌ನ ನೂತನ ಮಾದರಿಯ ಎಸ್‌ಯುವಿ ಜಿಎಲ್‌ಇ ಕಾರಿನ ಬುಕ್ಕಿಂಗ್ ಶನಿವಾರದಿಂದಲೇ ಆರಂಭವಾಗಿದೆ. 2020ರ ಅವಧಿಯಲ್ಲಿ ನೂತನ ಮಾದರಿಯ ಜಿಎಲ್‌ಇ ಎಸ್‌ಯುವಿ ಕಾರು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ: