ನವದೆಹಲಿ(ಫೆ.15): ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಭಾವಚಿತ್ರವನ್ನು CRPF ಬಿಡುಗಡೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ CRPF, ದೇಶಕ್ಕಾಗಿ ಅಪ್ರತಿಮ ಬಲಿದಾನಗೈದ ವೀರರು ಸದಾ ನೆನಪಿನಲ್ಲಿರುತ್ತಾರೆ ಎಂದು ತಿಳಿಸಿದೆ.

ಇನ್ನು ಪುಲ್ವಾಮಾ ಹುತಾತ್ಮರ ಪಾರ್ಥಿವ ಶರೀರ ನವದೆಹಲಿ ತಲುಪಿದ್ದು, ಅಲ್ಲಿಂದ ಹುತಾತ್ಮ ಯೋಧರ ಸ್ವಂತ ಊರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ವಾಯಸೇನೆಯ ವಿಮಾನದಲ್ಲಿ ತರಲಾದ ಪಾರ್ಥಿವ ಶರೀರಕ್ಕೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.