ನಾವು ಮರೆಯಲ್ಲ, ಕ್ಷಮಿಸೋದೂ ಇಲ್ಲ: CRPF ಟ್ವೀಟ್ ‘ಕುದಿ’!

ಸಿಆರ್​ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣ| ಘಟನೆ ನಂತರ ಮೊದಲ ಬಾರಿಗೆ ಪ್ರತಿಕ್ರಯಿಸಿದ ಸಿಆರ್​ಪಿಎಫ್| ನಾವು ಮರೆಯಲ್ಲ.. ನಾವು ಕ್ಷಮಿಸಲ್ಲ ಎಂದು ಸಿಆರ್​ಪಿಎಫ್ ಟ್ವೀಟ್| ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಪಣ ತೊಟ್ಟ ಸಿಆರ್​ಪಿಎಫ್| ಹುತಾತ್ಮ ಯೋಧರ ಕುಟುಂಬಗಳ ಜತೆ ನಾವು ನಿಲ್ಲುತ್ತೇವೆ

CRPF Tweet Over Terrorist Attack on Its Soldiers

ನವದೆಹಲಿ(ಫೆ.15): ಸಿಆರ್​ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸದಂತೆ ಸಿಆರ್​ಪಿಎಫ್ ಪ್ರತಿಕ್ರಿಯೆ ನೀಡಿದ್ದು, ಗೆಳೆಯರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪಣ ತೊಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿಆರ್​ಪಿಎಫ್, ನಾವು ನಮ್ಮ ಗೆಳೆಯರನ್ನು ಮರೆಯವುದಿಲ್ಲ, ಪಾಪಿಗಳನ್ನು ಕ್ಷಮಿಸುವುದಿಲ್ಲ ಎಂದು ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಸಹೋದ್ಯೋಗಿಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಣ ತೊಟ್ಟಿರುವ ಸಿಆರ್​ಪಿಎಫ್, ಹುತಾತ್ಮ ಯೋಧರ ಕುಟುಂಬಗಳ ಜೊತೆ ನಿಲ್ಲುವುದಾಗಿಯೂ ಹೇಳಿದೆ.

ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಕೋರನೊಬ್ಬ ಸ್ಫೋಟಕಗಳನ್ನು ಹೊತ್ತು ಸಿಆರ್​ಪಿಎಫ್ ಯೋಧರು ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ 49 ಸಿಆರ್​ಪಿಎಫ್ ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios