ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆ| ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದ ಬಿಜೆಪಿ ನಾಯಕ| ಉಗ್ರವಾದ ದಮನಕ್ಕೆ ಸುಬ್ರಮಣಿಯನ್ ಸ್ವಾಮಿ ಸಲಹೆ| ಮೂರು ಸ್ತರಗಳ ಕಾರ್ಯತಂತ್ರ ರೂಪಿಸಲು ಸ್ವಾಮಿ ಒತ್ತಾಯ| ಪಾಕಿಸ್ತಾನವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುವುದೇ ಸಮಸ್ಯೆಗೆ ಪರಿಹಾರ ಎಂದ ಸ್ವಾಮಿ|

ನವದೆಹಲಿ(ಫೆ.15):ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಪಾಕಿಸ್ತಾನದ ನಿರ್ನಾಮಕ್ಕೆ ಏನು ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನದ ಶಕ್ತಿಯನ್ನು ಕುಂದಿಸಿದರೆ, ಉಗ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಭಾರತ ತತ್​ಕ್ಷಣದ ಕ್ರಮಗಳು, ಮಧ್ಯಮಾವಧಿ ಹಾಗೂ ದೀರ್ಘಾವಧಿ ಕ್ರಮಗಳೆಂಬ ಮೂರು ಸ್ತರಗಳ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ ಎಂಬುದು ಸ್ವಾಮಿ ಸಲಹೆಯಾಗಿದೆ. 

Scroll to load tweet…

ತತ್‌ಕ್ಷಣದ ಕ್ರಮಗಳು:
ಪಾಕಿಸ್ತಾನಕ್ಕೆ ನೀಡಲಾಗಿರುವ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆಯಬೇಕು ಎಂಬುದು ಸ್ವಾಮಿ ಅವರ ಆಗ್ರಹವಾಗಿತ್ತು. ಇದೀಗ ಕೇಂದ್ರ ಸರ್ಕಾರ ಕೂಡ ಪಾಕಿಸ್ತಾನಕ್ಕೆ 1996ರಲ್ಲಿ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದಿದೆ.

ಮಧ್ಯಮಾವಧಿ ಕ್ರಮಗಳು:

1. ಪಾಕಿಸ್ತಾನದ ನೆಲದಲ್ಲಿರುವ 40 ಉಗ್ರರ ಕ್ಯಾಂಪ್​ಗಳನ್ನು ಧ್ವಂಸ ಮಾಡುವುದು. 
2. ಈ ಕ್ಯಾಂಪ್​ಗಳು ಭಾರತದಲ್ಲಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ಕೊಡುತ್ತವೆ. 
3. ಇವು ನಾಶವಾದರೆ ಉಗ್ರರ ಬೆನ್ನೆಲುಬು ಮುರಿದಂತಾಗುತ್ತದೆ ಎಂಬುದು ಸ್ವಾಮಿ ಅಭಿಪ್ರಾಯವಾಗಿದೆ.

Scroll to load tweet…

ದೀರ್ಘಾವಧಿಯ ಕ್ರಮಗಳು: 

1. ಪಾಕಿಸ್ತಾನವನ್ನು ನಾಲ್ಕು ಭಾಗಗಳಾಗಿ ವಿಭಜಿಸುವುದು. 
2. ಪ್ರತ್ಯೇಕ ಬಲೂಚಿಸ್ತಾನದ ಹೋರಾಟಕ್ಕೆ ಭಾರತ ಅಧಿಕೃತ ಬೆಂಬಲ. 
3. ಭಾರತದಲ್ಲಿ ಪಾಕ್ ರಾಯಭಾರ ಕಚೇರಿ ಬದಲು ಬಲೂಚಿಸ್ತಾನ ರಾಯಭಾರ ಕಚೇರಿಗೆ ಅವಕಾಶ.

Scroll to load tweet…

ಇದಿಷ್ಟೇ ಅಲ್ಲದೇ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಭಾರತ ಕೂಡಲೇ ಕಡಿದುಕೊಳ್ಳಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಇದೇ ವೇಳೆ, ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ ಘಟನೆಯು ಬಿಜೆಪಿಯ ವೈಫಲ್ಯ ಎಂದೂ ಸ್ವಾಮಿ ಟೀಕಿಸಿರುವುದು ಅಚ್ಚರಿಗೆ ಕಾರಣವಾಗಿದೆ.