ಶ್ರೀನಗರ(ಫೆ.15): ಪುಲ್ವಾಮ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ  CRPF ಯೋಧರ ಪಾರ್ಥಿವ ಶರೀರಕ್ಕೆ, ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಜಿಪಿ ದಿಲ್ಬಾಗ್ ಸಿಂಗ್ ಹೆಗಲು ನೀಡಿದರು.

ಹುತಾತ್ಮರಾದ 41 CRPF ಯೋಧರ ಪಾರ್ಥಿವ ಶರೀರರಕ್ಕೆ ಶ್ರದ್ದಾಂಜಲಿ ಸಲ್ಲಿಸಿದ ನಂತರ, ಪಾರ್ಥಿವ ಶರೀರಗಳನ್ನು ಸ್ವಗ್ರಾಮಕ್ಕೆ ರವಾನಿಸಲಾಗುತ್ತದೆ. ಶ್ರದಾಂಜಲಿ ವೇಳೆ CRPF ಶಿಬಿರದ ಬಳಿ ‘ವೀರ ಜವಾನ್ ಅಮರ್ ರಹೇ’ ಎಂಬ ಘೋಷಣೆಗಳು ಮೊಳಗಿದವು.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ , CRPF ನಿರ್ದೇಶಕ ಆರ್.ಆರ್.ಭಟ್ನಾಗರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಪರಿಸ್ಥಿತಿಯನ್ನು ಅವಲೋಕಿಸಲು ಕಾಶ್ಮೀರಕ್ಕೆ ತೆರಳಿದ್ದಾರೆ.