ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆ| ಪಾಕ್ ಹೈಕಮಿಷನರ್‌ಗೆ ಸಮನ್ಸ್ ಜಾರಿ| ಸೋಹೆಲ್ ಮಹೆಮೂದ್‌ಗೆ ಸಮನ್ಸ್ ಜಾರಿ ಮಾಡಿದ ವಿದೇಶಾಂಗ ಕಾರ್ಯದರ್ಶಿ| ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್‌ಗೆ ದೆಹಲಿಗೆ ಬರುವಂತೆ ಆದೇಶ| ಅಜಯ್ ಬಿಸಾರಿಯಾ ಅವರಿಗೆ ತುರ್ತಾಗಿ ದೆಹಲಿಗೆ ವಾಪಸ್ ಮರಳುವಂತೆ ಬುಲಾವ್|

ನವದೆಹಲಿ(ಫೆ.15): ಮಹತ್ವದ ಬೆಳವಣಿಗೆಯೊಂದರಲ್ಲಿ ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ, ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಸೋಹೆಲ್ ಮೆಹಮೂದ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದೇ ವೇಳೆ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅವರಿಗೆ ದೆಹಲಿಗೆ ಮರಳುವಂತೆ ಆದೇಶ ನೀಡಲಾಗಿದೆ.

Scroll to load tweet…

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹ್ಮದ್ ಭಯೋತ್ಪಾದಕ ಸಂಘಟನೆಯ ಕೈವಾಡ ಇರುವ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಹೈಕಮಿಷನರ್ ಅವರಿಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಘೋಖಲೆ ಸಮನ್ಸ್ ಜಾರಿ ಮಾಡಿ ಮಾತುಕತೆಗೆ ಬರುವಂತೆ ಆದೇಶಿಸಿದ್ದಾರೆ.

Scroll to load tweet…

ಇದೇ ವೇಳೆ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅವರಿಗೆ ತುರ್ತಾಗಿ ದೆಹಲಿಗೆ ವಾಪಸ್ ಮರಳುವಂತೆ ಆದೇಶ ನೀಡಲಾಗಿದ್ದು, ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.