ಪ್ರಜ್ವಲ್ ಪೆನ್‌ಡ್ರೈವ್ ಬಾಂಬ್ ಹಿಂದಿದ್ಯಾ ‘ಒಕ್ಕಲಿಗ’ ಕಾಳಗ..? ಗೌಡರ ಕೋಟೆ ಕೆಡವಲು ಅಸ್ತ್ರವಾಯ್ತಾ ವಿಡಿಯೋ ಬಾಂಬ್..?

ದೇವೇಗೌಡರು ಕಟ್ಟಿದ ಕೋಟೆ ಕೆಡವಲು ಮೊಮ್ಮಗನೇ ಅಸ್ತ್ರವಾದನಾ..?
ಅದು ದೇವೇಗೌಡರ ರಾಜಕೀಯದಾಟಕ್ಕೆ ಶಕ್ತಿ ಕೊಟ್ಟಿದ್ದ ಭದ್ರಕೋಟೆ..!
ಆ ಕೋಟೆಯ ಬಲದಿಂದಲೇ ಗೌಡರ ಕುಟುಂಬಕ್ಕೆ ರಾಜಕೀಯ ಅಸ್ತಿತ್ವ..!
 

First Published May 4, 2024, 5:32 PM IST | Last Updated May 4, 2024, 5:32 PM IST


ಒಂದು ವೀಡಿಯೊ ಬಾಂಬ್. ಅದು ಮಾಜಿ ಪ್ರಧಾನಿ ದೇವೇಗೌಡರ(HD Devegowda)ಮ್ಮಗನದ್ದು ಎನ್ನಲಾಗ್ತಿರೋ ಅಶ್ಲೀಲ ವಿಡಿಯೋ ಬಾಂಬ್(Prajwal Revanna Obscene Video Case)ಆ ಬಾಂಬ್'ಗೆ ದೇವೇಗೌಡರ ಕೋಟೆಯೂ ಅಲುಗಾಡ್ತಿದೆ, ಗೌಡರು ಕಟ್ಟಿದ್ದ ಒಕ್ಕಲಿಗ ಸಾಮ್ರಾಜ್ಯದಲ್ಲೂ ಕಂಪನ ಶುರುವಾಗಿದೆ. ಒಕ್ಕಲಿಗ ಸಮುದಾಯಕ್ಕೆ(vokkaliga community) ಕಳಂಕ. ಪ್ರಜ್ವಲ್ ರೇವಣ್ಣನದ್ದು(Prajwal Revanna)ಎನ್ನಲಾಗ್ತಿರೋ ಅಶ್ಲೀಲ ವೀಡಿಯೊ ಬಾಂಬ್ ಸ್ಫೋಟದಿಂದ ಸಮುದಾಯಕ್ಕೆ ಕಳಂಕ ಅಂಟಿಕೊಂಡಿದ್ಯಂತೆ. ಹೀಗಂತ ಹೇಳ್ತಾ ಇರೋರು ಜಿ.ದೇವೇರಾಜೇಗೌಡ.. ಹೊಳೆನರಸೀಪುರದಲ್ಲಿ ಎಚ್.ಡಿ ರೇವಣ್ಣ(HD Revanna) ಕುಟುಂಬದ ವಿರುದ್ಧ ಸಮರ ಸಾರಿರೋ ದೇವರಾಜೇಗೌಡ. ಪ್ರಜ್ವಲ್ ರೇವಣ್ಣನಿಗೆ ಸಂಬಂಧ ಪಟ್ಟಿದ್ದು ಎನ್ನಲಾಗ್ತಿರೋ 2976 ಅಶ್ಲೀಲ ವೀಡಿಯೊ ಬಾಂಬ್ ಸಿಡಿದದ್ದೂ ಆಯ್ತು, ಇಡೀ ದೇವೇಗೌಡರ ಕುಟುಂಬಕ್ಕೆ ಅಳಿಸಲಾಗದ ಕಳಂಕ ಅಂಟಿಕೊಂಡದ್ದೂ ಆಯ್ತು. ಈಗ ಈ ಪೆನ್'ಡ್ರೈವ್ ಬಾಂಬ್ ಲೋಕಸಭಾ ಚುನಾವಣೆಯ ವೇಳೆಯೇ  ಸ್ಫೋಟಗೊಂಡಿದ್ದು ಯಾಕೆ ಅನ್ನೋ ಪ್ರಶ್ನೆ ಕಾಡ್ತಿದೆ. ರಾಜಕೀಯ ಚದುರಂಗದಾಟದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಮೀರಿಸಬಲ್ಲ ಚತುರ ಮತ್ತೊಬ್ಬನಿಲ್ಲ. ರಾಜ್ಯ ರಾಜಕಾರಣದಲ್ಲಿ ಗೌಡ್ರು ಉರುಳಿಸಿರೋ ದಾಳಗಳಿಗೆ ಸಾಮ್ರಾಜ್ಯಗಳೇ ಉರುಳಿ ಬಿದ್ದಿವೆ. ಗೌಡರ ಪಟ್ಟುಗಳ ಮುಂದೆ ರಾಜಕೀಯವಾಗಿ ಕೆಲವರು ಬೂದಿಯಾದ್ರೆ, ಹಲವರು ರಾಜಕೀಯ ಸಮಾಧಿಯಾಗಿ ಹೋಗಿದ್ದಾರೆ. 

ಇದನ್ನೂ ವೀಕ್ಷಿಸಿ:  ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ!