ಕೊರೋನಾ ತಗುಲಿಸಿಕೊಂಡರೆ, ಈ ಕಂಪನಿ ಕೊಡುತ್ತೆ ದೊಡ್ಡ ಮೊತ್ತ!

ಶ್ವಾದ್ಯಂತ ಕೊರೋನಾ ವೈರಸ್‌ ಹೆಸರು ಕೇಳಿದರೆ ಭೀತಿ ಪಡುವಂಥ ಸಂದರ್ಭದಲ್ಲೇ ಇಲ್ಲೊಂದು ಕಂಪನಿ ಕೊರೋನಾ ಸೋಂಕು ತಗುಲಿಸಿಕೊಂಡರೆ ಬರೋಬ್ಬರಿ 3.40 ಲಕ್ಷ ರು. ನೀಡುವುದಾಗಿ ಘೋಷಣೆ ಮಾಡಿದೆ.

ಮಂಗಳೂರು ಬಂದರಿಗೆ ಬಂದಿದೆ ಕೊರೋನಾ ಮೀನು..! ಕೆಜಿಗೆ 2 ಸಾವಿರ..

ಮಂಗಳೂರಿನಲ್ಲಿ ಸದ್ಯ ಕೊರೋನಾ ಮೀನನ ಬಗ್ಗೆಯೇ ಮಾತು. ಸೀಫುಡ್ ಇಷ್ಟ ಪಡುವ ಕರಾವಳಿಯಲ್ಲಿ ಕೊರೋನಾ ಮೀನು ಸಿಕ್ಕಿದೆ. ಕರಾವಳಿಗರು ಈ ಮೀನನ್ನು ತಿನ್ನದಿದ್ದರೂ, ಗುಜರಾತ್ ಜನ ಮಾತ್ರ ಇಷ್ಟಪಟ್ಟು ತಿನ್ನುತ್ತಾರೆ.

ಕ್ರೀಡೆಗೂ ಕೊರೋನಾ ಕುತ್ತು ರದ್ದಾಗುತ್ತಿವೆ ಕ್ರೀಡಾ ಕೂಟಗಳು!...

ವಿಶ್ವಕಪ್‌ನಿಂದ ಐಪಿಎಲ್‌ವರೆಗೆ ಕರೋನಾದ ಪ್ರಭಾವ ಎಲ್ಲೆಡೆ ಕಂಡುಬರುತ್ತದೆ. ಒಲಿಂಪಿಕ್ಸ್‌ನಿಂದ ಐಪಿಎಲ್ವರೆಗಿನ ಎಲ್ಲಾ ಪ್ರಮುಖ ಕ್ರೀಡಾಕೂಟಗಳೂ ಕೊರೋನಾ ಹಿಡಿತದಲ್ಲಿವೆ.  ಈ ಸಾಂಕ್ರಾಮಿಕ ರೋಗ ಪ್ರತಿ ಕ್ರೀಡೆಯ ಮೇಲೂ ಪರಿಣಾಮ ಬೀರಿದೆ.ಕರೋನಾ ವೈರಸ್‌ನಿಂದಾಗಿ, ಕ್ರೀಡಾ ಸ್ಪರ್ಧೆಗಳನ್ನು ನಿರಂತರವಾಗಿ ರದ್ದುಗೊಳಿಸಲಾಗುತ್ತಿದೆ.

ಮಲೈಕಾ ಅರೋರಾರ ನ್ಯೂಡ್‌ ಜಿಮ್‌ಲುಕ್‌ ಮಾಡಿದೆ ಬಾರಿ ಸದ್ದು

ಬಾಲಿವುಡ್ ನಟಿ ಮಲೈಕಾ ಅರೋರಾ  ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರತಿಯೊಂದು ಚಲನವಲನವೂ  ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಇದೀಗ ನ್ಯೂಡ್ ಜಿಮ್ ಲುಕ್ ಭಾರಿ ಸಂಚಲ ಮೂಡಿಸಿದೆ.

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ರಾಜ್ಯಾದ್ಯಂತ ಬಾರ್‌ಗಳು ಬಂದ್!

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್‌ನಿಂದ ವೃದ್ಧ ಸಾವನ್ನಪ್ಪಿದ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಶನಿವಾರದಿಂದ ಒಂದು ವಾರ ರಾಜ್ಯಾದ್ಯಂತ ಶಾಪಿಂಗ್ ಮಾಲ್, ಬಾರ್ ಅಂಡ್ ರೆಸ್ಟೋರೆಂಟ್, ಸಭೆ ಸಮಾರಂಭಗಳನ್ನ ರದ್ದು ಮಾಡಿದ್ದಾರೆ. 

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್!

ಯುಗಾದಿಗೂ ಮುನ್ನ ಕೇಂದ್ರ ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಶೇ.4ರಷ್ಟುತುಟ್ಟಿಭತ್ಯೆ ನೀಡುವ ಸಿಹಿ ಸುದ್ದಿ ಪ್ರಕಟಿಸಿದೆ. ಹೀಗಾಗಿ ಶೇ.17ರಷ್ಟಿದ್ದ ತುಟ್ಟಿಭತ್ಯೆ ಇನ್ನು ಶೇ.21ಕ್ಕೆ ಏರಲಿದೆ. 2020ರ ಜ.1ರಿಂದಲೇ ಈ ತುಟ್ಟಿಭತ್ಯೆ ಪೂರ್ವಾನ್ವಯವಾಗಲಿದೆ.


ಬೆಂಗಳೂರಲ್ಲಿ ನಡೆಯಬೇಕಿದ್ದ RSS ಸಭೆಗೂ ಕೊರೋನಾ ಎಫೆಕ್ಟ್...

ಎಲ್ಲೆಡೆ ಮಾರಕ ಪರಿಣಾಮವನ್ನು ಉಂಟು ಮಾಡಿರುವ ಕೊರೋನಾ ಎಫೆಕ್ಟ್ ಇದೀಗ ಆರ್ ಎಸ್ ಎಸ್ ಸಭೆ ಮೇಲೂ ತಟ್ಟಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಲಾಗಿದೆ. 


ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!...

ಮುಂಬಯಿಯ ಕಾಮಾಟಿಪುರ ರೆಡ್‌ಲೈಟ್ ಏರಿಯಾ, ಕೋಲ್ಕತ್ತಾದ ಸೋನಾಗಾಚಿ ಕೆಂಪು ದೀಪ ಪ್ರದೇಶಗಳಲ್ಲೂ ಗಿರಾಕಿಗಳ ಸಂಖ್ಯೆಯಲ್ಲಿ ಊಹಿಸಲಾಗದಷ್ಟು ಇಳಿಕೆಯಾಗಿದೆ. ಇದು ಒಳ್ಳೆಯದಕ್ಕೋ ಕೆಡುಕಿಗೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಘರ್‌ವಾಲಿಗಳು‌. ರೋಗ ಹರಡದಿದ್ದರೆ ಒಳ್ಳೆಯದು. ಹಸಿದು ಸಾಯುವ ಹಾಗಾದರೆ ಕೆಟ್ಟದು! 

ಪ್ರೇಕ್ಷಕರಿಲ್ಲದ ಪಂದ್ಯ ಸಪ್ಪೆ ಸಪ್ಪೆ, ಬಾಲ್ ಹಾಕಿದವರೇ ಹೆಕ್ಕಿ ತರಬೇಕು!

ಕೊರೋನಾ ವೈರಸ್‌ ಹತೋಟಿಗೆ ಬರದಿದ್ದರೆ ಎಪ್ರಿಲ್ 15ರಿಂದ ಅಭಿಮಾನಿಗಳ ಪ್ರವೇಶ ನಿರಾಕರಿಸಿ ಪಂದ್ಯ ಆಡಿಸವು ಆಲೋಚನೆ ಬಿಸಿಸಿಐ ಮುಂದಿದೆ. ಆದರೆ ಪ್ರೇಕ್ಷಕರಿಲ್ಲದ ಪಂದ್ಯ ಸಪ್ಪೆ ಸಪ್ಪೆಯಾಗಿದೆ. ಬಾಲ್ ಹಾಕಿದವೇ ಹೆಕ್ಕಿ ತರುವ ಅನಿವಾರ್ಯತೆ ಇದೆ. ಇದಕ್ಕೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್  ನಡುವಿನ ಪಂದ್ಯವೇ ಸಾಕ್ಷಿ.

ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸಿಂಧಿಯಾಗೆ ಭೂ ಸಂಕಷ್ಟ!...

ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಭೂ ಕಂಟಕವೊಂದು ಎದುರಾಗಿದೆ. 2014ರಲ್ಲಿ ದಾಖಲಾಗಿ, 2018ರಲ್ಲಿ ಕೈಬಿಡಲಾಗಿದ್ದ ಭೂ ದಾಖಲೆಗಳ ಫೋರ್ಜರಿ ಪ್ರಕರಣದ ತನಿಖೆಯನ್ನು ಮಧ್ಯಪ್ರದೇಶ ಸರ್ಕಾರ ಮರು ಆರಂಭಿಸಲು ಮುಂದಾಗಿದೆ. ಆದರೆ ಇದನ್ನು ರಾಜಕೀಯ ದ್ವೇಷದ ಕ್ರಮ ಎಂದು ಸಿಂಧಿಯಾ ಆಪ್ತರು ಟೀಕಿಸಿದ್ದು, ಇದಕ್ಕೆ ಕಾನೂನು ರೀತ್ಯ ತಕ್ಕ ಉತ್ತರ ನೀಡುವುದಾಗಿ ಗುಡುಗಿದ್ದಾರೆ.