ಎಣ್ಣೆ ಪ್ರಿಯರಿಗೆ ಬಿಗ್ ಶಾಕ್: ರಾಜ್ಯಾದ್ಯಂತ ಬಾರ್‌ಗಳು ಬಂದ್!

ಕೊರೋನಾ ವೈರಸ್‌ ಭೀತಿ| ರಾಜ್ಯಾದ್ಯಂತ ಒಂದು ವಾರ ಬಾರ್‌ಗಳು ಬಂದ್| ಬಾರ್ ಬಂದ್ ಮಾಡಲು ಅಬಕಾರಿ ಆಯುಕ್ತರಿಂದ ಅಧಿಕೃತ ಆದೇಶ|

All Types of Bars Closed One Week due to Coronavirus in Karnataka

ಬೆಂಗಳೂರು(ಮಾ.14): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್‌ನಿಂದ ವೃದ್ಧ ಸಾವನ್ನಪ್ಪಿದ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಶನಿವಾರದಿಂದ ಒಂದು ವಾರ ರಾಜ್ಯಾದ್ಯಂತ ಶಾಪಿಂಗ್ ಮಾಲ್, ಬಾರ್ ಅಂಡ್ ರೆಸ್ಟೋರೆಂಟ್, ಸಭೆ ಸಮಾರಂಭಗಳನ್ನ ರದ್ದು ಮಾಡಿದ್ದಾರೆ. 

'ಮದ್ಯದಿಂದ ಕೊರೋನಾ ಹೋಗಲ್ಲ, ಚಿಕನ್ ತಿಂದ್ರೆ ಕೊರೋನಾ ಬರಲ್ಲ..'!

ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅಬಕಾರಿ ಸಚಿವ ನಾಗೇಶ್ ಅವರು, ಕ್ಲಬ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಬಂದ್ ಇರಲಿವೆ. MRP ಔಟ್ ಲೆಟ್,ವೈನ್ ಶಾಪ್‌ಗಳು ತೆರೆದಿರುತ್ತವೆ ಎಂದು ಹೇಳಿದ್ದಾರೆ.

ಕೊರೋನಾ ತಾಂಡವ, ಒಂದು ಮಾಸ್ಕ್‌ಗೆ ಎಷ್ಟು? ದುರಾಸೆ ಬಿಡದ ಮೆಡಿಕಲ್ ಶಾಪ್ ಸಿಬ್ಬಂದಿ!

ಇಂದಿನಿಂದ(ಶನಿವಾರ) ಮಾರ್ಚ್ 21ರ ಮಧ್ಯರಾತ್ರಿಯವರೆಗೂ ಕ್ಲಬ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಇರಲಿವೆ. ಅಬಕಾರಿ ಕಾಯ್ದೆ 1965 ಅಡಿಯಲ್ಲಿ ಬಂದ್ ಮಾಡಲು ಸುತ್ತೋಲೆ ಹೊರಡಿಸಲಾಗಿದೆ. ಕ್ಲಬ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನ ತೆರೆಯಲು ಅವಕಾಶ ನೀಡದಂತೆ ಪೋಲಿಸ್ ಆಯುಕ್ತರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ರವಾನೆಯಾಗಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Latest Videos
Follow Us:
Download App:
  • android
  • ios