ಮಂಗಳೂರು ಬಂದರಿಗೆ ಬಂದಿದೆ ಕೊರೋನಾ ಮೀನು..! ಕೆಜಿಗೆ 2 ಸಾವಿರ

ಮಂಗಳೂರಿನಲ್ಲಿ ಸದ್ಯ ಕೊರೋನಾ ಮೀನನ ಬಗ್ಗೆಯೇ ಮಾತು. ಸೀಫುಡ್ ಇಷ್ಟ ಪಡುವ ಕರಾವಳಿಯಲ್ಲಿ ಕೊರೋನಾ ಮೀನು ಸಿಕ್ಕಿದೆ. ಏನಿದು ಕೊರೋನಾ ಮೀನು..? ತಿನ್ನಬಹುದಾ..? ಇಲ್ಲಿ ಓದಿ.

 

Corona fish found in Mangalore port

ಮಂಗಳೂರು(ಮಾ.14): ಮಂಗಳೂರಿನಲ್ಲಿ ಸದ್ಯ ಕೊರೋನಾ ಮೀನನ ಬಗ್ಗೆಯೇ ಮಾತು. ಸೀಫುಡ್ ಇಷ್ಟ ಪಡುವ ಕರಾವಳಿಯಲ್ಲಿ ಕೊರೋನಾ ಮೀನು ಸಿಕ್ಕಿದೆ. ಕರಾವಳಿಗರು ಈ ಮೀನನ್ನು ತಿನ್ನದಿದ್ದರೂ, ಗುಜರಾತ್ ಜನ ಮಾತ್ರ ಇಷ್ಟಪಟ್ಟು ತಿನ್ನುತ್ತಾರೆ.

ಬಲೆಗೆ ಬಿತ್ತು 200 ಕೆಜಿ ತೂಗುವ ಅಪರೂಪದ ಮೀನು, ಇದರ ಚಂದ ನೋಡಿ

ಕೊರೋನಾ ಭೀತಿಯ ಮಧ್ಯೆಯೇ ಮಂಗಳೂರು ಬಂದರಿಗೆ ಕೊರೋನ ಮೀನು ಬಂದಿದೆ. ಸದ್ಯ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಕೊರೋನ ಮೀನಿನದ್ದೇ ಮಾತು ಕೇಳಿ ಬಂದಿದೆ.

ಮಂಗಳೂರು: ಈ ಮೀನಿಗೂ, ಕಾರ್ಗಿಲ್‌ ಯುದ್ಧಕ್ಕೂ ಇದೆ ಸಂಬಂಧ!

ಬಲು ಅಪರೂಪದ ಜಾತಿಗೆ ಸೇರಿದ ಭಾರೀ ಮೌಲ್ಯದ ಈ ಮೀನಿಗೆ ಕೆ.ಜಿ.ಗೆ 1800 ರಿಂದ 2 ಸಾವಿರ ಮೌಲ್ಯವಿದೆ. ಕರಾವಳಿ ಭಾಗದ ಜನ ಈ ಮೀನು ತಿನ್ನೋದು ತೀರಾ ವಿರಳವಾಗಿದ್ದು, ಈ ಮೀನನ್ನು ಗುಜರಾತ್ ಸೇರಿ ಬೇರೆ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ.

ಮಲ್ಪೆಯಲ್ಲಿ ಬಲೆಗೆ ಬಿತ್ತು ಸ್ಪಾನರ್ ಕ್ರ್ಯಾಬ್..! 1 ಕೆಜಿ ತೂಗುತ್ತೆ ಈ ಏಡಿ

ಮೀನುಗಾರಿಕೆಗೂ ಕೊರೋನಾ ವೈರಸ್ ಭೀತಿ ತಟ್ಟಿದ್ದು, ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಕುಂಠಿತವಾಗಿದೆ. ವ್ಯಾಪಾರಿಗಳು ಈ ಬಗ್ಗೆ ಆತಂಕ ತೋಡಿಕೊಂಡಿದ್ದಾರೆ. ಬಂದರಿನಲ್ಲಿ ಮೀನು ಖರೀದಿ, ಹರಾಜು ಪ್ರಕ್ರಿಯೆ ಜೋರಾಗಿದ್ದರೂ ಎಂದಿಗಿಂತ ಜನ ಸಂಖ್ಯೆ ವಿರಳ ಎನ್ನುತ್ತಿದ್ದಾರೆ. 

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

Latest Videos
Follow Us:
Download App:
  • android
  • ios